84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಂಜಿಸಿದ ಕವನ ವಾಚನ
ಬಳ್ಳಾರಿ,ಜ.10: ಇತ್ತಿಚೆಗೆ ದಾರವಾಡದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಳ್ಳಾರಿಯ ಕವಿ ಟಿ.ಗುರುರಾಜಾಚಾರ್ ಅವರು "ನಿನ್ನನ್ನೇ ತುಂಬಿಕೊಳ್ಳುವೆ" ಎನ್ನುವ ತಿಳಿಹಾಸ್ಯಯುಕ್ತ ವಿಡಂಬನಾತ್ಕಕ ಕವನವನ್ನು ವಾಚಿಸಿ ಸಭೆಯನ್ನು ರಂಜಿಸಿದರು. ನಗೆ, ಹಷರ್ೊದ್ಗಾರ, ಸಿಳ್ಳು ಹಾಗೂ ಚಪ್ಪಾಳೆಗಳೊಂದಿಗೆ ಶ್ರೋತೃಗಳು ಪ್ರತಿಕ್ರಿಯಿಸಿದ ರೀತಿ ರೋಚಕವಾಗಿತ್ತು. ಬಳ್ಳಾರಿಯನ್ನು ಪ್ರತಿನಿಧಿಸಿದ್ದ ಗುರುರಾಜಾಚಾರ್ಯರಿಗೆ ಈ ಐತಿಹಾಸಿಕ ಸಂದರ್ಭ ಧನ್ಯತಾಭಾವವನ್ನು ಮೂಡಿಸಿತ್ತು. ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸರಜೂ ಕಾಟ್ಕರ್ ಆಶಯ ನುಡಿ ನುಡಿದರೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.