ಬ್ಯಾಡ್ಗಿ

ಕಾಂಗ್ರೆಸ್ ಭವನದಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ

ಕಾಂಗ್ರೆಸ್ ಭವನದಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ

ಲೋಕದರ್ಶನ ವರದಿ

ಬ್ಯಾಡಗಿ 31: ಮೊದಲ ಪಟ್ಟಿಯಲ್ಲಿ ಬ್ಯಾಡಗಿ ಮತಕ್ಷೇತ್ರದ ಕಾಂಗ್ರೆಸ್ನ ಟಿಕೆಟ್ ಮಾಜಿ ಸಚಿವ ಬಸವರಾಜ ಶಿವಣ್ಣನವರ ಅವರಿಗೆ ಘೋಷಣೆಯಾಗಿದೆ, ಆದರೆ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ಯಾರೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹಾಗೂ ಬ್ಲಾಕ್ ಅಧ್ಯಕ್ಷರ ಅಭಿಪ್ರಾಯವನ್ನು ಪಡೆಯದೇ ಹೈಕಮಾಂಡ್ ಏಕಪಕ್ಷೀಯವಾಗಿ ನಿರ್ಣಯಿಸಿದ್ದನ್ನು ಮತ್ತೊಮ್ಮೆ ಪರಿ ಶೀಲಿಸುವಂತೆ ಬ್ಯಾಡಗಿ ಬ್ಲಾಕ್ ಅಧ್ಯಕ್ಷ ದಾನಪ್ಪ ಚೂರಿ ಆಗ್ರಹಿಸಿದರು.

 ಪಟ್ಟಣದಲ್ಲಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಎಂದ ಮೇಲೆ ಆಕಾಂಕ್ಷಿಗಳಿರುವುದು ಸಹಜ, ಆದರೆ ಬಸವರಾಜ ಶಿವಣ್ಣನವರ ಸೇರಿದಂತೆ 8 ಜನರು ಟಿಕೆಟ್ ನೀಡುವಂತೆ ಕೆಪಿಸಿಸಿಗೆ ಮನವಿ ಮಾಡಿಕೊಂಡಿದ್ದೆವು, ಆದರೆ ಟಿಕೆಟ್ ಘೋಷಣೆಗೂ ಮುನ್ನ ಆಕಾಂಕ್ಷಿಗಳ ಜೊತೆಗೆ ಚರ್ಚಿಸದೇ ನಿರ್ಧರಿಸಿ ರುವುದು ನಮ್ಮಲ್ಲಿ ಅಸಮಾಧಾನದ ಮೂಡಿಸಿದೆ ಎಂದರು.

ಎಸ್.ಆರ್.ಪಾಟೀಲಗೆ ನೀಡಬೇಕಾಗಿತ್ತು: ಟಿಕೆಟ್ ಆಕಾಂಕ್ಷಿ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಜಿಲ್ಲೆಗೊಬ್ಬರಿಗೆ ಯುವಕರಿಗೆ ಅವಕಾಶ ನೀಡುವುದಾಗಿ ವರಿಷ್ಟರ ಭರವಸೆಯನ್ನು ನೀಡಿದ್ದರು, ಇದೀಗ ಟಿಕೆಟ್ ಹಂಚಿಕೆಯನ್ನು ನೋಡಿದರೆ ಮೊದಲಿ ದ್ದವರಿಗೆ ಮಣೆ ಹಾಕಲಾಗಿದೆ, ಕಳೆದ ಬಾರಿ ಕೇವಲ 20 ಸಾವಿರ ಮತಗಳ ಅಂತರದಿಂದ ಸೋತಿದ್ದ ಎಸ್.ಆರ್. ಪಾಟೀಲ ಸೋತ ಬಳಿಕವೂ ಬ್ಯಾಡಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವುದನ್ನು ನಿಲ್ಲಿಸಿರಲಿಲ್ಲ, ಕಳೆದ 4 ದಶಕ ಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದ ಎಸ್.ಆರ್.ಪಾಟೀಲ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕಾಗಿತ್ತು ಎಂದರು.

ಒಮ್ಮತದಿಂದ ಎದುರಿಸೋಣ:ನಾಗರಾಜ ಆನ್ವೇರಿ ಮಾತನಾಡಿ, ಈಗಾಗಲೇ ಬಸವರಾಜ ಶಿವಣ್ಣನವರ ಅವರಿಗೆ ಟಿಕೆಟ್ ಘೋಷಿಸಿದ ಬಳಿಕವೂ ಆಕಾಂಕ್ಷಿಗಳಲ್ಲಿ ಒಬ್ಬರಾದ ಎಸ್.ಆರ್.ಪಾಟೀಲರು ಬೆಂಬಲಿಗರ ಸಭೆಯನ್ನು ಕರೆದಿದ್ದಾರೆ, ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು, ಪಕ್ಷ ಸೂಚಿಸಿದ ಅಭ್ಯರ್ಥಿಗೆ ಒಮ್ಮತದಿಂದ ಚುನಾವಣೆ ಎದು ರಿಸುವ ಕುರಿತು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇಂತಹ ಸಭೆಗಳಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದರು. 

ಮತ್ತೊಮ್ಮೆ ಪರಿಶೀಲಿಸಿ: ಆಕಾಂಕ್ಷಿ ಶಿವಪ್ಪ ಅಂಬಲಿ ಮಾತನಾಡಿ, ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಆದರೆ ಇದೀಗ ಉದ್ಭವಿಸಿರುವ ಭಿನ್ನಮತವನ್ನು ಶಮನಗೊಳಿಸಿದಲ್ಲಿ ಮಾತ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯ ಕೂಡಲೇ ಹೈ ಕಮಾಂಡ್ ತಾವು ತೆಗೆದುಕೊಂಡಿರುವ ನಿರ್ಧಾರವನ್ನು ಮತ್ತೊಮ್ಮ ಪರಿಶೀಲಿಸುವಂತೆ ಆಗ್ರಹಿಸಿದರು.

ಈ ವೇಳೆ ಆಕಾಂಕ್ಷಿಗಳಾದ ಸುರೇಶಗೌಡ ಪಾಟೀಲ, ಶಂಕರಗೌಡ ಪಾಟೀಲ, ಮುಖಂಡರಾದ ಬಸವರಾಜ ಸವಣೂರ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ರುದ್ರಪ್ಪ ಹೊಂಕಣದ, ಆರ್.ಜಿ.ಕಳ್ಳ್ಯಾಳ, ರಮೇಶ ಸುತ್ತಕೋಟಿ, ಮಹ್ಮದ್ ರಫೀಕ್ ಮುದ್ಗಲ್, ಖಾದರ್ಸಾಬ್ ದೊಡ್ಮನಿ, ಮಾರುತಿ ಅಚ್ಚಿಗೇರಿ, ಮಂಜುನಾಥ ಬೋವಿ, ತೋಟಪ್ಪ ಅಕ್ಕಿ, ಯುವ ಘಟಕದ ಅಧ್ಯಕ್ಷ ಬೀರಪ್ಪ ಸೇರಿದಂತೆ ಇನ್ನಿತರರಿದ್ದರು 

ಸುದ್ದಿ ಓದಿ