ಅಧ್ಯಕ್ಷರಾಗಿ ಪಾರ್ಶ್ವನಾಥ ನೇಮಕ
ಲೋಕದರ್ಶನ ವರದಿ,
ಜಮಖಂಡಿ29: ಕರ್ನಾಟಕ ಜಾನಪದ ಪರಿಷತ್ ತಾಲೂಕ ಅಧ್ಯಕ್ಷರಾಗಿ ಪಾರ್ಶ್ವನಾಥ ಪಂಡಿತ ಉಪಾಧ್ಯೆ, ಅವರನ್ನು ನೇಮಕ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕಿನ ಕಲೆ ಹಾಗೂ ಕಲಾ ಪರಂಪರೆಯನ್ನು ಬೆಳಸುವ ಮೂಲಕ ಎಲೆಮರೆ ಕಾಯಿಯಂತಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಸೂಕ್ತ ವೇದಿಕೆ ತರುವ ಜವಾಬ್ದಾರಿ ನೀಡಲಾಗಿದೆ ಎಂದರು.