ರಾಣೆಬೆನ್ನೂರ

ಪಿಯುಸಿ ವಿದ್ಯಾರ್ಥಿಗಳ ಸ್ವಾಗತ: ಯೋಧರ ಅಭಿನಂದನಾ ಸನ್ಮಾನ

ಪಿಯುಸಿ ವಿದ್ಯಾರ್ಥಿಗಳ  ಸ್ವಾಗತ: ಯೋಧರ ಅಭಿನಂದನಾ ಸನ್ಮಾನ

ರಾಣೆಬೆನ್ನೂರು 24:  ಭಾರತ ದೇಶದಲ್ಲಿ ಜನ್ಮ ತಾಳುವುದೇ ಪೂರ್ವಜನ್ಮದ ಪುಣ್ಯದ ಫಲ ಕನ್ನಡ ನಾಡಿನಲ್ಲಿ ಗಡಿ ರೇಖೆ  ಭೇದ-ಭಾವ ಜಾತಿ-ಮತ-ಪಂಥ ಇಲ್ಲಿಲ್ಲ ನಾವೆಲ್ಲ ಸುಖ-ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವುದಾದರೆ, ಯುದ್ಧ.ಭೂಮಿಯಲ್ಲಿ ಯೋಧರ ಪರಿಶ್ರಮ ನಿರಂತರವಾಗಿರುತ್ತದೆ ಎಂದು ನಿವೃತ್ತ ಸೈನಿಕ ನಾಗೇಶ ತಳವಾರ್ ಹೇಳಿದರು.ಅವರು ಬನಶಂಕರಿ ನಗರದ ಲಕ್ಷ್ಮಣ್ ನಾಯಕ್ ಕಲಾ ವಾಣಿಜ್ಯ ವಿಜ್ಞಾನ ಕಾಲೇಜಿನಲ್ಲಿ ನಡೆದ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಯೋಧರ ಅಭಿನಂದನಾ ಸನ್ಮಾನ ಕಾರ್ಯಕ್ರಮದಲ್ಲಿ ಆಡಳಿತದ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ನಾಗರಿಕರು, ಸ್ವಾತಂತ್ರ್ಯ ಸಿಕ್ಕಿದ್ದರಿಂದ ಇಂದು ನಾವೆಲ್ಲರೂ ಯಾವುದೇ ಆತಂಕವಿಲ್ಲದೆ ಜೀವಿಸುತ್ತಿದ್ದೇವೆ, ಇತಿಹಾಸದ ಅರಿವು ಇಟ್ಟುಕೊಂಡರು ವಿದ್ಯಾರ್ಥಿಗಳು ಭವಿಷ್ಯವನ್ನು ಕಟ್ಟಿಕೊಳ್ಳಲು ನಿರಂತರ ಪ್ರಯತ್ನಿಸಬೇಕಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ, ಮೌನೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಗೋಪಾಲ್ ಬಡಿಗೇರ್ ಅವರು ಸಮಾಜದಲ್ಲಿ ಬದುಕಿ ಬಾಳಬೇಕಾದರೆ, ಇಂದಿನ ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಅಳವಡಿಸಿಕೊಂಡು, ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದರು.ಗಣ್ಯರಾದಕರಿಯಪ್ಪ ಕಾಟೇನಹಳ್ಳಿ, ಎಸ್. ಕೆ.ಪೋಲಿಸ್ ಗೌಡ್ರ, ಮೂರ್ತಪ್ಪ ನಾಯಕ್, ಎಂ.ಎಫ್ ಅಳಲಗೇರಿ, ಜಿ.ಬಿ.ಜಂಗಳೇರ, ಮತ್ತು ಕಲಾ ವಿಭಾಗದಲ್ಲಿ ಶೈಕ್ಷಣಿಕ ಸಾಧನೆ ಮೆರೆದ ಕಾಲೇಜಿನ ಕೀರ್ತಿ ಅಗಡಿ  ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ.ನಾಯಕ, ವಹಿ ಸಿದ್ದರು.. ವೇದಿಕೆಯಲ್ಲಿ ಪ್ರಾಚಾರ್ಯ ಮಹೇಶಪ್ಪ ಗೋಣೆಮ್ಮನವರ, ಉಪನ್ಯಾಸಕರಾದ ಸೀಮಾ ಹಾನಗಲ್, ಶಿವರಾಜ್ ಜಿ.ಬಿ.  ಸ್ವಾತಿ ಮುದ್ದಾನವರ, ಚಂದ್ರಕಲಾ ಬಿರಾಳ, ಅಣ್ಣಪ್ಪ ಅಜ್ಜೇರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಕವಿತಾ ಸಂಗಡಿಗರು ಪ್ರಾಥರ್ಿಸಿದರು. ಮಧು ಕಜ್ಜರಿ  ಸ್ವಾಗತಿಸಿದರು, ಉಷಾ ಮಾಳಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ಕಾಟೇನಹಳ್ಳಿ ನಿರೂಪಿಸಿ, ಆಶಾ ಪವಾರ ವಂದಿಸಿದರು 

ಸುದ್ದಿ ಓದಿ