ಗೋಕಾಕ್

ಪಾವಟೆ ಜಯಂತಿ ಜಿಲ್ಲಾ ಮಟ್ಟದ ಗಣಿತ ಸ್ಪರ್ಧೆ

ಪಾವಟೆ ಜಯಂತಿ ಜಿಲ್ಲಾ ಮಟ್ಟದ ಗಣಿತ ಸ್ಪರ್ಧೆ

ಗೋಕಾಕ : ತಾಲೂಕಿನ ಮಮದಾಪೂರದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಪ್ರತಿ ವರ್ಷದಂತೆ ಗಣಿತಜ್ಞ, ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ, ರಾಂಗ್ಲರ ಡಿ ಸಿ. ಪಾವಟೆ ಯವರ 124ನೇ ಜನ್ಮ ದಿನೋತ್ಸವದ ಅಂಗವಾಗಿ 7ನೇ ಮತ್ತು 10ನೇ ವರ್ಗದ (ಕೇವಲ ಕನ್ನಡ ಮಾಧ್ಯಮದ) ವಿದ್ಯಾರ್ಥಿಗಳಿಗೆ ಅಖಂಡ ಬೆಳಗಾವಿ ಜಿಲ್ಲಾ ಮಟ್ಟದ ಗಣಿತ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉಚಿತ ಪ್ರವೇಶವಿರುತ್ತದೆ. ಅದೇ ದಿವಸ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಆಕರ್ಷಕ ನಗದು ಬಹುಮಾನ ನೀಡಲಾಗುತ್ತದೆ. ಕಾರಣ ತಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಬರುವ ಬುಧವಾರ 2-8-2023 ರಂದು ಮುಂಜಾನೆ 10 ಗಂಟೆಯ ಒಳಗಾಗಿ ‌ಹಾಜರಿರುವಂತೆ ಮುಖ್ಯೋಪಾಧ್ಯಾಯರ ಪತ್ರದೊಂದಿಗೆ ಕಳುಹಿಸುವುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರುಗಳಿಗೆ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.

ಸುದ್ದಿ ಓದಿ