ಕಾರವಾರ

5 ವರ್ಷದೊಳಿಗಿನ ಎಲ್ಲಾ ಮಕ್ಕಳಿಗೆ ಪೊಲಿಯೊ ಲಸಿಕೆ ತಲುಪಬೇಕು: ಜಿಲ್ಲಾಧಿಕಾರಿ

5 ವರ್ಷದೊಳಿಗಿನ ಎಲ್ಲಾ ಮಕ್ಕಳಿಗೆ ಪೊಲಿಯೊ ಲಸಿಕೆ ತಲುಪಬೇಕು: ಜಿಲ್ಲಾಧಿಕಾರಿ

ಕಾರವಾರ 18: 5 ವರ್ಷದೊಳಿಗಿನ ಯಾವುದೇ ಮಗು ಕೂಡಾ ಬಿಟ್ಟು ಹೋಗದಂತೆ ಎಲ್ಲಾ ಮಕ್ಕಳಿಗೂ ಪಲ್ಸ್ಪೊಲಿಯೋ ಲಸಿಕೆ ತಲುಪುವಂತಾಗಬೇಕೆಂದು   ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ  ಸೂಚಿಸಿದರು.  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಂಡಿದ್ದ ಪಲ್ಸ್ಪೊಲಿಯೊ ಮತ್ತು ಕೋವಿಡ್ -19 ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯವೆ ಮುಖ್ಯವಾಗಿರುವಂತಹ ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಮಗು ಕೂಡಾ ಪೊಲಿಯೊ ಲಸಿಕೆಯಿಂದ ವಂಚಿತರಾಗಬಾರದು . ಅರೋಗ್ಯ ಮತ್ತು ಶಿಕ್ಷಣ ಇಲಾಖೆ ಆಧುನಿಕತೆಯ ಆವಿಷ್ಕಾರಗಳೆನ್ನಲ್ಲಾ ಬಳಸಿಕೊಂಡು  ತಳ ಹಂತದವರೆಗೂ ಲಸಿಕೆ  ತಲುಪುವಂತೆ ಮಾಡಬೇಕೆಂದರು.

ಕೋವಿಡ್-19 ಸನ್ನಿವೇಶದಲ್ಲಿ ಅತ್ಯಂತ ಜಾಗರುಕತೆಯಿಂದ ಎಲ್ಲ ಮಕ್ಕಳಿಗೂ ಲಸಿಕೆ ಹಾಕಬೇಕು, ಒಂದೇ ಒಂದು ಮಗು ಲಸಿಕೆಯಿಂದ ವಂಚಿತರಾಗಿ ಮುಂದೆ 4 ವರ್ಷಗಳ ನಂತರ  ಪೊಲೀಯೋ ಪ್ರಕರಣ ಕಂಡು ಬಂದರು ಕೂಡಾ ಕೋವಿಡ್-19 ಸನ್ನಿವೇಶದಿಂದಾಗಿ ಈ ರೀತಿಯಾಗಿದೆ ಎಂಬಂತಾಗುತ್ತದೆ. ಈ ಹಿನ್ನಲೆಯಲ್ಲಿ  ಆರೋಗ್ಯ ಇಲಾಖೆಯ ಆಶಾಕಾರ್ಯಕತೆಯರು, ಅಂಗನವಡಿ ಕರ್ಯಕತರ್ೆಯರು ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ಸೇರಿದಂತೆ  ಇತರರೆಲ್ಲರ ಸಹಕಾರದೊಂದಿಗೆ  ಪಲ್ಸಪೊಲಿಯೊ ಕಾರ್ಯಕ್ರಮದ  ಹೊಸತನಕ್ಕೆ ನಾಂದಿ ಹಾಡಬೇಕಗಿದೆ ಎಂದರು.  

ಆರ್.ಸಿ.ಎಚ್.ಒ ಅಧಿಕಾರಿ ಡಾ. ರಮೇಶ ರಾವ್ ಮಾತನಾಡಿ ಜಿಲ್ಲೆಯಲ್ಲಿ 2021 ಜನವರಿ 17 ರಂದು ಪಲ್ಸ್ ಪೊಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಲಾಗುವುದು.  ಆರೋಗ್ಯ ಸಿಬಂದ್ದಿ ಮನೆ ಮನೆಗೆ ಬೇಟಿ ನಿಡಿ ಮನೆಯ ಹೊರಗಡೆಯೆ ಮಕ್ಕಳನ್ನು ಮುಟ್ಟದೆ ಪೋಷಕರ ಸಹಾಯದೊಂದಿಗೆ ಪೊಲೀಯೊ ಲಸಿಕೆಯನ್ನು ಹಾಕುವ ವ್ಯವಸ್ಥೆಯನ್ನು ಮಾಡಲಗವುದು ಎಂದರು. 

ಸವರ್ಿಲಿಯನ್ಸ್ ಮೇಡಿಕಲ್ ಆಫೀಸರ್ (ಎಸ್.ಎಮ್.ಒ) ಡಾ.ಸಿದ್ದಲಿಂಗಯ್ಯಾ ಅವರು ಕೋವಿಡ್ ಲಸಿಕೆ ಕಾರ್ಯಕ್ರಮ ಕುರಿತಂತೆ ವಿವರಿಸಿ ಕೋವಿಡ್-19 ಲಸಿಕೆ ಹಾಕುವ ಸಿದ್ದತೆಯನ್ನು ಈಗಿನಿಂದಲೆ ಮಾಡಿಕೊಳ್ಳಬೇಕು ಲಸಿಕೆ ಬಂದ ತಕ್ಷಣ ಮೊದಲನೆಯ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕತರ್ೆರಿಗೆ, ಎರಡನೇಯ ಹಂತದಲ್ಲಿ ಪೋಲಿಸ್ ಗೃಹರಕ್ಷಕದಳ, ಪೌರ ಕಾಮರ್ಿಕರು ಮತ್ತು ಮೂರನೇಯ ಹಂತದಲ್ಲಿ ಹೈ ರಿಸ್ಕ್ ಗುಂಪಿನ ವಯೋವೃದ್ಧರಿಗೆ ಆಧ್ಯತೆ ಮೆರೆಗೆ ಲಸಿಕೆ ನಿಡಲು ಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ. ಉಳಿದಂತೆ ಹಂತ ಹಂತವಾಗಿ ಎಲ್ಲ ಸಾರ್ವಜನಿಕರಿಗೆ ಲಸಿಕೆ ತಲುಪುವಂತೆ ಸಿದ್ದತೆ ಮಾಡಿಕೊಳ್ಳಬೇಕೆಂದು ಆರೋಗ್ಯಧಿಕಾರಿಗಳಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ ನಾಯಕ ಸೇರಿದಂತೆ ಇತರರು ಹಾಜರಿದ್ದರು.


ಸುದ್ದಿ ಓದಿ