ಪುಟ್ಟವ್ವ ಆನ್ವೇರಿ ನಿಧನ
ಬ್ಯಾಡಗಿ: ಪಟ್ಟಣದ ಹಿರಿಯ ನಿವೃತ್ತ ಶಿಕ್ಷಕಿ ಪುಟ್ಟವ್ವ ಮಲ್ಲೇಶಪ್ಪ ಆನ್ವೇರಿ (73) ಇವರು ಅನಾರೋಗ್ಯದ ಕಾರಣ ನ.5 ಭಾನುವಾರ ಬೆಳಿಗ್ಗೆ ನಿಧನರಾದರು.
ಮೃತರಿಗೆ ಈರ್ವರು ಪುತ್ರರು ಓರ್ವ ಪುತ್ರಿಯಿದ್ದು ಅಪಾರ ಬಂಧುಗಳನ್ನು ಅಗಲಿದ್ದಾರೆ, ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರಕ್ಕೆ ಹೋಗುವ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಭಾನುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಂತಾಪ: ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಶ್ರೀ, ಸಂಸದ ಶಿವಕುಮಾರ ಉದಾಸಿ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಮುಖಂಡ ರಾದ ಎಸ್.ಆರ್.ಪಾಟೀಲ, ಡಿಡಿಪಿಐ ಗಿರೀಶ ಪದಕಿ, ಬಿಇಓ ಎಸ್.ಜಿ.ಕೋಟಿ, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು ಸಣ್ಣಗೌಡ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಫ್.ಕರಿಯಣ್ಣನವರ ಸೇರಿದಂತೆ ಶಿಕ್ಷಕ ಬಂಧುಗಳು ಪುಟ್ಟವ್ವ ಆನ್ವೇರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ