ಸಿರುಗುಪ್ಪ

ಡ್ರೈವರ್ ಕಾಲೋನಿಯಲ್ಲಿ ನಮ್ಮ ಕ್ಲಿನಿಕ್ ಆರಂಭ: ಡಾ ಈರಣ್ಣ

ಡ್ರೈವರ್ ಕಾಲೋನಿಯಲ್ಲಿ ನಮ್ಮ ಕ್ಲಿನಿಕ್ ಆರಂಭ: ಡಾ ಈರಣ್ಣ

ಸಿರುಗುಪ್ಪ06: ಕರ್ನಾಟಕ ರಾಜ್ಯ ಸರ್ಕಾರ ಸಿರುಗುಪ್ಪ ನಗರದ ಆಶ್ರಯ ಡ್ರೈವರ್ ಕಾಲೋನಿಯಲ್ಲಿ ನಮ್ಮ ಕ್ಲಿನಿಕ್ ಆಸ್ಪತ್ರೆ ಭರದ ಸಿದ್ಧತೆ ನಡೆದಿದೆ ನಮ್ಮ ಕ್ಲಿನಿಕ್ ನಲ್ಲಿ ಎಲ್ಲಾ ಕಾಯಿಲೆಗಳಿಗೆ ಪ್ರಾಥಮಿಕ ಹಂತದ ಚಿಕಿತ್ಸಾ ವ್ಯವಸ್ಥೆ ಅತ್ಯಧುನಿಕ ಪರೀಕ್ಷೆಗಳ ವ್ಯವಸ್ಥೆ ಹಾಗೂ ಔಷದ ಸೌಲಭ್ಯ ಇರುತ್ತದೆ ನಮ್ಮ ಕ್ಲಿನಿಕ್ ನಲ್ಲಿ ಒಬ್ಬ ವೈದ್ಯರು ಸ್ಟಾಫ್ ನರ್ಸ್  ಲ್ಯಾಬ್ ಟೆಕ್ನಿಷಿಯನ್ ಇರುತ್ತಾರೆ ನಮ್ಮ ಕ್ಲಿನಿಕ್ ಪ್ರಾರಂಭಿಸುವ ಮೂಲಕ ಆರೋಗ್ಯ ಕೇಂದ್ರಗಳ ಮೇಲೆ ಹೀಗಿರುವ ಒತ್ತಡ ಕಡಿಮೆ ಮಾಡುವುದು ಜನರಿಗೆ ಅವರು ವಾಸವಿರುವ ಸ್ಥಳದ ಸಮೀಪದಲ್ಲೇ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ ಎಂದರು. ತಾಲೂಕಿನ ಕೆ ಬೆಳಗಲ್, ನಡವಿ, ಶಾನವಾಸಪುರ, ಬಲಕುಂದಿ ಗ್ರಾಮಗಳಿಗೆ ನೂತನವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರಾಗಿವೆ ಸಿರಿಗೇರಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜಿಗೇರಿಸಲಾಗಿದೆ ಮಣ್ಣೂರು ಸೂಗೂರು ಗ್ರಾಮದಲ್ಲಿ ಶೀಘ್ರವಾಗಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ ಅವರು ತಿಳಿಸಿದರು. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಮತ್ತಿತರರು ಇದ್ದರು. 

ಸುದ್ದಿ ಓದಿ