ಫೆ.01ರಂದು ಅಗ್ರಿಗೋಲ್ಡ್ ವಂಚಿತರಿಂದ ಪ್ರತಿಭಟನೆ

ಫೆ.01ರಂದು ಅಗ್ರಿಗೋಲ್ಡ್ ವಂಚಿತರಿಂದ ಪ್ರತಿಭಟನೆ

ಬಳ್ಳಾರಿ 30:ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ನೀಡುವುದಾಗಿ 2500ಕ್ಕೂ ಹೆಚ್ಚು ಕೋಟಿ ರೂ ಸಂಗ್ರಹಿಸಿ ಹಣ ಮರುಪಾವತಿ ಮಾಡದೇ ವಂಚನೆ ಮಾಡಿರುವ ರಾಜ್ಯದ ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಲು ರಾಜ್ಯ ಸರಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಅದಕ್ಕಾಗಿ ಗ್ರಾಹಕರ ನೇರವಿಗೆ ಬರಬೇಕೆಂದು ಫೆ.01ರಂದು ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುತ್ತಿದೆ. 

ಈ ಕುರಿತು ಬುಧವಾರ ಸುದ್ದಿಗೋಷ್ಟಿ ನಡೆಸಿದ ಅಗ್ರಿಗೋಲ್ಡ್ ಏಜೆಂಟರ ಹಾಗೂ ಗ್ರಾಹಕರ ಸಂಘದ ಗೌರವಾಧ್ಯಕ್ಷ ಕೆ.ನಾಗಬೂಷಣರಾವ್ ಮೊದಲಾದವರು ಅಗ್ರಿಗೋಲ್ಡ್ ವಂಚನೆ ಬಗ್ಗೆ ಆಂಧ್ರಪ್ರದೇಶದಲ್ಲಿ ಸಿ.ಐ.ಡಿ ತನಿಖೆ ನಡೆಸಿ ಕಂಪನಿಯು ಅಲ್ಲಿನ ಆಸ್ತಿಯನ್ನು ವಶಪಡಿಸಿಕೊಂಡಿದೆ. ಜೊತೆಗೆ ಆ ಆಸ್ತಿಯನ್ನು ಮಾರಾಟಮಾಡಿ ವಂಚನೆಯಾದ ಗ್ರಾಹಕರಿಗೆ ನೀಡುವ ಪ್ರಯತ್ನ ನಡೆದಿದೆ. ಅಲ್ಲದೇ ವಂಚನೆಯಿಂದ ನೊಂದು ಆತ್ಮಹತ್ಯ ಮಾಡಿಕೊಂಡವರಿಗೆ ಪರಿಹಾರವನ್ನು ಸಹ ನೀಡಿದೆ. ಆದರೆ ಕನರ್ಾಟಕದ ಉಡುಪಿಯಲ್ಲಿ ಕೇಸು ದಾಖಲಿಸಿ ಕಂಪನಿಯೂ 28 ಜನರ ವಿರುದ್ದ ಚಾರ್ಜ ಶೀಟ್ ಸಲ್ಲಿಸಿದೆ. ಆದರೆ ಗ್ರಾಹಕರಿಗೆ ಆಗಿರುವ ಅನ್ಯಾಯವನ್ನು ಭಗೆಹರಿಸುವ ಪ್ರಯತ್ನ ನಡೆಯುತ್ತಿಲ್ಲ. ರಾಜ್ಯದ 8 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಲು ರಾಜ್ಯ ಸರಕಾರ ಅನ್ಯಾಯಕ್ಕೆ ಒಳಗಾದ ಗ್ರಾಹಕರ ಪಟ್ಟಿ ಸಿದ್ದ ಪಡಿಸುವುದು ಕೂಡಲೇ ಗ್ರಾಹಕರ ಪಟ್ಟಿ ತಯಾರಿಸಿ ಪ್ರಕಟಿಸಬೇಕು. ರಾಜ್ಯದಲ್ಲಿ ವಶಪಡಿಕೊಂಡಿರುವ ಕಂಪನಿಯ ಆಸ್ತಿಯಿಂದ ಠೇವಣಿದಾರರಿಗೆ ಮೂಲ ಠೇವಣಿ ಕೊಡಿಸಬೇಕು. ಆಂಧ್ರಪ್ರದೇಶದ ಹೈಕೊರ್ಟನಲ್ಲಿ ಈ ಕುರಿತು ನಡೆಯುತ್ತಿರುವ ಪ್ರಕರಣದಲ್ಲಿ ರಾಜ್ಯ ಸರಕಾರವು ಅಜರ್ಿದಾರರಾಗಬೇಕು. ಅದರ ಮೂಲಕ ರಾಜ್ಯದ ಜನತೆಗೆ ನ್ಯಾಯ ವದಗಿಸಬೇಕು. ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲಿಯೂ 50 ಸಾವಿರಕ್ಕೂ ಹೆಚ್ಚು ಜನ 1ಸಾವಿರ ಕೋಟಿ ರೂಗಳನ್ನು ಈ ಕಂಪನಿಯಲ್ಲಿ ತೊಡಗಿಸಿ ವಂಚನೆಗೊಳಗಾಗಿದ್ದಾರೆ. ಅದಕ್ಕಾಗಿ ರಾಜ್ಯ ಸರಕಾರ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಆಗ್ರಹಿಸಿದರು.  

ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಕೆ.ಗುರುಮೂತರ್ಿ, ಪ್ರಧಾನ ಕಾರ್ಯದಶರ್ಿ ಎಂ.ಕೃಷ್ಣಮೂತರ್ಿ, ಎ.ಎಂ.ಈರಣ್ಣ, ರಾಘವೇಂದ್ರ, ಸೋಮಶೇಖರ, ಉಮಾಮಹೇಶ್ವರಸ್ವಾಮಿ, ಎಸ್.ಶೇಷಗಿರಿರಾವ್, ಕಟ್ಟೆಬಸಪ್ಪ, ಎಸ್.ಶರಮಾಸ್ ಮೊದಲಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ