ಜಿಲ್ಲಾಧಿಕಾರಿಗಳ ಮೂಲಕ ಸಕರ್ಾರಕ್ಕೆ ಲಿಖಿತ ಮನವಿ ಅರ್ಪಣೆ
ಕಾರವಾರ 17: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯೋಜನೆಗಳಿಗೆ ಅನುಧಾನವನ್ನು ಕಡಿತಗೊಳಿಸುತ್ತಿರುವದನ್ನು ವಿರೋಧಿಸಿ ಅಲ್ಪಸಂಖ್ಯಾತರ ಮುಖಂಡರಾದ ಎಂ.ಎ.ಖತೀಬ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ಇತ್ತೀಚೆಗೆ ಸರಕಾರ ಅಲ್ಪ ಸಂಖ್ಯಾತರ ಸಮುದಾಯಗಳ ಅಭಿವೃದ್ಧಿಗಾಗಿ ಈಗಾಗಲೆ ಜಾರಿಯಲ್ಲಿರುವ ಯೋಜನೆಗಳು ಸ್ವಾಗತಾರ್ಹವಾಗಿದ್ದವು. ಕೋವಿಡ್ ನೆಪದಲ್ಲಿ ಅನುದಾನ ನಿಲ್ಲಿಸಲಾಗುತ್ತಿರುವುದು ವಿಷಾಧನೀಯ ಎಂದು ಅಲ್ಪ ಸಂಖ್ಯಾತ ಮುಖಂಡರು ರಾಜ್ಯ ಸಕರ್ಾರದ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಸಂಬಂಧ ಲಿಖಿತ ಮನವಿಯನ್ನು ನೀಡಿ, ರಾಜ್ಯದ ಸಮಗ್ರ ಅಭಿವೃದ್ದಿ ದೃಷ್ಠಿಯಿಂದ ಇಂತಹ ಅಭಿವೃದ್ದಿ ಸಾಧ್ಯವಾಗುವರೆಗೂ ಯಾವ ಯೋಜನೆಗಳೂ ಸ್ಥಗಿತಗೊಳ್ಳಬಾರದು ಎಂದಿದ್ದಾರೆ. ಆದರೆ ಇತ್ತೀಚೆಗೆ ರಾಜ್ಯದಲ್ಲಿನ ಸರಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ದ, ಪಾಸರ್ಿ ಮತ್ತು ಜೈನ ಸಮುದಾಯಗಳ ಜನಪರ ಕಲ್ಯಾಣ ಯೋಜನೆಗಳಿಗೆ ನಿಗದಿಗೊಳಿಸಲಾದ ಅನುದಾನ ಕಡಿತಗೊಳಿಸಿರುವದು ತೀವೃ ಖಂಡನೆ ವ್ಯಕ್ತಪಡಿಸಿದ್ದಾರೆ. ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸಿದ್ದ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ರದ್ದು ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಅಂದಿನ ಸರಕಾರ ಬಜೆಟ್ನಲ್ಲಿ ಘೋಷಿಸಿದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು 1897 ಕೋಟಿ ರು. ನಿಂದ 1571 ಕೋಟಿ ರು ಗೆ ಕಡಿಮೆಗೊಳಿಸಿದೆ. 2020-21ನೇ ಸಾಲಿನಲ್ಲಿ ರಾಜ್ಯ ಸಕರ್ಾರ ಮಂಡಿಸಿದ ಬಜೆಟ್ನಲ್ಲಿ 1177 ಕೋಟಿ ಗಳಷ್ಟು ಇದ್ದ ಅನುದಾನ ಮತ್ತೆ ಕಡಿತಗೊಳಿಸಿ 1055 ಕೋಟಿ ರುಗೆ ನಿಗದಿಗೊಳಿಸಿದೆ. ಇತ್ತೀಚೆಗೆ 1055 ಕೋಟಿ ರಯ ನಷ್ಟಿ ಇದ್ದ ಅನುದಾನದಲ್ಲಿ 50 ಕೋಟಿ ಅನುದಾನ ಕಡಿತಗೊಳಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು ಕಳೆದ 5 ವರ್ಷಗಳಿಂದ ಜಾರಿಯಲ್ಲಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳಿಗೆ ಈಗ ಅನುದಾನ ಕಡಿತಗೊಳಿಸಿರುವದರಿಂದ ಯೋಜನೆಗಳನ್ನು ಜಾರಿಗೊಳಿಸಲು ಕಲ್ಯಾಣ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಹಿಂದಿನ ಸರಕಾರಗಳು ಜಾರಿಯಲ್ಲಿಟ್ಟಿದ್ದ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ದಿ ಯೋಜನೆ, ಶಾದಿಭಾಗ್ಯ ಯೋಜನೆಗಳನ್ನು ರದ್ದುಗೊಳಿಸಿದೆ. ಇದರೊಂದಿಗೆ ಮುಖ್ಯವಾಗಿ ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾಥರ್ಿ ವೇತನ, ಶುಲ್ಕ ವಿನಾಯ್ತಿ, ವಿದ್ಯಾಸಿರಿಯಂತಹ ಅಲ್ಪ ಸಂಖ್ಯಾತ ಸಮುದಾಯಗಳ ವಿದ್ಯಾಥರ್ಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತ ಯೋಜನೆಗಳಿಗೆ 2019-20ನೇ ಸಾಲಿನ ಅನುದಾನ ಸರಕಾರ ಇಲ್ಲಿಯವರೆಗೆ ಬಿಡುಗಡೆ ಗೊಳಿಸದೇ ಇದ್ದರಿಂದ ವಿದ್ಯಾಥರ್ಿಗಳು ಸಾಕಷ್ಟು ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ 2016-17 ರಿಂದ ಜಾರಿಯಲ್ಲಿರುವ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾಥರ್ಿಗಳು ಸಂಶೋಧನೆ ಕೈಗೊಳ್ಳಲು ಪ್ರತಿ ತಿಂಗಳು ನೀಡಲಾಗುತ್ತಿದ್ದ ಪ್ರೋತ್ಸಾಹಧನ 25 ಸಾವಿರ ರು.ವನ್ನು ಕಡಿತಗೊಳಿಸಿ 8333 ರು. ನೀಡಲು ಯೋಜನೆ ರೂಪಿಸಿದ್ದರಿಂದ ವಿದ್ಯಾಥರ್ಿಗಳಲ್ಲಿ ಈಗ ಸಂಶೋಧನೆ ಪೂರ್ಣಗೊಳಿಸದಂತಹ ವಾತಾವರಣ ನಿಮರ್ಾಣಗೊಂಡಿದ್ದು ಸಾವಿರಾರು ವಿದ್ಯಾಥರ್ಿಗಳು ಶಿಕ್ಷಣದಿಂದ ವಂಚಿತರಾಗುವಂತೆ ಆಗಿದೆ. ಇದರೊಂದಿಗೆ ಅಲ್ಪ ಸಂಖ್ಯಾತ ನಿಗಮದ ಮೂಲಕ ಅನುಷ್ಠಾನ ಮಾಡಲಾಗುತ್ತಿರುವ "ಅರಿವು" ಶೈಕ್ಷಣಿಕ ಸಾಲದ ಯೋಜನೆ ಸಹ ಈ ವರ್ಷ ದಾರಿ ತಪ್ಪಿದೆ. ಹೀಗಾಗಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಯಾವುದೇ ಹೊಸ ಯೋಜನೆ ಜಾರಿಗೊಳಿಸದೇ ಇದ್ದರೂ ಈಗಾಗಲೆ ಇರುವ ಎಲ್ಲ ಯೋಜನೆಗಳನ್ನು ಮುಂದುವರೆಸಬೇಕು ಹಾಗು ಅಲ್ಪ ಸಂಖ್ಯಾತರ ಶೈಕ್ಷಣಿಕವಾಘಿ ಮುಂದುವರೆಯಲು ಅಡ್ಡಿಯಾಗದಂತೆ ತುತರ್ು ಕ್ರಮ ತೆಗೆದುಕೊಂಡು ಯೋಜನೆಗಳನ್ನು ಮುಂದುವರೆಸಿ ಅಗತ್ಯ ಅನುಧಾನವನ್ನು ಹಿಂದಿನಂತೆ ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಜಾಜರ್್ ಫನರ್ಾಂಡಿಸ್, ಅಲ್ತಾಫ್ ಶೇಖ್, ಖೈರುನ್ನಿಸಾ ಶೇಖ್, ಸಾಮಸನ್ ಡಿ.ಸೋಜಾ, ಇಮ್ತಿಯಾಜ್ ಬುಖಾರಿ, ಇಬ್ರಾಹಿಂ ಕಲ್ಲೂರ, ಆಸ್ಯಿನ್ ಫನಾಂಡಿಸ್ ಮುಂತಾದವರು ಇದ್ದರು.