"ನವ ಸರಪಳಿ" ವಿವಿಧ ಬೇಡಿಕೆ ಪೂರೈಕೆಗೆ ವಿದ್ಯಾಥರ್ಿಗಳಿಂದ ಪ್ರತಿಭಟನೆ

"ನವ ಸರಪಳಿ" ವಿವಿಧ ಬೇಡಿಕೆ ಪೂರೈಕೆಗೆ ವಿದ್ಯಾಥರ್ಿಗಳಿಂದ ಪ್ರತಿಭಟನೆ

ಲೋಕದರ್ಶನ ವರದಿ 

ಬಳ್ಳಾರಿ 21:ಕನ್ನಡ ವಿಶ್ವವಿದ್ಯಾಲಯ ಬಯಲು ಚಿಂತನ ಸಂಶೋಧನಾ ವಿದ್ಯಾಥರ್ಿಗಳ ಬಳಗವು ವಿಶ್ವವಿದ್ಯಾಲಯದ ತ್ರಿಪದಿ ವೃತ್ತದಲ್ಲಿ ಶುಕ್ರವಾರ ನವ ಸರಪಳಿ ಮತ್ತು ಪ್ರತಿಭಟನೆ ನಡೆಸಿ ಹಂಪಿ ವಿ.ವಿಯ ಕುಲಪತಿಗಳಾಸ ಮಲ್ಲಿಕಾ.ಎಸ್.ಘಂಟಿಯವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರದಲ್ಲಿ ತಿಳಿಸಿರುವಂತೆ ಸಂಶೋಧನೆಗಾಗಿ ಯುಜಿಸಿ ನೀಡುವ ಫೆಲೋಶಿಪ್ಗಳಿಗೆ ಎನ್.ಇ.ಟಿ(ನೆಟ್) ಕಡ್ಡಾಯ ಎಂಬ ನಿಯಮವನ್ನು ಕೂಡಲೇ ಹಿಂಪಡೆಯಬೇಕು, ಯುಜಿಸಿ ನೀಡುವ ಎಲ್ಲ ರೀತಿಯ ಫೆಲೋಶಿಪ್ಗಳನ್ನು ನಿಯಮದಂತೆ ನಾಲ್ಕು ವರ್ಷಕ್ಕೊಮ್ಮೆ ಹೆಚ್ಚಿಸಲು ಒತ್ತಾಯ, ಸಂಶೋಧನೆಗಾಗಿ ಫೆಲೋಶಿಪ್ಗಳಿಗೆ ನೆಟ್ ಸಂಶೋಧನೆಗಾಗಿ ಯುಜಿಸಿ ನೀಡುವ ಫೆಲೋಶಿಪ್ಗಳಿಗೆ ನೆಟ್ ಕಡ್ಡಾಯ ಎಂಬ ನಿಯಮವನ್ನು ಹಿಂಪಡೆಯುವ ಹಾಗೂ ಯುಜಿಸಿ ನೀಡುವ ಎಲ್ಲ ರೀತಿಯ ಫೆಲೋಶಿಪ್ಗಳನ್ನು ನಿಯಮದಂತೆ ಹೆಚ್ಚಿಸುವ ಕುರಿತು ಸಂಶೋಧನಾ ವಿದ್ಯಾಥರ್ಿಗಳ ಬಳಗವು ನಿದರ್ೇಶಕರು, ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ನವದೆಹಲಿ ಇವರಿಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ ಬೇಡಿಕೆಗಳನ್ನು ಈಡೇರಿಸದೇ ಹೋದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿರುತ್ತಾರೆ. ಹೋರಾಟದ ಕುರಿತು ವಿದ್ಯಾಥರ್ಿಗಳಾದ ಎಂ.ಡಿ.ಮುನಿರಾಜು, ಮಂಜುನಾಥ, ಪ್ರದೀಪ್, ಲತಾ ಕೆ.ಈ., ಓಂಕಾರಪ್ಪ, ಚೌಡೇಶ, ಅಭಿಲಾಷ ಮೊದಲಾದವರು ಮಾತನಾಡಿದರು. ನಂತರ ಮನವಿ ಪತ್ರ ಸಲ್ಲಿಸಿದರು.


ಸುದ್ದಿ ಓದಿ