ಅಪ್ರಾಪ್ತ ಬಾಲಕಿಗೆ ಅತ್ಯಾಚಾರ : ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮನವಿ
ಸಿಂದಗಿ೧೪: ಇತ್ತೀಚಿಗೆ 12 ನೇ ತಾರೀಕು ಮಂಡ್ಯ ಜಿಲ್ಲೆಯ ಮುಳವಳ್ಳಿ ಪಟ್ಟಣದಲ್ಲಿ ಶಿಕ್ಷಕನೊಬ್ಬ ದಿವ್ಯಾ ಎನ್ನುವ ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ವೆಸಗಿಗಿದ್ದು ಆ ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ಪ್ರಧಾನಿ ಮುಲಿಮನಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಕ್ಕಳಲ್ಲಿರುವ ಅಜ್ಞಾನ ತೊಲಗಿಸಿ ಸುಜ್ಞಾನನದ ಬೆಳಕು ನೀಡಿ ಮಗುವಿನ ಬದುಕಿಗೆ ದಾರಿ ದೀಪವಾಗಬೇಕಿದ್ದ ಶಿಕ್ಷಕ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದೂ ಇಡೀ ರಾಜ್ಯದ ಶಿಕ್ಷಣ ಸಾಮೂಹ ತೆಲೆ ತೆಗ್ಗಿಸುವಂತೆ ಮಾಡಿದೆ ತಾನು ಮಾಡಿದ ಹೇಯ ಕೃತ್ಯ ಮುಚ್ಚಿಹಾಕುವ ಹುನ್ನಾರು ಹಾಕಿಕೊಂಡು ಅತ್ಯಾಚಾರ ವೆಸಗಿ ತಾನಾಗಿಯೇ ಪೊಲೀಸರಿಗೆ ಫೋನ ಕರೆ ಮಾಡಿ ಕರಿಸಿದ್ದಾನೆ ತದನಂತರ ಪೊಲೀಸ್ ಇಲಾಖೆ ಕೂಲ ಕುಲಂಕುಶವಾಗಿ ವಿಚಾರಿದಾಗ ಶಿಕ್ಷಕನೇ ಅಪರಾಧಿ ಎಂದು ದೃಢಪಟ್ಟಿದೆ ನೀಚ ಶಿಕ್ಷಕನನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ನೀಡಿಬೇಕು. ಇಲ್ಲದಿದ್ದರೆ ಕುರುಬ ಸಮಾಜದ ಸಂಘಟನೆ ಜೊತೆಗೆ ಮಾದಿಗ ದಂಡೋರ ಸಮಿತಿ ಸೇರಿದಂತೆ ಅನೇಕ ಜನಪರ ಸಂಘಟನೆಗಳೊಂದಿಗೆ ರೋಡಿಗಿಳಿದು ರಾಜ್ಯದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.