ಚಿಕ್ಕೋಡಿ

ದೆಹಲಿ ಸಂಸತ್ ಕಲಾಪ ವೀಕ್ಷಣೆಗೆ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಿದ ಪ್ರಿಯಾಂಕಾ ಜಾರಕಿಹೊಳಿ

ದೆಹಲಿ ಸಂಸತ್ ಕಲಾಪ ವೀಕ್ಷಣೆಗೆ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಿದ ಪ್ರಿಯಾಂಕಾ ಜಾರಕಿಹೊಳಿ

                  ಚಿಕ್ಕೋಡಿ, 13 : ವಿದ್ಯಾರ್ಥಿನಿಯರಲ್ಲಿ ಶಿಕ್ಷಣದ ಜೊತೆಗೆ ಪ್ರಜಾಸತ್ತಾತ್ಮಕ ಹಾಗೂ ರಾಜಕೀಯ ಅರಿವು ಮೂಡಿಸುವ ಉದ್ದೇಶದಿಂದ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಕುಮಾರಿ ಪ್ರಿಯಾಂಕಾ ಸತೀಶ ಜಾರಕಿಹೊಳಿ ಅವರು ತಮ್ಮ ಕ್ಷೇತ್ರದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿನಿಯರಿಗೆ ದೆಹಲಿಯ ಸಂಸತ್ ಕಲಾಪ ವೀಕ್ಷಣೆಯ ಅಪೂರ್ವ ಅವಕಾಶ ಕಲ್ಪಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯೊಳಗಿನ ಆಯ್ದ 15 ಮಂದಿ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ದೆಹಲಿಯಲ್ಲಿ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದ ಕಲಾಪ ವೀಕ್ಷಣೆಗೆ ವಿಶೇಷ ವಿಮಾನದ ಮೂಲಕ ಕರೆದುಕೊಂಡು ಹೋಗಲಾಗುತ್ತಿದೆ. ಈ ಪ್ರವಾಸವು ಡಿಸೆಂಬರ್ 15, 2025 (ಸೋಮವಾರ)ರಂದು ಬೆಳಿಗ್ಗೆ 8.45ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರಾರಂಭವಾಗಲಿದೆ.  

                    ವಿದ್ಯಾರ್ಥಿಗಳು ಪಠ್ಯ ಶಿಕ್ಷಣಕ್ಕೆ ಸೀಮಿತವಾಗದೆ, ದೇಶದ ಉನ್ನತ ಪ್ರಜಾಸತ್ತಾತ್ಮಕ ಸಂಸ್ಥೆಯಾದ ಸಂಸತ್ತಿನಲ್ಲಿ ನಡೆಯುವ ಚರ್ಚೆಗಳು, ಶಾಸನ ಪ್ರಕ್ರಿಯೆಗಳು ಹಾಗೂ ಆಡಳಿತದ ಕಾರ್ಯವೈಖರಿಯನ್ನು ನೇರವಾಗಿ ವೀಕ್ಷಿಸುವ ಮೂಲಕ ರಾಜಕೀಯ ಜ್ಞಾನ ಪಡೆದುಕೊಳ್ಳಬೇಕು ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.ದೆಹಲಿಗೆ ತೆರಳುತ್ತಿರುವ ವಿದ್ಯಾರ್ಥಿನಿಯರ ಪಟ್ಟಿ ಹೀಗಿದೆ: ಕೋಮಲ ರಾಜೇಂದ್ರ ಹವಾಲ್ದಾರ, ದಾನೇಶ್ವರಿ ರುದ್ರಾ​‍್ಪ ಚೌಗಲಾ, ಸ್ನೇಹಾ ಸಿದ್ದಪ್ಪಾ ಪೂಜೇರಿ, ಸೃಷ್ಣ ವಿಠಲ ಪಡೋಲ್ಕರ್, ಅಮೃತ ಪ್ರಕಾಶ ತೆರಣಿ, ವಿಶಾಲಾಕ್ಷಿ ಪ್ರಹ್ಲಾದ್ ಶೇಲಾರ, ರೂಪಾ ಬಸವರಾಜ ಹಡಗಿನಾಳ, ನಿರ್ಮಿತಾ ಮಂಜುನಾಥ ಸವದತ್ತಿ, ರೇವತಿ ಮಾದರ, ಸೃಷ್ಠಿ ಬಾಬಾಸಾಬ ಅಕ್ಕಿವಾಟೆ, ಸಂಜನಾ ಭರತೇಶ ಪಾಟೀಲ, ಐಶ್ವರ್ಯ ಬಸಗೌಡ ಪಾಟೀಲ, ಕಾವೇರಿ ಪಿ. ಮಲ್ಲಾಪುರೆ, ಸಂಜನಾ ಮಹಾಂತೇಶ ಸವದಿ.ವಿದ್ಯಾರ್ಥಿನಿಯರ ಜೊತೆಗೆ ಶಿಕ್ಷಕಿ ನಾಗಿಣಿ ಕೆ.ಎಲ್‌., ಸಂಸದರ ಆಪ್ತ ಸಹಾಯಕರಾದ ಸತೀಶ ಬಿರಾದರ ಮತ್ತು ರಾಮಕೃಷ್ಣ ಪಾನಬುಡೆ ಅವರು ಸಹ ದೆಹಲಿಗೆ ತೆರಳುತ್ತಿದ್ದಾರೆ. ಈ ಮಹತ್ವದ ಕಾರ್ಯಕ್ರಮವು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ದಿಕ್ಕು ತೋರಿಸುವ ಜೊತೆಗೆ, ರಾಷ್ಟ್ರದ ಆಡಳಿತ ವ್ಯವಸ್ಥೆಯ ಬಗ್ಗೆ ನೇರ ಅನುಭವ ನೀಡಲಿದೆ ಎಂದು ಶಿಕ್ಷಣ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. 


ಸುದ್ದಿ ಓದಿ