ಡಿಎಂಎಫ್ ಬಳಕೆಗೆ ಜನರ ಸಹಭಾಗಿತ್ವ ಹೆಚ್ಚಲಿ
ಬಳ್ಳಾರಿ: ಡಿಎಂಎಫ್ ಫಂಡ್ ಗಣಿ ಭಾದಿತ ಜನರ ಕಲ್ಯಾಣಕ್ಕಾಗಿ ಇರುವುದು. ಆದರೆ ಈ ಫಂಡ್ ಕುರಿತು ಜನಸಾಮಾನ್ಯರಿಗೆ ಮಾಹಿತಿ ಮತ್ತು ಇದರ ಅನುಕೂಲಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದರಿಂದ ಈಗಲೂ ಸಹ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಪರದಾಡುವ ಸ್ಥಿತಿ ನಿಮರ್ಾಣವಾಗಿದೆ. ಇದರ ಕುರಿತು ಪ್ರಚಾರ ಗ್ರಾಮಮಟ್ಟದಲ್ಲಿ ಹೆಚ್ಚಾಗಬೇಕು ಎಂದು ಎಂಎಂಪಿಯ ಪ್ರಧಾನ ಕಾರ್ಯದಶರ್ಿಗಳಾದ ಅಶೋಕ್ ಶ್ರೀಮಾಲಿ ತಿಳಿಸಿದರು. ಮುಂದುವರೆದು, ಗಣಿ ಭಾದಿತರು ಸಾಮಾಜಿಕವಾಗಿ, ಆಥರ್ಿಕವಾಗಿ ಹಿಂದುಳಿದಿದ್ದಾರೆ, ಇವರ ವಿಕಾಸವಾಗಬೇಕಿದೆ. ಅಭಿವೃದ್ಧಿ ಕೆಲಸ ಕಾರ್ಯಗಳಾಗಬೇಕಿದೆ. ಡಿಎಂಎಫ್ ಫಂಡ್ ಸದುಪಯೋಗವಾಗಲು ಜನರ ಸಹಭಾಗಿತ್ವ ಅಗತ್ಯವಿದೆ ಎಂದು ತಿಳಿಸಿದರು.
ಎಂಎಂಪಿ ಕಾರ್ಯಕಾರಣಿ ಸದಸ್ಯರಾದ ಶಿವಕುಮಾರ ಮಾಳಗಿ ಮಾತನಾಡಿ, ಬಳ್ಳಾರಿ ಜಿಲ್ಲೆ ಗಣಿಗಾರಿಕೆಯ ಹಣ ಒಟ್ಟು 768 ಕೋಟಿ ಗಳಿದ್ದು, ಇದರಲ್ಲಿ 391ಕೋಟಿಗೆ 264 ಯೋಜನೆಗಳನ್ನು ಅಂದಾಜು ಮಾಡಲಾಗಿತ್ತು, ಇದರಲ್ಲಿ ಕೇವಲ 24ಕೋಟಿಗಳನ್ನು ಮಾತ್ರ ಖಚರ್ು ಮಾಡಲಾಗಿದೆ. ಜನರಿಗೆ ಡಿಎಂಎಫ್ ಫಂಡ್ ಬಗ್ಗೆ ಮಾಹಿತಿ ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆಯಲ್ಲಿ ಇದರ ಬಗ್ಗೆ ಚಚರ್ೆಗಳಾಗಬೇಕು. ಡಿಎಂಎಫ್ ಫಂಡ್ ಅರ್ಹ ಫಲಾನುಭವಿಗಳಿಗೆ ತಲುಪಬೇಕೆಂದರು.
ಶಿವಕುಮಾರ ಮಾಳಗಿ ತಮ್ಮ ಮಾತುಗಳನ್ನು ಮುಂದುವರೆಸಿ, ಗಣಿ ಭಾದಿತ ಜನರ ಕಲ್ಯಾಣಕ್ಕಾಗಿ ರೂಪಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಮುದಾಯದ ಪಾಲ್ಗೋಳ್ಳುವಿಕೆ ಕಡ್ಡಾಯವಾಗಬೇಕು ಮತ್ತು ಅವರ ತೀಮರ್ಾನವೆ ಅಂತಿಮವಾಗಿರಬೇಕು. ಡಿಎಂಎಫ್ ಯೋಜನೆಗಳನ್ನು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರೂಪಿಸಬೇಕು. ಮತ್ತು ಆ ಪಂಚಾಯತ್ ರೂಪಿಸಿದ ಕ್ರಿಯಾ ಯೋಜನೆಗೆ ಅಗತ್ಯವಾಗಿರುವ ಅನುದಾನವನ್ನು ಡಿಎಂಎಫ್ ವತಿಯಿಂದ ಒದಗಿಸಿ ಕೊಡಬೇಕು. ಪಿಎಂಕೆಕೆವೈ ಅಡಿಯಲ್ಲಿ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳು ಗಣಿಭಾದಿತ ಗ್ರಾಮ ಮತ್ತು ಪಟ್ಟಣ ಕೇಂದ್ರೀಕೃತವಾಗಿದ್ದು, ಮೈಕ್ರೊ ಲೆವೆಲ್ ಪ್ಲಾನಿಂಗ್ ಇರಬೇಕು. ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಮತ್ತು ಪಟ್ಟಣ ಸಭೆಗಳು ನಡೆಸುವ ಮೂಲಕ ಮಾಡಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಗಣಿಗಾರಿಕೆಯಿಂದ ನೇರವಾಗಿ ಭಾದಿತರಾದ ಎಲ್ಲ ಸಮುದಾಯಗಳ ಜನರಿಗೆ ಮೊದಲ ಆದ್ಯತೆ ನೀಡಬೇಕು. ಡಿಎಂಎಫ್ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಪ್ರತಿ ಗ್ರಾಮಮಟ್ಟದಲ್ಲೂ ವ್ಯಾಪಕ ಪ್ರಚಾರ ನೀಡಬೇಕು. ಗ್ರಾಮಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆಯನ್ನು ನಡೆಸಬೇಕು.
ಜಿಲ್ಲಾ ಮಟ್ಟದಲ್ಲಿ ಮತ್ತು ಉಪವಿಭಾಗೀಯ ಮಟ್ಟದಲ್ಲಿ ಪ್ರತ್ಯೇಕವಾಗಿ ಡಿಎಂಎಫ್ ಕಛೇರಿಯನ್ನು ತೆರೆದು ಅಗತ್ಯ ಸಿಬ್ಬಂದಿ ನೇಮಿಸಬೇಕು. 2018 ಫೆಬ್ರವರಿ ಮಾಚರ್್ ತಿಂಗಳಲ್ಲಿ ಡಿಎಂಎಫ್ ವತಿಯಿಂದ ತೋಟಗಾರಿಗೆ, ಪಶು ಸಂಗೋಪನೆ ಇಲಾಖೆಯಿಂದ ಆಯ್ಕೆ ಮಾಡಿದ ಫಲಾನುಭವಿಗಳಿಗೆ 2018 ಮೇ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಕಾರಣವೊಡ್ಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡಿರುವುದಿಲ್ಲ. ಈ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಸಕ್ರಿಯರಾಗಿರುವ ಸ್ತ್ರೀ ಶಕ್ತಿ ಗುಂಪುಗಳು, ಕುರಿಗಾರರ ಸಂಘಗಳು, ನಿರುದ್ಯೋಗಿ ಯುವಕ-ಯುವತಿಯರಿಗೆ, ಕೃಷಿ ಕೂಲಿಗಾರರ ಸಂಘ ಇವರೆಲ್ಲರಿಗೂ ಕೂಡ ಸ್ವ ಉದ್ಯೋಗ ಕೈಗೊಳ್ಳಲು ಸಹಾಯಧನ ನೀಡಬೇಕು. ಮಕ್ಕಳ ಮತ್ತು ಮಹಿಳೆಯರ ಅಪೌಷ್ಠಿಕತೆ ನಿವಾರಣೆಗೆ ಮತ್ತು ಸಕರ್ಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಅಗತ್ಯ ಅನುದಾನ ನೀಡಬೇಕು. ಡಿಎಂಎಫ್ ನಿರ್ವಹಣಾ ಸಮಿತಿಯಲ್ಲಿ ಗಣಿಭಾಧಿತ ಜನರ ಪ್ರತಿನಿಧಿಗಳನ್ನು ನಾಮ ನಿದರ್ೇಶನ ಮಾಡಬೇಕು.
ಸಾಮಾಜಿಕ ಹೋರಾಟಗಾರರಾದ ಮಲ್ಲಿ ಸ್ವಾಮಿ ಮಾತನಾಡಿ, ಮನುಷ್ಯ ನಿಸರ್ಗದತ್ತವಾಗಿ ಜೀವಿಸಬೇಕು, ಗಣಿಗಾರಿಕೆಯಿಂದ ನಿಸರ್ಗ ಹಾಳಾಗಿದೆ, ಇದರಿಂದ ಇರುವಬ ಡಿಎಂಎಫ್ ಫಂಢ್ ಅನ್ನು ಸದುಪಯೋಗಪಡಿಸಿಕೊಳ್ಳಬೇಕು, ಜನರಿಗೆ ಮೂಲಭೂತ ಸೌಕರ್ಯಗಳು ನೀಡಬೇಕು ಎಂದರು, ಜೊತೆಗೆ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ, ಅವಗಳನ್ನು ನಿಯಂತ್ರಿಸಬೇಕೆಂದು ಸಲಹೆ ನೀಡಿದರು. ಗಣಿ ಕುರಿತು ಸಾಕ್ಷಾಚಿತ್ರವನ್ನು ಪ್ರದಶರ್ಿಸಿದರು. ಸಂವಾದ ನಡೆಯಿತು.
ಜಗನ್ನಾಥ್.ಜೆ ಡಿಎಸ್ಎಸ್ ಮುಖಂಡರು, ಭಾಗ್ಯ ಎಂಎಂಪಿ ಕಾರ್ಯಕಾರಣಿ ಸದಸ್ಯರು, ಗೋಪಿ.ವೈ ಜಿಲ್ಲಾ ಗಣಿ ಕಾಮರ್ಿಕ ಸಂಘ, ಅಮರೇಶಪ್ಪ ಸಾಮಾಜಿಕ ಹೋರಾಟಗಾರ, ಬಸವರಾಜ್ ಎಸ್.ಪಿ ಪ್ರಧಾನಕಾರ್ಯದಶರ್ಿ ವಿಭೂತಿಗುಡ್ಡ ಮೈನ್ಸ್, ಗಾಳೆಮ್ಮ, ದೇವಮ್ಮ, ರೂಪ, ಲಕ್ಷ್ಮಿ, ಮತ್ತಿತರರು ಹಾಜರಿದ್ದರು.