ಯರಗಟ್ಟಿ

ಬ್ರಹ್ಮಕುಮಾರಿ ಆಶ್ರಮದಲ್ಲಿ ರಕ್ಷಾ ಬಂಧನ ಆಚರಣೆ

ಬ್ರಹ್ಮಕುಮಾರಿ ಆಶ್ರಮದಲ್ಲಿ ರಕ್ಷಾ ಬಂಧನ ಆಚರಣೆ

ಲೋಕದರ್ಶನ ವರದಿ

ಯರಗಟ್ಟಿ 31: ಪಟ್ಟಣದ ಪ್ರಜಾಪ್ರಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾಬಂಧನ ಹಬ್ಬವನ್ನು ಸಹೋದರ-ಸಹೋದರಿಯರಿಗೆ ರಾಕಿ ಕಟ್ಟುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಯಶ್ರೀ ಅಕ್ಕನವರು ನಮ್ಮ ಸಂಸ್ಥೆಯಲ್ಲಿ ಶಿವರಾತ್ರಿ ಹಾಗೂ ರಕ್ಷಾ ಬಂಧನದ ಹಬ್ಬವನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು.ಶ್ರಾವಣ ಮಾಸದ ಪೂರ್ಣಿಮಾ  ತಿಥಿಯಂದು ಸಹೋದರಿಕೆಯ ಮಹತ್ವವನ್ನು ಸಾರುವ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ತಂಗಿಯರು ಅಣ್ಣನ ಕೈಗೆ ರಾಖಿ ಕಟ್ಟುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಅಣ್ಣ ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾಥರ್ಿಸುತ್ತಾರೆ. ಸಹೋದರರ ಕೈಗೆ ರಾಖಿ ಕಟ್ಟುವ ಸಹೋದರಿ ಅವರಿಂದ ಉಡುಗೊರೆಗಳನ್ನು ಪಡೆಯುತ್ತಾಳೆ ಎಂದು ಹೇಳಿದರು.

ಬಿ. ಕೆ. ಸಂಧ್ಯಾ ಅಕ್ಕನವರು, ಬಿ. ಕೆ. ಗೀತಾ ಅಕ್ಕನವರು, ರಾಜೇಂದ್ರ ವಾಲಿ, ಡಾ. ವಿಶ್ವನಾಥ ತಾಂವಶಿ, ಡಾ. ಕುಮಾರ ದಾಸರ, ಬಿ. ಕೆ. ರಾಮಚಂದ್ರ, ಬಿ. ಕೆ. ವಿರೂಪಾಕ್ಷ, ಬಿ. ಕೆ. ಸಿದ್ದಲಿಂಗಪ್ಪ, ಬಿ. ಕೆ. ಮಹೇಶ, ಚಂದ್ರು ತೋರಣಗಟ್ಟಿ, ಬಿ. ಕೆ. ಅನಸೂಯಾ, ಬಿ. ಕೆ. ರೇಣುಕಾ, ಬಿ. ಕೆ. ಮಹಾದೇವಿ, ಬಿ. ಕೆ. ಹೇಮಾ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

ಸುದ್ದಿ ಓದಿ