ಬೈಲಹೊಂಗಲ

ಕಾವ್ಯ ಎಲ್ಲರ ಮನಸ್ಸನ್ನು ಮೃದುಗೊಳಿಸುವ ಮಧುರ ಭಾವ: ಬೇವಿನಗಿಡದ

ಕಾವ್ಯ ಎಲ್ಲರ ಮನಸ್ಸನ್ನು ಮೃದುಗೊಳಿಸುವ ಮಧುರ ಭಾವ:  ಬೇವಿನಗಿಡದ

ಬೈಲಹೊಂಗಲ: ಕಾವ್ಯ ಎಲ್ಲರ ಮನಸ್ಸನ್ನು ಮೃದುಗೊಳಿಸುವ ಮಧುರ ಭಾವ ಎಂದು ಸಾಹಿತಿ,  ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಬಸು ಬೇವಿನಗಿಡದ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ಬೈಲಹೊಂಗಲ ಹಾಗೂ ಗದಗ ಹಾಸ್ಪಿಟಲ್, ಬೈಲಹೊಂಗಲ ಅವರ ಸಹಯೋಗದಲ್ಲಿ ಪಟ್ಟಣದ ಗಣಾಚಾರಿ ಮಹಾವಿದ್ಯಾಲಯದಲ್ಲಿ ಕಿತ್ತೂರು ಉತ್ಸವದ ನಿಮಿತ್ತ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ಸ್ಥಳೀಯ ಭಾಷೆ, ಶೈಲಿ, ವಸ್ತುವನ್ನು ಬಳಸಿಕೊಂಡು ಸಾಹಿತ್ಯ ಕೃಷಿ ಮಾಡಿದರೆ ಅದು ಅತ್ಯಂತ ಶಕ್ತಿಶಾಲಿಯಾಗಬಲ್ಲದು ಎಂದು ಅವರು ಹೇಳಿದರು. ಯರಗಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಆಶಯ ನುಡಿಗಳನ್ನಾಡಿ ಉತ್ತಮ ಸಾಹಿತ್ಯ ಹೃದಯ ಅರಳಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕವಿಗಳು ಎಲ್ಲ ಪ್ರಕಾರದ ಸಾಹಿತ್ಯವನ್ನು ಓದುವುದರಿಂದ ವಿಶಿಷ್ಟ ಅನುಭವ ಪಡೆದಂತಾಗುತ್ತದೆಯಲ್ಲದೇ ವಿಭಿನ್ನ ಕವಿತೆಗಳು ಸೃಷ್ಟಿಯಾಗುತ್ತವೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಟಗುಡ ಮಾತನಾಡಿ ಕನ್ನಡ ನಾಡು, ನುಡಿ, ಸಂಸ್ಕ್ರತಿ, ಮೌಲ್ಯಗಳು ಮುಂತಾದ ವಿವಿಧ ವಿಷಯಗಳ ಬಗ್ಗೆ ವಾಚಿಸಿದ ಕವನಗಳನ್ನು ಆಸ್ವಾದಿಸಿದಾಗ ಆಗುವ ಆನಂದ ಬಹಳ ದೊಡ್ಡದು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಬರೆದಿಟ್ಟ ಕವಿತೆಗಳನ್ನು ಪುಸ್ತಕದ ರೂಪದಲ್ಲಿ ಹೊರತಂದು ಕನ್ನಡ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವಂತೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಅಗಮಿಸಿದ ಪಟ್ಟಣದ ಗದಗ ಆಸ್ಪತ್ರೆಯ ಖ್ಯಾತ ಹೃದಯ ಹಾಗೂ ಮಧುಮೇಹ ರೋಗ ತಜ್ಞರಾದ ಡಾ. ಮಹಾಂತೇಶ ಪ. ಗದಗ ಮಾತನಾಡಿ ಸಾಹಿತ್ಯ ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು. ಪ್ರಸ್ತಾವಿಕವಾಗಿ ಮಾತನಾಡಿದ ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಓದುಗರ ಮನ ಮುಟ್ಟುವ ಗುಣಮಟ್ಟದ ಕಾವ್ಯ ನಮ್ಮದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗದಗ ಆಸ್ಪತ್ರೆಯ ಖ್ಯಾತ ಹೆರಿಗೆ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಸುಷ್ಮಾ ಎಂ. ಗದಗ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ. ಚಂದ್ರಶೇಖರ ಬಿ.ಗಣಾಚಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ತಾಲೂಕು ಕಸಾಪ ಗೌರವ ಕೋಶಾಧ್ಯಕ್ಷ ಮಹೇಶ ಕೋಟಗಿ, ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ ಪಾಟೀಲ, ಲಕ್ಷ್ಮೀ ಮುಗಡ್ಲಿಮಠ, ಶಶಿಕಲಾ ಯಲಿಗಾರ, ಅನಿಲ ರಾಜಣ್ಣವರ, ಆರ್.ಎಂ. ಹೋಟಕರ, ಕವಿ-ಕವಯತ್ರಿಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ ಹಡಪದ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ ಸ್ವಾಗತಿಸಿದರು. ಶ್ರೀಶೈಲ ಗದಗ ಕನ್ನಡ ಗೀತಗಾಯನ ನಡೆಸಿಕೊಟ್ಟರು. ಭಾರತಿ ಬಳಗಪ್ಪನವರ ಪ್ರಾರ್ಥಿಸಿದರು. ರಾಜು ಹಕ್ಕಿ ವಂದಿಸಿದರು.

ಡಾ. ಪ್ರೇಮಾ ಯಾಕೊಳ್ಳಿ, ಡಾ. ನಾಗೇಂದ್ರ ಚಲವಾದಿ, ಪ್ರೊ. ಚಂದ್ರಶೇಖರ ಸಣ್ಣನಾಯ್ಕರ, ಬಿ.ವಿ.ನೇಸರಗಿ, ಆನಂದ ಹಕ್ಕೆನ್ನವರ, ಶಿವಾನಂದ ಭಾಗಾಯಿ, ವಸುಧಾ ಕಾಮತ, ಸಿದ್ದು ನೇಸರಗಿ, ಬಿ.ಎಚ್. ಶೀಗಿಹಳ್ಳಿ, ಬಸವರಾಜ ವೀರಶೆಟ್ಟಿ, ಸಿದ್ದಪ್ಪ ಗೊಡಚಿ, ಸವಿತಾ ಪಾಟೀಲ, ಸಿದ್ದಲಿಂಗಯ್ಯ ಹಿರೇಮಠ, ಬಸವರಾಜ ಹೊನಗೌಡರ, ಎಸ್.ಬಿ. ಬೆಳವಡಿ, ಶ್ರೀಕಾಂತ ದೇವಲತ್ತಿ, ರಾಧಾ ಶ್ಯಾಮರಾವ್, ಸುಖದೇವಾನಂದ ಚವತ್ರಿಮಠ, ಈರಪ್ಪ ಅಬ್ಬಾರ, ಚಂದ್ರಶೇಖರ ಕೊಪ್ಪದ, ಎಂ.ಡಿ. ಭಾವಾಖಾನ, ಕಿರಣ ಗಣಾಚಾರಿ, ಎಂ.ಐ.ನಾವಲಗಿ, ಜಿ.ಎಸ್. ಚಕ್ರಸಾಲಿ, ವಿಜಯಕುಮಾರ ಮೇದಾರ, ಬಿ.ವಿ.ಪತ್ತಾರ, ರಾಜಶೇಖರ ಸರದೇಸಾಯಿ, ಶಿಲ್ಪಾ ಉಪಾಧ್ಯೆ, ಸಾಕ್ಷಿ ಹಿರೇಮಠ, ಶ್ರೀಶೈಲ ಹೆಬ್ಬಳ್ಳಿ, ತನುಜಾ ಬಡಿಗೇರ, ಬಸವರಾಜ ಭಜಂತ್ರಿ, ರಾಜೇಶ್ವರಿ ಸೊಗಲದ, ಬಿ.ಎಸ್. ಮಾಟೊಳ್ಳಿ, ಜಾನಕಿದೇವಿ ಭದ್ರಣ್ಣವರ, ಮಹಾಂತೇಶ ಕುಂಬಾರ, ಕಲ್ಲಪ್ಪ ಕರ್ಕಿ, ಜಿ.ಎಸ್.ರಬೈನವರ, ಮಲ್ಲಿಕಾರ್ಜುನ ಕುರಿ, ಇಂದುಮತಿ ರಾಘವೇಂದ್ರ, ಶ್ರೀಶೈಲ ಹೊಸೂರ, ಶ್ರೀನಾಥ ಯಲಿಗಾರ, ಬಸವಣ್ಣೆಪ್ಪ ಕಾದ್ರೊಳ್ಳಿ, ಎಸ್.ಜಿ. ಜಹಗೀರದಾರ, ಪ್ರಕಾಶ ಮರಿತಮ್ಮನವರ, ಲಲಿತಾ ಮಿಣಚಿ, ಸಾವಿತ್ರಿ ಹೊತ್ತಿಗಿಮಠ, ಸಾಗರ ಝಂಡೆನ್ನವರ, ಸರಸ್ವತಿ ಬನ್ನಿಗಿಡದ, ಲಕ್ಷ್ಮೀ ಕಟಗಿ, ವೀರಪ್ಪ ಜಂಗಣ್ಣವರ, ಶ್ರೀದೇವಿ ಪಾಟೀಲ, ಚಿದಾನಂದ ಹೂಗಾರ, ಜ್ಯೋತಿ ಸಿ.ಎಂ, ರೂಪಾರಾಣಿ ಪಟಗಾರ, ಉದಯಚಂದ್ರ ದಿಂಡವಾರ, ಶ್ವೇತಾ ಕಾಡಣ್ಣವರ, ವೀರಣ್ಣ ಹೂಲಿ, ಪ್ರೀತಿ ತುಳಜಣ್ಣವರ, ವಿಜಯಕುಮಾರ ಕಿಳ್ಳಿಕೇತರ, ರಾಧಾ ಹನುಮಂತಪ್ಪ.ಟಿ ಕವಿ-ಕವಯತ್ರಿಯರು ಕವನ ವಾಚಿಸಿದರು.


ಸುದ್ದಿ ಓದಿ