ರೈಲ್ವೆ ಸೌಲಭ್ಯಗಳಿಗಾಗಿ ಸಂಸದ ನಿಯೋಗ ವತಿಯಿಂದ ರೈಲ್ವೆ ಸಚಿವರಿಗೆ ಮನವಿ

ರೈಲ್ವೆ ಸೌಲಭ್ಯಗಳಿಗಾಗಿ ಸಂಸದ ನಿಯೋಗ ವತಿಯಿಂದ ರೈಲ್ವೆ ಸಚಿವರಿಗೆ ಮನವಿ

ಬಳ್ಳಾರಿ 05.:ನವ ದೆಹಲಿಯಲ್ಲಿ ಕನರ್ಾಟಕದ ಉನ್ನತ ಸಮಿತಿ ನಿಯೋಗವು ಕೇಂದ್ರ ರೈಲ್ವೆ ಸಚಿವ  ಪಿಯೂಸ್ ಗೋಯಲ್ರವರನ್ನು ಉದಯ ನವದೆಹಲಿಯ ಮಂತ್ರಿಗಳ ಕಛೇರಿಯಲ್ಲಿ ಕನರ್ಾಟಕದ ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕ  ಜಗದೀಶ್ ಶೆಟ್ಟರ್, ಕೊಪ್ಪಳ ಸಂಸದ  ಕರಡಿ ಸಂಗಣ್ಣ, ಹಾವೇರಿ ಸಂಸದ  ಶಿವಕುಮಾರ ಉದಾಸಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಧಾರವಾಡ ಸಂಸದ  ಪ್ರಹ್ಲಾದ್ ಜೋಷಿ, ಬೆಳಗಾಂ ಸಂಸದ  ಸುರೇಶ್ ಅಂಗಡಿ, ನಂಜುಂಡಪ್ಪ ಅನುಷ್ಠಾನ ಸಮಿತಿ ಮಾಜಿ ಅಧ್ಯಕ್ಷ ತ್ರಿವಿಕ್ರಮಜೋಷಿಯವರೊಂದಿಗೆ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ ಮುಖಂಡರೊಂದಿಗೆ ಮಂತ್ರಿಗಳನ್ನು ಭೇಟಿ ಮಾಡಿ, ಚಚರ್ಿಸಿ ಮನವಿ ಪತ್ರ ಅಪರ್ಿಸಿದರು.  ಈ ಸಾಲಿನ ವರ್ಷದಲ್ಲಿ ಗದಗದಿಂದ ಬೆಂಗಳೂರಿಗೆ ಇಂಟರ್ ಸಿಟಿ ರೈಲುನ್ನು ಆದ್ಯತೆಯ ಮೇರೆಗೆ ಆರಂಭಿಸಲು ಈ ನಿಯೋಗವು ಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಬಹುದಿನದ ಬೇಡಿಕೆಯಾದ ಕೊಪ್ಪಳ ದಿಂದ ಬಳ್ಳಾರಿ - ಗುಂತಕಲ್ ಮಾರ್ಗವಾಗಿ   ಬೆಂಗಳೂರಿಗೆ ಹಗಲಿನ ಇಂಟರ್ ಸಿಟಿ ರೈಲ್ವನ್ನು ಈ ಸಾಲಿನ ವರ್ಷದಲ್ಲಿ ಪ್ರಾರಂಭಿಸಬೇಕೆಂಬ ಪ್ರಧಾನ ಬೇಡಿಕೆಯನ್ನು ರೈಲ್ವೆ ಮಂತ್ರಿಗಳಿಗೆ ಸಲ್ಲಿಸಲಾಯಿತು.  ಈ ರೈಲುನ್ನು ಕೊಪ್ಪಳ ದಿಂದ ಆರಂಭಿಸಲು ಸಾಧ್ಯವಾಗದಿದ್ದಲ್ಲಿ ಜಂಕ್ಷನ್ ಸ್ಥಳವಾದ ಗದಗ ದಿಂದ ಆರಂಭಿಸುವಂತೆ ಕೋರಲಾಯಿತು.  ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಸಮಸ್ಯೆ ಇದ್ದಲ್ಲಿ ಈ ರೈಲುನ್ನು ಮೈಸೂರಿನವರೆಗೆ ವಿಸ್ತರಿಸುವಂತೆ ನಿಯೋಗ ವಿನಂತಿಸಿತು. ಗದಗ - ಬಳ್ಳಾರಿ- ಬೆಂಗಳೂರು ಇಂಟರ್ ಸಿಟಿ ರೈಲು ಬೇಡಿಕೆಯನ್ನು ಈ ಸಾಲಿನ ವರ್ಷದಲ್ಲಿ ಆದ್ಯತೆ ಮೇರೆಗೆ ಪ್ರಾರಂಭಿಸುವುದಾಗಿ ರೈಲ್ವೆ ಮಂತ್ರಿಗಳ ನಿಯೋಗಕ್ಕೆ ಭರವಸೆ ನೀಡಿವುದು ಸಂತಸದ ವಿಷಯ ವಿಷಯ ಎಂದು ತಿಳಿಸಿದ್ದಾರೆ.

ಈಗಾಗಲೇ  ಹೊಸಪೇಟೆಯಿಂದ ಹರಿಹರದವರೆಗೆ  ಬ್ರಾಡ್ಗೇಜ್  ರೈಲ್ವೆ ಮಾರ್ಗವಿದ್ದರೂ ಕೇವಲ ಕೊಟ್ಟೂರಿನಿಂದ ಹರಿಹರದ ವರೆಗೆ ಮಾತ್ರ ರೈಲು (ರೈಲು ಸಂಖ್ಯೆ 56529 / 56530) ಸಂಚಾರವಾಗುತ್ತಿದೆ. ಕೂಡಲೇ ಈ ಸಾಲಿನ ವರ್ಷದಲ್ಲಿ ಹೊಸಪೇಟೆಯಿಂದ ಹರಿಹರದ ವರೆಗೆ ರೈಲಿನ ಸಂಚಾರ ಆರಂಭಿಸಲು ರೈಲ್ವೆ ಮಂತ್ರಿಗಳನ್ನು ನಿಯೋಗ ಒತ್ತಾಯಿಸಿದೆ. ಇದಕ್ಕೆ ಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಈ ಸಾಲಿನ ವರ್ಷದಲ್ಲಿ ಕೊಟ್ಟೂರಿನಿಂದ ಸಂಚರಿಸುವ ರೈಲುನ್ನು ಹೊಸಪೇಟೆವರೆಗೆ ವಿಸ್ತರಿಸುವ ಭರವಸೆಯನ್ನು ನಿಯೋಗಕ್ಕೆ ನೀಡಿದರು. ಕೊಪ್ಪಳ ಜಿಲ್ಲೆಯ ಹಾಗೂ ವಿಶೇಷವಾಗಿ ಗಂಗಾವತಿ ತಾಲೂಕಿನ ಜನತೆಯ ಅನುಕೂಲಕ್ಕಾಗಿ ಗಂಗಾವತಿಯಿಂದ ಗಿಣಿಗೇರಾ, ಬಳ್ಳಾರಿ - ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ನೂತನ ರೈಲನ್ನು ಪ್ರಾರಂಭಿಸುವಂತೆ ಲೋಕಸಭಾ ಸದಸ್ಯ  ಕರಡಿ ಸಂಗಣ್ಣ ವಿನಂತಿಸಿದರು.  ಹೊಸಪೇಟೆ - ಬೆಂಗಳೂರು ಮಧ್ಯ ಸಂಚಾರಿಸುವ ರೈಲನ್ನು ಕೊಪ್ಪಳದಿಂದ ಪ್ರಾರಂಭಿಸುವಂತೆ ಮನವಿ ಮಾಡಲಾಯಿತು.  ಇದರಿಂದ ಕೊಪ್ಪಳ ಜನತೆಗೆ ಅನುಕೂಲ ಕಲ್ಪಿಸುತ್ತದೆ ಎಂದು ಕೋರಲಾಯಿತು. ಸೋಲಾಪುರ್ - ಗದಗ್ ಮಧ್ಯ ಸಂಚರಿಸುವ ಪ್ಯಾಸಿಂಜರ್ ರೈಲನ್ನು ಕೊಪ್ಪಳ ಮಾರ್ಗವಾಗಿ ಹೊಸಪೇಟೆವರೆಗೆ ವಿಸ್ತರಿಸುವಂತೆ ಮುಖಂಡರುಗಳ ಉನ್ನತ ನಿಯೋಗ ಮಂತ್ರಿಗಳಲ್ಲಿ ವಿನಂತಿಸಿ ಮನವಿ ಅಪರ್ಿಸಿದ್ದಾರೆ. ಪ್ರವಾಸಿಗರ ಸೌಲಭ್ಯಕ್ಕಾಗಿ ಮೈಸೂರು, ಹಾಸನ, ಚಿತ್ರದುರ್ಗ, ಹೊಸಪೇಟೆ, ಗದಗ, ಬಾಗಲಕೋಟೆ, ಬಿಜಾಪುರ ಇವೆಲ್ಲಾವು ಪ್ರಸಿದ್ಧ ಪ್ರವಾಸಿ ತಾಣಗಳಾಗಿದ್ದು, ಈ ಮಾರ್ಗಗಳ ಮೂಲಕ ಜನತೆ ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ದಿಂದ  ಚಿತ್ರದುರ್ಗ, ಬಳ್ಳಾರಿ, ಗದಗ, ಬಿಜಾಪುರ ಮಾರ್ಗವಾಗಿ ಸೊಲ್ಲಾಪುರದವರೆಗೆ ನೂತನ ಪ್ರವಾಸಿ ರೈಲುನ್ನು ಈ ವರ್ಷದಿಂದ ಆರಂಭಿಸುವಂತೆ ರೈಲ್ವೆ ಮಂತ್ರಿಗಳನ್ನು ವಿನಂತಿಸಲಾಯಿತು ಎಂದು ತಿಳಿಸಿದ್ದಾರೆ. ರೈಲು ಸಂಖ್ಯೆ  57451 / 57452 ಗುಂತಕಲ್ - ಚಿಕ್ಕಜಾಜೂರು ಪ್ಯಾಸಿಂಜರ್ ರೈಲು ಪ್ರತಿನಿತ್ಯ ಸಂಚರಿಸುತ್ತಿದ್ದು, ಈ ರೈಲುನ್ನು ಮೈಸೂರು ವರೆಗೆ ವಿಸ್ತರಣೆ ಮಾಡಿದಲ್ಲಿ ಬಡಜನತೆಗೆ ಅನುಕೂಲವಾಗುವುದಲ್ಲದೆ ಧರ್ಮಸ್ಥಳಕ್ಕೆ ಹಾಗೂ ಹಾಸನ ಮತ್ತು ಮೈಸೂರಿಗೆ ಹೋಗಲು ಹಗಲಿನಲ್ಲಿ ಈ ರೈಲು ತುಂಬ ಅನುಕೂಲವಾಗುದೆಂದು ಮಂತ್ರಿಗಳಿಗೆ ನಿಯೋಗ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಿಂದುಗಳ ಪವಿತ್ರ ಸ್ಥಳವಾಗಿರುವ ಕಾಶಿವಿಶ್ವನಾಥನ ಹಾಗೂ ಮಾತಾ ವಿಶಾಲಾಕ್ಷಿ ಅಮ್ಮನ ದರ್ಶನಕ್ಕೆ ತೆರಳಲು ವಾರದಲ್ಲಿ 2 ದಿನ ಸಂಚರಿಸುವ ರೈಲು ಸಂಖ್ಯೆ  16229 / 16230 ಮೈಸೂರು ವಾರಣಾಸಿ ರೈಲನ್ನು ದಿನನಿತ್ಯದ ರೈಲಾಗಿ ಸಂಚರಿಸುವಂತೆ ನಿಯೋಗ ಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು        ಕನರ್ಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷರು   ಕೆ.ಎಂ.ಮಹೇಶ್ವರಸ್ವಾಮಿ ತಿಳಿಸಿದ್ದಾರೆ.


ಸುದ್ದಿ ಓದಿ