ಯರಗಟ್ಟಿ

ರೈನಾಪೂರ: ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ

ರೈನಾಪೂರ: ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ

ಲೋಕದರ್ಶನ ವರದಿ

ಯರಗಟ್ಟಿ 06: ರೈತರು ಕೃಷಿ ಬದುಕಿನಲ್ಲಿ ಹೈನುಗಾರಿಕೆಯು ಮಹತ್ವದ ಪಾತ್ರ ವಹಿಸಲಿದ್ದು, ಇದು ರೈತರನ್ನು ಸ್ವಾಭಿಮಾನದಿಂದ ಬದುಕುವಂತೆ ಮಾಡುತ್ತದೆ ಎಂದು ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಎಸ್.ಎಸ್.ಮುಗಳಿ ಹೇಳಿದರು.

ಸಮೀಪದ ರೈನಾಪೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೇವಲ ಕೃಷಿಯನ್ನೆ ಅವಲಂಬಿಸಿದರೆ ಸಾಲದು. ಉಪಜೀವನ್ನಕ್ಕಾಗಿ ಹಸು ಸಾಕಾಣೆ ಮೂಲಕ ಹಾಲು ಉತ್ಪಾದನೆ ಕೈಗೊಳ್ಳಬೇಕಿದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದರು.

ಮತ್ತೆ ಹಾಲಿನ ದರದಲ್ಲಿ 3ರೂ. ಏರಿಕೆ ಯಾಗಿದ್ದು ಇದರ ಲಾಭದ ಜೊತೆಗೆ ಸಕರ್ಾರದಿಂದ ಒಟ್ಟು 5ರೂ. ಪ್ರೋತ್ಸಾಹ ಧನ ಸಿಗುತ್ತಿದೆ. ಆದ್ದರಿಂದ ಪ್ರತಿ ಕುಟುಂಬ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದರು.

ರೈನಾಪೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಠ್ಠಲ ಬಂಟನೂರ ಮಾತನಾಡಿ, ಲಾಭದಾಯಕವಾಗಿರುವ ಹೈನುಗಾರಿಕೆಯತ್ತ ಇಂದಿನ ವಿದ್ಯಾವಂತ ಯುವಕರು ಮುಂದಾಗುತ್ತಿದ್ದು ಗ್ರಾಮೀಣ ಭಾಗದ ರೈತರು ಕೃಷಿಯೊಂದಿಗೆ ಹಸುಗಳನ್ನು ಸಾಕಿದರೆ ಆರ್ಥಿಕವಾಗಿ ಸದೃಡರಾಗಲು ಸಹಕಾರಿಯಾಗುತ್ತದೆ ಎಂದರು.  

 ನಂತರ ಸಂಘದ ಅಧ್ಯಕ್ಷರನ್ನು ಹಾಗೂ ನಿರ್ದೇಶಕರನ್ನು ಆಡಳಿತ ಮಂಡಳಿ ಸನ್ಮಾನಿಸಿದರು.

ಎಸ್.ವೈ.ಅಳಗೋಡಿ, ಸೋಮನಿಂಗಪ್ಪ ಪಟ್ಟಣಶೆಟ್ಟಿ, ಎಸ್.ಕೆ.ಕಡೆಮನಿ, ಸುರೇಶ ಬಂಟನೂರ, ಮಹಾಂತೇಶ ಪಟ್ಟಣಶೆಟ್ಟಿ, ಕಲ್ಲಪ್ಪ ಕಡೆಮನಿ, ಸುರೇಶ ಸಿದ್ನಾಳ, ಮಂಜುನಾಥ ಹಾರೂಗೊಪ್ಪ, ಸುರೇಶ ನೀಲಪ್ಪನವರ, ರಾಜೇಶ ಮಾಗನೂರ, ಬಸಪ್ಪ ಮೂಲಿನಮನಿ, ಲೋಕನಾಥ ಮೆಟಗುಡ್ಡ, ಸುರೇಖಾ ಬಂಟನೂರ, ರುಕ್ಮವ್ವ ಬೆನಕಟ್ಟಿ, ಭೀಮಪ್ಪ ಗಂಗರಡ್ಡಿ, ಫಕೀರಪ್ಪ ಹೊಸಮನಿ, ಬಸವರಾಜ ಪಟ್ಟಣಶೆಟ್ಟಿ, ಪುಟ್ಟು ಕಳ್ಳಿಗುದ್ದಿ, ಎಂ.ಎಂ.ವಿರಕ್ತಮಠ, ಆನಂದ ಪಟ್ಟಣಶೆಟ್ಟಿ, ಅಶೋಕ ಜೂಗನವರ ಸೇರಿದಂತೆ ಇತರರು ಇದ್ದರು 

ಸುದ್ದಿ ಓದಿ