ಕಂಪ್ಲಿ

ಅನುಕಂಪದ ಆಧಾರದಡಿ ಅವಲಂಭಿತರಿಗೆ ಮೇಲ್ವಿಚಾರಕ ಹುದ್ದೆ ನೀಡಿ : ಎಚ್‌.ಪಿ.ಶಿಕಾರಿರಾಮು

ಅನುಕಂಪದ ಆಧಾರದಡಿ ಅವಲಂಭಿತರಿಗೆ ಮೇಲ್ವಿಚಾರಕ ಹುದ್ದೆ ನೀಡಿ : ಎಚ್‌.ಪಿ.ಶಿಕಾರಿರಾಮು

                 ಕಂಪ್ಲಿ 22:  ಪಟ್ಟಣದ ಎಂ.ಡಿ.ಕ್ಯಾಂಪಿನ ಅಲೆಮಾರಿ ಗ್ರಂಥಾಲಯ ಆವರಣದಲ್ಲಿ ಸೋಮವಾರ ನಡೆದ ಬಳ್ಳಾರಿ, ವಿಜಯನಗರ ಜಿಲ್ಲಾ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘದ ಸಭೆ ನಡೆಯಿತು. ಎಂ.ಡಿ.ಕ್ಯಾಂಪಿನ ಗ್ರಂಥಾಲಯ ಮೇಲ್ವಿಚಾರಕ ಹಾಗೂ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಚ್‌.ಪಿ.ಶಿಕಾರಿರಾಮು ಅವರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಮೇಲ್ವಿಚಾರಕ ವೇತನ ಜಮೆ ಮಾಡಬೇಕು. ತಿಂಗಳ ವೃತ್ತಪತ್ರಿಕೆಗಳ ಬಿಲ್ಲನ್ನು 400 ರೂ.ಗಳಿಂದ 1000 ರೂ.ಗಳಿಗೇರಿಸಬೇಕು. ಕಂಪ್ಲಿ, ಹೊಸಪೇಟೆ, ಚಿಕ್ಕಮ್ಯಾಗಳಗೇರಿಗಳ ಅಲೆಮಾರಿ/ಕೊಳಚೆ ಗ್ರಂಥಾಲಯಗಳಿಗೆ ನಿವೇಶನ ನೀಡಿ, ಕಟ್ಟಡ ನಿರ್ಮಿಸಿಕೊಡಬೇಕು. ಮೇಲ್ವಿಚಾರಕರು ಮೃತರಾದಲ್ಲಿ ಅನುಕಂಪದ ಆಧಾರದಡಿ ಅವಲಂಭಿತರಿಗೆ ಮೇಲ್ವಿಚಾರಕ ಹುದ್ದೆ ನೀಡಬೇಕು. ಗ್ರಂಥಾಲಯ ಮೇಲ್ವಿಚಾರಕರನ್ನು ಖಾಯಂಗೊಳಿಸುವಂತೆ ಸೇರಿ ನಾನಾ ಬೇಡಿಕೆಗಳ ಕುರಿತು ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.  

               ಆಯ್ಕೆ: ಬಳ್ಳಾರಿ, ವಿಜಯನಗರ ಜಿಲ್ಲಾ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಅಲ್ಲಿಪುರದ ವಿ.ಹನುಮಪ್ಪ(ಅಧ್ಯಕ್ಷ), ಎಚ್‌.ಪಿ.ಶಿಕಾರಿರಾಮು(ಗೌರವಾಧ್ಯಕ್ಷ), ಹೊಸಪೇಟೆಯ ಪಕ್ಕೀರ​‍್ಪ ಬಾದಗಿ(ಉಪಾಧ್ಯಕ್ಷ), ಬಳ್ಳಾರಿ ಗುಡಾರನಗರದ ಡಿ.ಸುಂಕಣ್ಣ(ಪ್ರಧಾನ ಕಾರ್ಯದರ್ಶಿ), ಕುರುಗೋಡಿನ ಮಂಗಳಗೌರಿ(ಸಹ ಕಾರ್ಯದರ್ಶಿ), ಚಿಕ್ಕಮ್ಯಾಗಳಗೇರಿಯ ಡಿ.ಪರಶುರಾಮ(ಖಜಾಂಚಿ), ಕಂಪ್ಲಿಯ ಉಮೇಶ, ಸಿರುಗುಪ್ಪದ ವೈ.ದೇವೇಂದ್ರ​‍್ಪ, ಬಳ್ಳಾರಿಯ ಉಮೇಶ(ಸದಸ್ಯರು), ವೈ.ದೇವೇಂದ್ರ​‍್ಪ(ರಾಜ್ಯ ಮೇಲ್ವಿಚಾರಕ ಪ್ರತಿನಿಧಿ)ಆಯ್ಕೆಗೊಂಡರು. ಬಸವನಕುಂಟೆಯ ಉಮೇಶ ಸೇರಿ ಇತರರಿದ್ದರು.    


ಸುದ್ದಿ ಓದಿ