ಪುಕ್ಸಟ್ಟೆ ಬಿಜೆಪಿ ಪರಾಭವಗೊಂಡಿತು; ಹೊಳೆ ಹರಿಸಿದ ಡಿಕೆಶಿ ಗೆದ್ದುಬಿಟ್ಟರು
- ಪಿನಾಕ ಪಾನಿ
ಮಂಡ್ಯ, ರಾಮನಗರ ಹಾಳಾಗ್ ಹೋಗ್ಲಿ! ಜಮಖಂಡಿ, ಬಳ್ಳಾರಿ; ಏನಾಗಿತ್ತು. ಪಾಪ! ಆ ರಾಮುಲು; ಒಬ್ರೇ ಏಕಾಂಗಿಯಾಗಿ ವೀರ ಅಭಿಮನ್ಯುವಿನಂತೆ ಚಕ್ರವ್ಯೂಹದೊಳಗೆ ಸಿಲುಕಿದ್ರು! ಸಾಯ್ಲಿಲ್ಲ ಅಷ್ಟೇ! ಆದ್ರೆ ಎರಡೂವರೆ ಲಕ್ಷ ಡಿಫರೆನ್ಸ್. ಮುಗೀತು ಅವರ ಕತೆ. ಅವನು, ಅವನ್ಯಾರೋ! ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಗುಡಿಸಿಗುಂಡಾರ ಮಾಡ್ದೋನು! ಪಟೇಲ್ರಗೆ ಕೈಕೊಟ್ಟೋನು! ಯಡ್ಯೂರಪ್ಪಗೂ ಬೋಂಡಾ ತಿನ್ಸಿದೋನು! ಬಳ್ಳಾರಿಗೆ ಬಂದು ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ ಅಂತ ಫೋಸ್ ಕೊಟ್ಟ. ಹೊಡಿತು ನೋಡ್ರಿ ಬಿಜೆಪಿಗೆ ಲತ್ತೆ! ಎರಡೂವರೆ ಲಕ್ಷ ದಾಟ್ಬಿಡ್ತು. ಯಡ್ಯೂರಪ್ಪನ ಕೆಣಕಬೇಕಿತ್ತು. ಅದಕ್ಕೆ ಅವನು ಹಾಗಂದ. ಪಾಪ1 ಶೋಭಕ್ಕ ತಿರುಗ್ಸಿ ಕೊಟ್ಲು; ಆದ್ರೆ, ಅವನ ಲೆಕ್ಕಾಚಾರ ಸರಿಯಾಯ್ತು. ಬಿಜೆಪಿ ಠೇವಣಿ ಹೋಯ್ತು! ಎಂದು ಅವನು ವೀರಾವೇಷವಾಗಿ ಮಾತಾಡ್ತಿದ್ದಾಗ, ಮತ್ತೊಬ್ಬ ಕಾರ್ಯಕರ್ತ ತಲೆಹಾಕಿದ! ಏ! ಡಿಪಾಜಿಟ್ ಬಂದೈತೆ! ಇವನಿಗೆ ರೇಗಿಹೋಯ್ತು. ಯಾವ ಡಿಪಾಜಿಟ್, ಎರಡೂವರೆ ಲಕ್ಷ ಡಿಫರೆನ್ಸ್ ಗೊತ್ತಾ! ಎಂದು ಅಬ್ಬರಿಸಿದಾಗ ಅವನೂ ಸುಮ್ಮನಾದ. ಇವನ ಮಾತು ಮುಂದುವರಿದೇ ಇತ್ತು. ನೋಡ್ರೀ! ಡಿಕೇಶಿನಾ! ಕಲಿತ್ಕೊಳ್ಳಬೇಕು ಈ ನಮ್ಮ ಜನ. ಬಳ್ಳಾರಿಲಿ ಕ್ಯಾಂಡಿಡೇಟೇ ಇರ್ಲಿಲ್ಲ. ನಾಗೇಂದ್ರನ ತಮ್ಮನಿಗೆ ಕೊಟ್ರೇ ನಾವ್ ಸುಮ್ಮನಿರಲ್ಲ ಅಂದ್ರು ಬೇರೆ ಎಂಎಲ್ಎಗಳು. ಅಭ್ಯಥರ್ಿಗಾಗೇ ಬಹಳ ಕಸರತ್ತಾಯ್ತು! ಆ ಜಾರಕಿಹೊಳಿ ಬ್ರದರ್ಇನ್ಲಾ ದೇವೇಂದ್ರಪ್ಪಗೆ ಟಿಕೇಟೂ ಅಂದ್ರು. ಮೆಲ್ಲನೆ ಬಂದ ಡಿಕೆಶಿ. ತನ್ನ ವಿರೋಧಿಗಳಾದ ಜಾರಕಿಹೊಳಿ ಸೋದರರ ಕೈಮೇಲಾಗಬಾರ್ದು ಅಂತ ಸ್ಕೆಚ್ ಹಾಕ್ದ. ಉಪಾಯವಾಗಿ ಭಾರಿ ಮಾತಾಡೋ, ಒಂದ್ ಪಂಚಾಯ್ತಿ ಚುನಾವಣೆಲೂ ಗೆಲ್ಲದ ಉಗ್ರಪ್ಪನ ಕರ್ಕೊಂಡ್ ಬಂದ. ನೀನ್ ಸುಮ್ಮನೆ ಕೈ ಮುಗಿ, ಉಳಿದದ್ದ್ ನಂದು! ಅಂದ. ಸಿದ್ದು ಜೊತೆ ಕುತ್ಕೊಂಡ. ನಿನ್ ಶಿಷ್ಯನ್ನ ಗೆಲ್ಲಸ್ತೀನಿ, ಸುಮ್ನಿರ್ರೀ ಅಂದ. ಲಕ್ಷ್ಮೇಶ್ವರಕ್ಕೆ ಹೋದ. ರಂಭಾಪುರಿ ಜಗದ್ಗುರುಗೆ ನಮಸ್ಕಾರ ಮಾಡ್ದ. ತಪ್ಪಾಯ್ತು ಅಂದ! ಯಡ್ಡಿ ಜೊತೆ ಇದ್ದ ಪಂಚಪೀಠಿಗಳೆಲ್ಲ ಫಮರ್ಾನು ಹೊರಡಿಸಿದ್ರು! ತಪ್ಪಾಯ್ತು ಅಂದವನಿಗೆ ನಮ್ಮ ಓಟು ಅಂತ ಹಾಕಿದ್ರು. ಪಾಪ! ಶ್ರೀರಾಮುಲು ಮತ್ ಅವನ ಗುರು ರೆಡ್ಡಿ ಇಬ್ರೂ ಅವ್ರ ಕೈಲೇ ಲಿಂಗದೀಕ್ಷೆ ತಗೊಂಡು ಪೂಜೆ ಮಾಡ್ತಿದ್ದು ಮರತೇಬಿಟ್ರು ಜಗದ್ಗುರುಗಳು. ಹಾಗಾಗಿ ವೀರಶೈವರ ಓಟು ಕಾಂಗ್ರೆಸ್ಗೆ ಹೋಯ್ತು! ಎರಡೂವರೆ ಲಕ್ಷ ಲೀಡ್ ಬಂತು! ಅವನ ವಿಶ್ಲೇಷಣೆ ಮುಂದುವರಿದೇ ಇತ್ತು.
ನೋಡ್ರಿ! ಡಿಕೇಶಿನಾ. . . ರಾಮುಲುನ ಅಣ್ಣಾ ಎಂದ. ಕನಕಪುರದ ಗೌಡ್ರು ಅಂತ ಕಿಚಾಯಿಸ್ತಿದ್ರೂ ಮಾತಾಡ್ಲೇ ಇಲ್ಲಾ! ಒಂದೊಂದು ಎಂಎಲ್ಎ ಕ್ಷೇತ್ರಕ್ಕೆ ಒಬ್ಬೊಬ್ಬ ಮಿನಿಸ್ಟ್ರು ಇನ್ಚಾಜರ್್ ಮಾಡ್ದ. ಇರೋ ಆರು ಜನ ಎಂಎಲ್ಎಗಳಿಗೆ ಟಾಗರ್ೆಟ್ ಕೊಟ್ಟಾ. ದುಡ್ಡು ನಂದು, ಓಟು ನಿಮ್ದು! ಯಾರ್ಯಾರ ಕ್ಯಾಪಾಸಿಟಿ ಎಷ್ಟು ನೋಡಾನಾ! ಅಂತ ಕಿಚ್ಚೇಬ್ಬಿಸ್ದ. ಅದಕ್ಕೆ ಕಣ್ರೀ ಬಂದಿದ್ದು ಎರಡೂವರೆ ಲಕ್ಷ.! . . . ಕೋಟಿ ಖಚರ್ು ಮಾಡ್ದಾ. ಮಾತು ಕಡಿಮೆ ಆಡಿ ಕೆಲ್ಸಾ ಜಾಸ್ತಿ ಮಾಡ್ಡಾ! ಹಾಗಾಗಿನೇ ಬಂದಿದ್ದು ಎರಡೂವರೆ ಲಕ್ಷ ! ಪಕ್ಕದ ಕಾರ್ಯಕರ್ತ ಬಾಯ್ ಹಾಕಿ ಮುಂದುವರೆಸ್ದ. ಪಾಪ! ರಾಮುಲು ಒಬ್ನೆ! ಸುತ್ತಿ ಸುತ್ತಿ ಸುಸ್ತಾದ್ರು. ಒಬ್ರೂ ಅವ್ರ ಜೊತೆ ಬರ್ಲಿಲ್ಲಾ. ಏನ್, ನಮ್ಮ ಬಿಜೆಪಿಲಿ ಲೀಡ್ರುಗಳೇ ಇಲ್ಲವಲ್ವ! ರಾಮುಲೋದೋ ಬಾಯಿ ಸರ್ಯಾಗಿಲ್ಲ. ಗಡ್ಡ ಬಿಡ್ಕೊಂಡು ಕಪ್ಪು ಕನ್ನಡಕ ಹಾಕ್ಕೊಂಡು ವಾಲ್ಮೀಕಿ ಸ್ವಾಭಿಮಾನ ಎಷ್ಟು ಹೇಳಿದ್ರು, ವಾಲ್ಮಿಕಿಗಳು ವಿದ್ಯಾವಂತ ವಾಲ್ಮಿಕಿ ಉಗ್ರ ಉಗ್ರಪ್ಪಂಗೆ ಓಟು ಹಾಕಿದ್ರೂ, ಮನೆಲಿ ಅಡಿಗೆ ಚಂದ ಮಾಡ್ಲಿ ಅಂತ ಮನೇಲಿ ಕೂರ್ಸಿದ್ರೂ. ಅದ್ರಲ್ಲೂ ಆ ಜನಾರ್ಧನ ರೆಡ್ಡಿಗೆ ಬುದ್ದೀನೇ ಇಲ್ಲಾ. ಇನ್ನೂ ದುಡ್ಡಿನ ಮದ ಇಳ್ದಿಲ್ಲಾ. ಯಾರಾದ್ರೂ ಸತ್ತೋರ ಬಗ್ಗೆ ಮಾತಾಡ್ತಾರಾ! ತಮ್ಮ ಶಾಪ ಸಿದ್ದರಾಮಯ್ಯಂಗೆ ಅಂದ್ರು. ಬೇಕಿತ್ತೇನ್ರೀ ಇದು! ಸಿದ್ದರಾಮಯ್ಯ ಬುದ್ದಿವಂತ್ರು. ಟ್ವೀಟ್ ಮಾಡಿದ್ರೂ, ರೆಡ್ಡಿ ಮಕ್ಕಳಿಗೆ ಒಳ್ಳೆದಾಗ್ಲಿ ಅಂದ್ರು. ಏಂಗೈತೇ ನನ್ ಪ್ಲಾನ್ ಅಂದ್ರೂ, ದಡ್ಡ ರೆಡ್ಡಿ ಅಂತ ನಕ್ಕರು. ಹಾಗಾಗಿಯೇ ಉಗ್ರಪ್ಪಂಗೆ ಎರಡೂವರೆ ಲಕ್ಷ ಲೀಡೂ. . . ವಿಶ್ಲೇಷಣೆ ಮುಂದುವರಿದೇ ಇತ್ತು.
ಬಳ್ಳಾರಿ ಹಾಳಾಗ್ಹೋಗ್ಲಿ! ಜಮಖಂಡಿ ಏನಾಗಿತ್ತು! ಇನ್ನೊಬ್ಬನ ಪ್ರಶ್ನೆ! ಪಟ್ ಅಂತ ಉತ್ರ ಬಂತು! ಅದೇ ಪುಕ್ಸಟ್ಟೆ ರಾಜಕಾರಣ. ಕಾಸೇ ಬಿಚ್ಲಿಲ್ಲ! ಇವ್ರು. ಪಾಪ! ಆ ಶ್ರೀಕಾಂತ ಕುಲಕಣರ್ಿ, ವಯೋವೃದ್ದ. ಏನ್ ಮಾಡೀರು! ಕೈಮುಗಿತಾ ಹೋದ್ರು. ಜನ ಕೈಮುಗಿದು ಕಳ್ಸುದ್ರು. ಒಬ್ಬನೂ ಜವಾಬ್ದಾರಿ ತಗೊಳ್ಳಿಲ್ಲಾ! ಮುಂದಿನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ! ಗೋವಿಂದ, ಗೋವಿಂದಾ ಅಂತ ಕೈಮುಗಿದ್ರೇ ಹೊತರ್ು ಜೋಬ್ ಬಿಡ್ಲಿಲ್ಲಾ! ಮಾಜಿ ಮುಖ್ಯಮಂತ್ರಿ, ಮತ್ತೆ ಕುಚರ್ಿ ಕನಸು ಕಾಣೋ ಜಗದೀಶ ಶೆಟ್ರು ಚುನಾವಣೆ ಇಟ್ಕೊಂಡು ಯುರೋಪ್ಗೆ ಹೋಗಿದ್ರೂ, ಬಂದ್ರೂ! ನೋಡ್ರೀ ನವಂಬರ್ ಏಳಕ್ಕೆ ನಮ್ಮದೇ ಸಕರ್ಾರ ಅಂತ ಅಂದ್ರು. ಮಾಜಿ ಮುಖ್ಯಮಂತ್ರಿ ಶೆಟ್ರು ಖಜಾನೆ ಬಿಚ್ಚಲೇ ಇಲ್ಲಾ! ಇನ್ನೂ! ಆ ನಿರಾಣಿ! ಯಡ್ಯೂರಪ್ಪನವರ ಬ್ಲೂಬಾಯಿ. ಶುಗರ್ ಫ್ಯಾಕ್ಟ್ರೀ, ಅದೂ ಇದೂ ಅಂತ ಜೋರಾಗಿ ಮಾಡೋರೇ! ಸುಮ್ಮನೆ ಯಡ್ಯೂರಪ್ಪ ಬಂದಾಗ ಮುಖ ಕಾಣಿಸ್ಕೊಂಡ್ರು, ತಮ್ಮಗ ಮುಂದಿನ ಸಾರಿ ಟಿಕೇಟ್ ಕನ್ಫಮರ್ು ಮಾಡ್ಕೋಂಡ್ರು! ಅವರೂ ಬಿಚ್ಲಿಲ್ಲಾ! ಅಷ್ಟರಲ್ಲಿ ಇನ್ನೊಬ್ಬ ಗುಟುರು ಹಾಕ್ದ. ರೈತರ ಬಾಕಿನೇ ಕೊಟ್ಟಿಲ್ಲಾ, ಇನ್ನು ಚುನಾವಣೆಗೆ ಕೊಡ್ತಾರಾ! ಹುಚ್ಚಪ್ಪಾ! ಅಂತ ಸಮಾಧಾನಿಸಿದ. ಅಷ್ಟರಲ್ಲಿ ಹಿರಿಯ ಸಂಘದ ಕಾರ್ಯಕರ್ತರು ಪ್ರವೇಶಿಸಿದ್ರು. ನೋಡ್ರಪ್ಪಾ! ಎಂತೆಂತ ಕಾಲ್ದಲ್ಲಿ ನಾವ್ ಚುನಾವಣೆ ಮಾಡೀವಿ! ಹತ್ ಪೈಸೇ ಇಲ್ದಾಗ ನಾವೇ ಓಡಾಡಿ ಗೆಲ್ಸಿದ್ದೀವಿ. ಒಂದ್ ಪ್ಲಾನಿಂಗೇ ಇಲ್ಲಾ. ನೋಡಿ ಕಾಂಗ್ರೆಸ್ನೋರು! ಅನುಕಂಪದ ಹೊಳೆ ಹರಿಸಿದ್ರು! ಸಿದ್ದರಾಮಯ್ಯ ಇಲ್ಲೇ ಠಿಕಾಣಿ ಹಾಕಿದ್ರು! ಆ ಡಿಸಿಎಂ ಪರಮೇಶ್ವರ್, ಈ ಕ್ಷೇತ್ರಾನೇ ಗೊತ್ತಿಲ್ಲಾ! ಇಲ್ಲೇ ನಿಂತ್ಕೋಂಡ್ರು. ಎಲ್ಲೆಲ್ಲಿ ಬೇಕೋ ಅಲ್ಲಿ ಹರಿಸಿದ್ರು! ಚಂದ ಲೀಡ್ ಬಂತು. ನಮ್ ಬಿಜೆಪಿಗೇನಾಗಿತ್ತು ರೋಗ! ಯಡ್ಯೂರಪ್ಪನೋರೂ, ಆ ನಿರಾಣಿನ ಕರ್ದು, ಹೇ ನಿರಾಣಿ, ಈ ಎಲೆಕ್ಷನ್ ನಿಂದೂ. ನನ್ಗೆ ಗೊತ್ತಿಲ್ಲಾ. ಎಲ್ಲಾ ನೋಡ್ಕೋಂಡ್ ಗೆಲ್ಸೋ ಭಾರ ನಿಂದೂ ಅಂತ ಒಂದ್ ಅವಾಜ್ ಹಾಕಿ; ಆ ಪ್ರಭಾಕರ ಕೋರೆ, ಈ ಯತ್ನಾಳ, ಕಾಜರ್ೊಳ, ಶೆಟ್ರು, ಆ ಚರಂತಿಮಠ, ಕತ್ತಿಪತ್ತಿನಾ ಒಂದೆಡೆ ಸೇರ್ಸಿ; ಮರ್ಯಾದೆ ಪ್ರಶ್ನೆ, ನಿರಾಣಿ ದುಡ್ಡು, ನಿಮ್ದು ಕೆಲ್ಸಾ ಅಂತ ಹೇಳಿದ್ರೇ ಜಮಖಂಡಿನಾ ಹೊಡ್ಕೋಬೋದಿತ್ತು! ಅಂತ ದೀರ್ಘ ವಿವರಣೆ ಕೊಟ್ರು.
ಪಾಪ! ಯಡ್ಯೂರಪ್ಪಾಗೆ ಟೈಮ್ ಎಲ್ಲಿತ್ತು! ಇನ್ನೊಬ್ಬನ ಪ್ರಶ್ನೆ! ಅಲ್ಲಿ, ಶಿವಮೊಗ್ಗದಲ್ಲಿ; ಫುಲ್ಲೂ ಟೈಟೂ! ಲಿಂಗಾಯತ್ರೂ, ಬ್ರಾಂಬರು, ಶೆಟ್ರು . . ಒಂದ್ಕಡೆ; ಉಳಿದೋರೆಲ್ಲಾ ಒಂದ್ಕಡೆ; ಅಷ್ಟೇ ಅಲ್ಲ, ಸಿಎಂ ಕುಮಾರಸ್ವಾಮಿ ಒಂದ್ ಬಾಂಬ್ ಹಾಕಿದ್ರು. ಕಾಗೋಡ್ ತಿಮ್ಮಪ್ಪನಾ ಎಂಎಲ್ಸಿ ಮಾಡಿ ಮಿನಿಸ್ಟ್ರು ಮಾಡ್ತೀನೀ. . ಈಡಿಗರು ಬಿಟ್ಟಾರ! ಸಾಲೀಡ್ ಹಾಕಿದ್ರು. ಹಾಗಾಗಿನೇ ಸಾಗರ, ಸೊರಬ, ತೀರ್ಥಹಳ್ಳಿ ಎಲ್ಲೆಡೆ ಜೆಡಿಎಸ್ಗೆ ಓಟು ಜಾಸ್ತಿ! ಇನ್ನು ಒಕ್ಕಲಿಗ್ರು, ಟ್ರೇಡಿಷಲ್ಲಾಗಿ ಅವರ್ದು ದೇವೇಗೌಡರ ಪಕ್ಷ. ಸ್ವತಃ ದೇವೇಗೌಡ್ರೇ ಶಿವಮೊಗ್ಗೆಗೆ ಬಂದ್ರು. ಸಿದ್ದರಾಮಯ್ಯ ಬಂದ್ರೂ, ಸಿಎಂ ಠಿಕಾಣಿ ಹಾಕಿದ್ರು. ಈಶ್ವರಪ್ಪಂಗೆ ಓಟೇ ಇಲ್ಲಾ! ಏನೋ ಯಡ್ಯೂರಪ್ಪ ಮನ್ಸು ಮಾಡಿದ್ದಕ್ಕೆ ಗೆದ್ರೂ! ಕುರುಬ್ರೂ ಈಶ್ವರಪ್ಪನ ಮಾತ್ ಎಲ್ಲಿ ಕೇಳ್ತಾರೆ. ಯಡ್ಯೂರಪ್ಪಂದೇ ಕಷ್ಟ ಆಗಿತ್ತು. ಆಗಾಗಿ, ಸಿದ್ದು-ಕುಮ್ಮಿ ಯಡ್ಡಿನ ಶಿವಮೊಗ್ಗಕ್ಕೆ ಕಟ್ಟಿ ಹಾಕಿದ್ರು. ಎಲ್ಲೂ ಬೇರೆ ಕಡೆ ಓಡಾಡಂಗೆ ಇರ್ಲಿಲ್ಲಾ . . . ಅಂತ ಕಾಮೆಂಟರಿ ಕೊಟ್ರು. ಅಯ್ಯಪ್ಪಾ! ಹೆಂಗೋ ಗೆದ್ವೆಲ್ಲಾ, ಅದನ್ನಾದ್ರೂ; ಇಲ್ದಿದ್ರೆ, ನಮ್ ಗತಿ . . ಚಂಬೇ ಗತಿ . . ಇನ್ನೊಬ್ಬರ ಉದ್ಗಾರ. ಗೆಲುವಾ ಅದು, ಭಾರಿ ಸೋಲು. ಇನ್ನೊಂದೆರಡು ದಿನ ಮಧು ಬಂಗಾರಪ್ಪಗೆ ಟೈಮ್ ಇದ್ದಿದ್ರೇ, ಅದೂ ಪಲ್ಟಿನೇ! ಸೋತಿದ್ರೂ, ಮಧು ಗೆದ್ದಂಗೆ ಲೆಕ್ಕ. . . ಇನ್ನೊಬ್ಬರ ವ್ಯಾಖ್ಯಾನ.
ಹಾಳಾಗ್ಹೋಗ್ಲಿ! ರಾಮನಗರದ ಕತೆ ಏನು! ಚಿಂತನೆ ಹಳೇ ಮೈಸೂರತ್ತ ಬಂತು. ಕಂಡು ಕಂಡು ಹಳ್ಳಕೆ ಬಿದ್ರು ನಮ್ಮೋರು! ಇದು ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತನ ಮಾತು! ಅವರಪ್ಪ ಕಾಂಗ್ರೆಸ್ ಎಂಎಲ್ಸಿ., ನಿಷ್ಠಾವಂತ ಕಾರ್ಯಕರ್ತ. ಅದ್ರಲ್ಲೂ ಅವ್ರ ಫ್ಯಾಮಿಲಿ, ಡಿಕೇಶಿ ಫ್ಯಾಮಿಲಿ ಬಳಾ ಕ್ಲೋಸು! ಹೀಗಿರ್ವಾಗ ಯಾರಾದ್ರೂ ಆ ಚಂದ್ರಶೇಖರ್ಗೆ ಟಿಕೆಟ್ ಕೊಡ್ತಾರಾ! ಇದು ಅವನ ಪ್ರಶ್ನೆ. ಇಲ್ಲ, ಇಲ್ಲಾ! ಆ ಚಂದ್ರಶೇಖರದ್ರೂ ಏನು ತಪ್ಪಿಲ್ಲಾ! ದುಡ್ಡೂ ಕೊಡ್ತೀವಿ! ಗೆಲ್ಸೂ ಗೆಲ್ಸುತ್ತೀವಿ! ಚಿಂತಿ ಬೇಡಾ, ಬಾ! ಬಾ! ಅಂತ ಕರ್ಕೋಂಡ್ ಬಂದು; ದುಡ್ಡೂ ಇಲ್ಲಾ! ಜನಾನೂ ಇಲ್ಲಾ, ನಾಯಕ್ರೂ ಮೊದ್ಲೇ ಇಲ್ಲಾ. ಕರ್ಕೋಂಡ್ ಬಂದ ಯೋಗೇಶ್ವರ್ ನಾಪತ್ತೆ! ಸದಾನಂದಗೌಡ್ರುದು ಏನಿದ್ರೂ ಸ್ಮೈಲ್! ಸಾಮ್ರಾಟ ಅಶೋಕ ಸುಳಿಲೇ ಇಲ್ಲಾ. ಯಡ್ಯೂರಪ್ಪ ಕಾಣಿಸ್ಲೇ ಇಲ್ಲಾ. ಸೋಮಣ್ಣ ಕಾಣ್ಲೇ ಇಲ್ಲಾ! ಎನ್ ಮಾಡ್ತಾರೆ ಚಂದ್ರಶೇಖರ್! ಚುನಾವಣೆಗೆ ಮುಂಚೇನೇ ಹಿಂಗೇ! ಅಮೇಲೆ! ಚಿಂತೇ ಹಾಕ್ತತೇ ತಾನೇ! . . . ಅವರ ವಿಶ್ಲೇಷಣೆ ನಡಿದೇ ಇತ್ತು. ಇಲರ್ಿ! ರಾಮನಗರದಲ್ಲಿ ಚೆನ್ನಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಬೇಜಾರಲ್ಲಿದ್ರು! ಎಲ್ಲಾ ನಂಮ್ಗೇ ಓಟು ಹಾಕ್ತಿದ್ರೂ! ಅನಿತಕ್ಕಂಗೆ ಬೆವರ್ ಕಿತ್ಕೊಂಡಿತ್ತು. ಆಗಾಗಿ ಡಿಕೇಸು ಪ್ಲಾನ್ ಮಾಡಿದ್ರೂ! ನೋಡ್ ಚಂದ್ರು! ಈಗ್ಲೇ ಹಿಂಗೆ! ಮುಂದೆ ಪಾಪರ್ ಆಗ್ಬಿಡ್ತ್ಯಾ! ಪರವಾಗಿಲ್ಲ, ಬಾ, ಈಗ್ಲೂ, ಖಚರ್ು ಕೊಡ್ತೀವಿ, ಮುಂದೆ ಎಂಎಲ್ಸ್ಸಿ ಮಾಡ್ತೀವಿ. . ಗಾಳ ಹಾಕಿದ್ರು. ಅವನೂ ಹೋದ! . . . ಅವರ ಕಾಮೆಂಟರಿಗೆ ಇನ್ನೊಂದು ಟ್ವಿಸ್ಟ್. ಹಿಂದಿನ ದಿನಾನೂ ಯಡ್ಯೂರಪ್ಪಗೆ ಟ್ರೈ ಮಾಡಿದ್ರಂತೆ! ಆ ಸೋಂಪುರ ರುದ್ರೇಶಂದು ರಿಸೀವ್ ಮಾಡ್ತಾರೆ! ಇವನ್ದು ಕಟ್ ಮಾಡ್ತಾರೆ! . . . . ಅಲ್ಲಾ! ಆ ಯೋಗಿಶ್ವರಂಗೆ ನೀನೇ ನಿಂತ್ಕೋ! ಈಗ ಒಳ್ಳೇ ಹವಾ ಇದೆ! ನಾವೂ ಸಹಾಯ ಮಾಡ್ತೀವಿ ಅಂತ ಸೆಂಟ್ರಲ್ ಫಂಡ್ ತಂದು ಕೊಟ್ಟಿದ್ರೇ ಯೋಗೀಶ್ವರೇ ನಿಂತ್ಕೋತಿದ್ದಾ! ಗೆದ್ದು ಬಿಡ್ತೀದ್ದಾ ಅಂತ ಮತ್ತೊಬ್ಬರು ವಿಶ್ಲೇಷಿಸಿದರು.
ಹೋಗಲಿ, ಆ ಮಂಡ್ಯದಲ್ಲಿ, ಸಾಮ್ರಾಟ ಅಶೋಕನಿಗೆ ಕಟ್ಟಾಜ್ಞೆ ಕೊಟ್ಟು, ಡಿಸಿಎಂ ಆಗಿದ್ದೆ, ಎರಡು ಒಳ್ಳೆ ಫಲ ಕೊಡೋ ಮಿನಿಸ್ಟ್ರು ಮಾಡಿದ್ವಿ! ನೀನೇ ನಿಂತ್ಕೋ ಬೇಕು ಅಂತ ಬಿಜೆಪಿ ಹೈಕಮಾಂಡ್ ಹೇಳೋ ಕ್ಯಾಪಸಿಟಿ ಇರ್ಲಿಲ್ವಾ! ಸಖತ್ತಾಗಿ ಮಾಡೋರೆ! ಸುಮ್ನೆ ಆ ಕಮಷರ್ಿಯಲ್ ಟ್ಯಾಕ್ಸ್ ಆಫೀಸರ್ನಾ ಕರ್ಕೊಂಡ್ ಬಂದ್, ಕಪ್ಪನ್ನಾ ವೈಟ್ ಮಾಡಿದ್ರೂ . . . ಮತ್ತೊಬ್ಬರು ಕಾಮೆಂಟರಿ ಮಾಡ್ತಿದ್ರೇ, ಅಲ್ಲಿದ್ದ ಎಲ್ಲ ಕಾರ್ಯಕರ್ತರೂ ಹೌದು! ಹೌದು! ಸಾಮ್ರಾಟ ಅಶೋಕನ ಕ್ಯಾಪಾಸಿಟಿ ಟೆಸ್ಟ್ ಮಾಡ್ಬೇಕಿತ್ತು! ಅಂತ ಜೋರಾಗಿ ಅರಚಿದ್ರು. ಎಂಥಾ ಚಾನ್ಸು! ಆ ಶಿವರಾಮೇಗೌಡ್ರು ಕ್ಯಾಂಡಿಡೇಟೇ ಅಲ್ಲಾ! ಅದ್ರಲ್ಲೂ ಫೂಲ್ಲಾಗಿ ಕಾಂಗ್ರೆಸ್ಸ್ನೋರು ನಂಮ್ಗೆ ಸಪೋಟರ್್ ಮಾಡ್ತಿದ್ರು! ಜೆಡಿಎಸ್ಲ್ಲೂ ಆ ಕ್ಯಾಂಡಿಡೇಟ್ಗೆ ಹೆಸ್ರಿಲ್ಲಾ! ಎಲ್ಲಾ ಹಾಲಾಗಿ ಹೋಯ್ತು . . ಅಂತಾ ಪೇಚಾಡಿದ್ರು. ಅಯ್ಯೋ ಮಾರಾಯ! ಆ ಅಶೋಕಂದು ಎಲ್ಲಾ ಅಡ್ಜಸ್ಟ್ಮೆಂಟೂ! ಆ ಜಯನಗರದಲ್ಲೇ ಅವನು ಗೆಲ್ಸಿಲಿಲ್ಲಾ! ಸಿಎಂ ಜೊತೆಗೂ ಅವ್ನೂ ಚೆನ್ನಾಗೌನೇ! ಅವನ್ ಎಲ್ಲಿ ನಿಂತ್ಕೋ ತಾನೇ! ಅವನದೇನಿದ್ರೂ ಬರೀ ಗೇಮು! . . .
ಕನರ್ಾಟಕದ ಉಪಚುನಾವಣೆಗಳ ಬಗ್ಗೆ ಅಂಕಣ ಬರೆಯಲು ಕುಳಿತವನಿಗೆ ಬಿಜೆಪಿ ಕಾರ್ಯಕರ್ತರುಗಳ ಮನದಾಳದ ಮಾತುಗಳೇ ತಾಕುತ್ತಿದ್ದ ಕಾರಣ, ಯಥಾವತ್ತಾಗಿ ಟಿಪ್ಪಣಿಸಿದ್ದೇನೆ; ನೀವೇನಂತೀರಿ!