ಧರ್ಮಸ್ಥಳ ಅಸ್ಥಿರಗೊಳಿಸುವ ಕುತಂತ್ರ ರಾಜ್ಯದ ಕಾಂಗ್ರೆಸ್ ಸರ್ಕಾರದ್ದು : ರಾಜುನಾಯಕ ಆರೋಪ
ಧರ್ಮಸ್ಥಳ ಅಸ್ಥಿರಗೊಳಿಸುವ ಕುತಂತ್ರ ರಾಜ್ಯದ ಕಾಂಗ್ರೆಸ್ ಸರ್ಕಾರದ್ದು : ರಾಜುನಾಯಕ ಆರೋಪ
ಕಂಪ್ಲಿ 29: ಹಿಂದೂ ಧಾರ್ಮಿಕ ವಿರೋಧಿ ಶಕ್ತಿಗಳು ಧರ್ಮಸ್ಥಳಕ್ಕೆ ಕಪ್ಪುಚುತಿ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಧರ್ಮಸ್ಥಳವನ್ನು ಅಸ್ಥಿರಗೊಳಿಸುವ ಕುತಂತ್ರವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ಪಕ್ಷದ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಾಜುನಾಯಕ ಗುಡುಗಿದರು. ಅವರು ಶುಕ್ರವಾರ ಪಟ್ಟಣದ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯ ಹಿಂದೆ ಕೆಲವು ಎಡಪಂತೀ ಸಂಘಟನೆಗಳ ಕೈವಾಡ ಇದೆ. ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಪೋಸ್ಟ್ ಹಾಕುವವರನ್ನು. ಕೂಡಲೇ ಬಂಧಿಸಬೇಕು. ಹಾಗೂ ಹಿಂದೂ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಹಾಗೂ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಕೇವಲ ಹಿಂದೂಗಳುದ್ದಲ್ಲಾ ಎಂದು ಹೇಳಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಈ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು. ಸಮಸ್ತ ನಾಡಿನ ಹಿಂದೂಗಳಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳವು "ಧರ್ಮಸ್ಥಳ ಸತ್ಯ ಯಾತ್ರೆ' ಕೈಗೊಂಡಿದ್ದು ಇದೇ ರವಿವಾರ 31ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಕಂಪ್ಲಿ ಕ್ಷೇತ್ರದ ಸೇರಿದಂತೆ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮುಖಂಡರು, ಕಾರ್ಯಕರ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮೇಘರಾಜ, ನಗರ ಘಟಕ ಅಧ್ಯಕ್ಷ ಇರ್ಫಾನ್, ಮುಖಂಡರಾದ ಜಗದೀಶ ಪೂಜಾರ, ಅಂಜಿನಪ್ಪ, ನಾಗರಾಜ, ಗಾದಿಲಿಂಗಪ್ಪ, ನಿಂಗಪ್ಪ,