ಮಕ್ಕಳ ಹೃದಯದಲ್ಲಿ ದೇಶಭಕ್ತಿ; ಗಾಂಧಿನಗರದ ‘ನಮ್ಮ ಕ್ಲಿನಿಕ್’ನಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ!
ಮುಂಡಗೋಡ 27: ದೇಶದ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಹೃದಯಕ್ಕೆ ತಟ್ಟುವಂತೆ ನೆನಪಿಸುವ 77ನೇ ಗಣರಾಜ್ಯೋತ್ಸವವನ್ನು ಮುಂಡಗೋಡ ಪಟ್ಟಣದ ಗಾಂಧಿನಗರದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉತ್ತರ ಕನ್ನಡ (ನಮ್ಮ ಕ್ಲಿನಿಕ್) ಹಾಗೂ ಕೇಂದ್ರದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ದೇಶಕ್ಕಾಗಿ ಅವರ ತ್ಯಾಗ, ಹೋರಾಟ ಮತ್ತು ಜನತೆಯ ಮೇಲಿನ ಬದ್ಧತೆಯನ್ನು ಮನದಾಳದಿಂದ ಸ್ಮರಿಸಲಾಯಿತು. ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆಯನ್ನು ಗೌರವಪೂರ್ವಕವಾಗಿ ಹಾಡುವಾಗ, ಅಂಬೇಡ್ಕರ್ ಭವನ ದೇಶಭಕ್ತಿಯ ನಾದದಿಂದ ಕಂಪಿತವಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಿಬ್ಬಂದಿಗಳಾದ ಡಾ. ಶ್ರೀದೇವಿ ಹಿರೇಮಠ, ನಾಗವೇಣಿ ಹಡಪದ್, ರೋಜಾ ಶೆಟ್ಟಪ್ಪನ್ನವರ್, ಆಶಾ ಕಾರ್ಯಕರ್ತೆಯರು, ಸಂದ್ಯಾ ದುಬೆ, ಲಕ್ಷ್ಮಿ ಬಂಗಾರಿ,ಮಂಜುಳಾ ಪಾಟೀಲ್, ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಹರೀಶ್ ರಾವಳ, ಸ್ಥಳೀಯ ನಾಗರಿಕರು ಮತ್ತು ಪುಟ್ಟ ಮಕ್ಕಳು ಭಾಗವಹಿಸಿ ಕಾರ್ಯಕ್ರಮಕ್ಕೆ ಕಲೆ ಮತ್ತು ಶೋಭೆ ಸೇರಿಸಿದರು. ವಿಶೇಷವಾಗಿ, ಪುಟ್ಟ ಮಕ್ಕಳ ಕಣ್ಣಿನಲ್ಲಿ ಮೂಡಿದ ರಾಷ್ಟ್ರಭಕ್ತಿಯ ಕಿರಣಗಳು, ಸಂವಿಧಾನದ ಮೌಲ್ಯಗಳು ಮುಂದಿನ ಪೀಳಿಗೆಗೆ ಹತ್ತಿ ಸಾಗುತ್ತಿರುವ ಭರವಸೆಯನ್ನು ಮೂಡಿಸಿತು.