ರಾಣೇಬೆನ್ನೂರಲ್ಲಿ ದೇಶಭಕ್ತಿ ಬಿಂಬಿಸಿದ ಭಾರತಮಾತಾ ಮೆರವಣಿಗೆ
ರಾಣೇಬೆನ್ನೂರು 14: ಭಾರತ ದೇಶ ಪುಣ್ಯಭೂಮಿ, ಈ ಭೂಮಿಯಲ್ಲಿ ಜನ್ಮ ತಾಳಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯದ ಫಲ. ದೇಶ ಸೇವೆ ಈಶ ಸೇವೆ ಆಗಬೇಕು ಆಗಮಾತ್ರ, ಈ ಭೂಮಿಯ ಮತ್ತು ಅನ್ನದ ಋಣವನ್ನು ತಿರಿಸಿದಂತಾಗುತ್ತದೆ ಎಂದು ಡಿವೈಎಸ್ಪಿ ಕೆ ವಿ ಶ್ರೀಧರ್ ಹೇಳಿದರು. ರವಿವಾರ ಇಲ್ಲಿನ ಸಿಡ್ಲು ಪತ್ರಿಕೆ ಕಚೇರಿ ಆವರಣದಲ್ಲಿ, ಭಾರತ ಮಾತಾ ಉತ್ಸವ ಸಮಿತಿ ಮತ್ತು ಸಿಡ್ಲು ಪತ್ರಿಕಾ ಬಳಗವು ಆಯೋಜಿಸಿದ್ದ,, ಸ್ವಾತಂತ್ರ್ಯ ಜಾಗೃತಿಯ ಭಾರತ ಮಾತಾ ಉತ್ಸವ ಮೂತರ್ಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಭಾರತೀಯರು ಸದಾಕಾಲ ಶಾಂತಿಪ್ರಿಯರು, ಯಾವುದೇ ಜಾತಿ, ಮತ,ಬೇಧ, ಭಾವ, ಪಕ್ಷ ಪಂಗಡ ಇಲಿಲ್ಲ.
ಡಿವೈಸ್ಪಿ ಅವರು ಸದಾ ಶಾಂತಿ ನೆಮ್ಮದಿ ಇಂದ ಬದುಕಿ, ಬಾಳಿ, ಭಾವೈಕ್ಯತೆಯೊಂದಿಗೆ ಬದುಕನ್ನು ಸಾಗಿಸುವವರಾಗಿದ್ದಾರೆ, ಲಿವೆ ಭಾರತೀಯರ ವಿಶೇಷತೆಯಾಗಿದೆ ಎಂದರು. ಉತ್ಸವ ಸಮಿತಿ ಅಧ್ಯಕ್ಷ ಶಿವಯೋಗಿ ಮಹಾನುಭಾವಿಮಠ ಪೂಜೆ ಸಲ್ಲಿಸಿದರು. ಸರ್ವಜ್ಞ ಸಂಪಾದಕ ಎಸ್. ಬಿ.ಮಠದ ಅವರು ಸ್ವಾತಂತ್ರ್ಯ ಘೋಷವಾಕ್ಯ ಮೊಳಗಿಸಿದರು. ಮೆರವಣಿಗೆ ಮುಂಚೂಣಿಯಲ್ಲಿ ವಿವಿಧ ಸಮಾಜಗಳ ಮುಖಂಡರಾದ, ಡಾ :ಬಸವರಾಜ ಕೆಲಸಗಾರ, ಕೃಷ್ಣಮೂರ್ತಿ ಲಮಾಣಿ,ಆರ್. ಶಂಕರ್, ಮಂಜುನಾಥ ಗೌಡಶಿವಣ್ಣನವರ, ಶೇಖಪ್ಪ ಹೊಸಗೌಡ್ರ, ಭಾರತಿ ಜಂಬಿಗಿ, ಭಾರತಿ ಅಳವಂಡಿ, ಪ್ರಕಾಶ ಕೋಳಿವಾಡ, ರೂಪಾ ಚಿನ್ನಿಕಟ್ಟಿ, ಪ್ರಭಾವತಿ ತಿಳುವಳ್ಳಿ, ಎಂ.ಬಿ. ಗೌಡಪ್ಪಗೌಡ್ರ್. ಎಂ ಎಸ್ ಪಾಟೀಲ್, ಚೋಳಪ್ಪ ಕಸವಾಳ, ಪ್ರೊ : ಜಿ.ಬಿ. ಬೆಳವಿಗಿ, ಪ್ರೂ :ಎಚ್ಎಮ್ ದೊಡ್ಡಬಿಲ್ಲ, ವೆಂಕಟೇಶ ಕಾಕಿ, ಪ್ರೊ : ಅರುಣಕುಮಾರ್ ಚಂದನ, ಜಟ್ಟೆಪ್ಪ ಕರೇಗೌಡ್ರ,ಗೋಪಾಲ್ ಗುತ್ತಲ, ಬಿ.ಎಸ್. ಅಜ್ಮನಿ, ನಿತ್ಯಾನಂದ ಕುಂದಾಪುರ, ಶಿವಣ್ಣ ಬಣಕಾರ್, ಕೊಟ್ರೇಶಪ್ಪ ಎಮ್ಮಿ, ಎಸ್. ಸಿ. ಷಡಾಕ್ಷರಿಮಠ, ಕುಮಾರಸ್ವಾಮಿ ಜಿ. ಎಂ. ಆರ್. ಜಿ. ಮಹಾನುಭಾವಿಮಠ, ಸಂಕಪ್ಪ ಮಾರನಾಳ, ಚಂದ್ರಶೇಖರ ದೇವಾಂಗದ, ಎಂ.ಟಿ.ಕೆಂಚರೆಡ್ಡಿ, ಸೇರಿದಂತೆ ಮತ್ತಿತರ ಗಣ್ಯರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸಂಘದ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಬಸವರಾಜ ಬ್ರಾಸ್ ವಾದ್ಯಗೋಷ್ಠಿಯ ಕಲಾವಿದರು, ಸಮಾಳ ವಾದ್ಯಮೇಳಗಳು ವಿಶೇಷ ಮೆರಗು ನೀಡಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ, ದೇಶಭಕ್ತಿ ಮೂಡಿಸುವ ಮೆರವಣಿಗೆಯು, ಸಂಜೆ ಮಾರುತಿ ನಗರದ ಭಾರತ ಮಾತಾ ಮಂದಿರದ ಆವರಣದಲ್ಲಿ ಸಾಂಗತ್ಯ ಗೊಂಡಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮೆರೆದ ಗಣ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು