ಜಿಲ್ಲಾಮಟ್ಟದ ಹಜ್ ಯಾತ್ರಾರ್ಥಿಗಳಿಗೆ ಒಂದು ದಿನದ ತರಬೇತಿ
ಜಮಖಂಡಿ23: ಹಜ್ಯಾತ್ರೆಗೆ 8 ಸಾವಿರಕ್ಕೂ ಹೆಚ್ಚು ರಾಜ್ಯದ ಜನರು ಹೆಸರು ನೊಂದಾಯಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಿಂದ 130ಕ್ಕೂ ಹೆಚ್ಚು ಜನರು ಮತ್ತು ಜಮಖಂಡಿ ತಾಲೂಕಿನಲ್ಲಿ 65 ಜನರು ಜೂನ 7 ರಂದು ಹಜ್ ಯಾತ್ರೆಗೆ ಹೊರಡಲಿದ್ದಾರೆ ಎಂದು ರಾಜ್ಯ ಹಜ್ ಕಮಿಟಿ ಅಧ್ಯಕ್ಷ ರೂಫೀವುದ್ದೀನ ಕಚೇರಿವಾಲೆ ಹೇಳಿದರು.
ನಗರದ ಹೊರವಲಯದಲ್ಲಿರುವ ಗಲಗಲಿ ಪುನರವಸತಿ ಕೇಂದ್ರದಲ್ಲಿರುವ ಸಹಾಯಕ ಸಾರಿಗೆ ಪ್ರಾದೇಶಿಕ ಕಛೇರಿ ಹತ್ತಿರ ಅಂಜುಮನ್ ಇಸ್ಲಾಂ ಸಮಿತಿ ಸಭಾಭವನದಲ್ಲಿ ಕನರ್ಾಟಕ ರಾಜ್ಯ ಹಜ್ ಸಮಿತಿ ಮತ್ತು ಖಾದಿಮ್-ಉಲ್-ಹುಜ್ಜಾಜ್ ಗ್ರೂಪ್ ಜಮಖಂಡಿ ಸಹಯೋಗದಲ್ಲಿ ಜಿಲ್ಲಾಮಟ್ಟದ ಹಜ್ ಯಾತ್ರಾಥರ್ಿಗಳಿಗೆ ಒಂದು ದಿನದ ತರಬೇತಿ ಮತ್ತು ಲಸಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರ ಹಜ್ ಯಾತ್ರೆಗಾಗಿ ಪ್ರತಿ ವ್ಯಕ್ತಿಗೆ 3.50 ಲಕ್ಷ ರೂ.ಗಳ ರಿಯಾಯತಿ ದರ ನಿಗದಿ ಮಾಡಿದೆ. ಹಜ್ ಯಾತ್ರೆಗೆ ಹೋಗುವವರಿಗೆ ಮೂರು ಕಂತುಗಳಲ್ಲಿ ಹಣ ಪಾವತಿ ಮಾಡಿದ್ದಾರೆ. ಹಜ್ ಯಾತ್ರೆ 32 ದಿನಗಳವರೆಗೆ ನಡೆಯಲಿದ್ದು, ಅರಬ ದೇಶದಲ್ಲಿರುವ ಮಕ್ಕಾ-ಮದೀನಾ ಪ್ರಾರ್ಥನೆ ಸ್ಥಳಗಳಲ್ಲಿ ಭಕ್ತರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಹಜ್ ಯಾತ್ರೆಗೆ ತೆರಳುತ್ತಿರುವ ಎಲ್ಲರಿಗೂ ವೈದ್ಯಕೀಯ ಚಿಕಿತ್ಸೆ ಸಹಿತ ಕೊರೊನಾ ಲಸಿಕೆ ನೀಡಲಾಗಿದೆ. ಹಜ್ ಯಾತ್ರೆಯಲ್ಲಿ ಯಾವ ವ್ಯವಸ್ಥೆಗಳ ಮಾಹಿತಿ ಜೊತೆಗೆ ಹಜ್ ಯಾತ್ರೆ ಮಾರ್ಗಸೂಚಿಗಳನ್ನು ತರಬೇತಿ ಮೂಲಕ ನೀಡಲಾಗಿದೆ ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ತಾಲೂಕ ಅಧ್ಯಕ್ಷ ಜಾಕೀರಹುಸೇನ ನದಾಫ ಮಾತನಾಡಿ, ಹಜ್ ಯಾತ್ರೆಗೆ ತೆರಳುವ ಸೌಭಾಗ್ಯ ಎಲ್ಲರಿಗೂ ಲಭಿಸುದಿಲ್ಲ. ಮನುಷ್ಯನಲ್ಲಿ ಒಳ್ಳೆಯತನಗಳಿದ್ದರೇ ಮಾತ್ರ ಇಂತಹ ವಿಶೇಷ ಸೌಭಾಗ್ಯ ಲಭಿಸುತ್ತದೆ. ಮುಸ್ಲಿಂ ಸಮಾಜದ ಪ್ರತಿಯೊಬ್ಬ ಹಜ್ ಯಾತ್ರೆ ಮಾಡಬೇಕೆಂಬ ಬಯಕೆ ಇದ್ದೇ ಇರುತ್ತದೆ. ಸುವರ್ಣ ಅವಕಾಶ ಲಭಿಸಿರುವ ವ್ಯಕ್ತಿಗಳು ಹಜ್ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬರಲಿ ಎಂದು ಎಲ್ಲರೂ ಹಾರೈಸೋಣ. ಸ್ಥಳೀಯ ಖಾದಿಮ್-ಉಲ್-ಹುಜ್ಜಾಜ್ ಗ್ರೂಪ್ ವತಿಯಿಂದ 65 ಕ್ಕೂ ಹೆಚ್ಚು ಜನರನ್ನು ಹಜ್ ಯಾತ್ರೆಗೆ ಕಳುಹಿಸಿ ಕೊಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹಜ್ ಯಾತ್ರೆಗೆ ಹೆಸರು ನೊಂದಾಯಿಸಿರುವ ಪುರುಷರು ಮತ್ತು ಮಹಿಳೆಯರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ರಾಜ್ಯ ಹಜ್ ಸಮಿತಿ ಮತ್ತು ಖಾದಿಮ್-ಉಲ್-ಹುಜ್ಜಾಜ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಹಜ್ ಕಮೀಟಿ ಉಪಾಧ್ಯಕ್ಷ ಜೀನ್ನತ ಟಂಗಸಾಲಿ, ರಾಜ್ಯ ಹಜ್ ಕಮೀಟಿ ಅಧಿಕಾರಿ ನಾಶೀರ, ತರಬೇತಿದಾರ ಸೈಯ್ಯದ ಶೇರಖಾನ, ಮಹಮ್ಮದಯೂನುಸ ಪಾಲೇಗಾರ, ಹಾಜಿ ಇಲಾಹಿ ಕಂಗನೊಳ್ಳಿ, ಹಜ್ ಸಮೀತಿ ಘಟಕ ಅಧ್ಯಕ್ಷರಾದ ಅನ್ವರ ಮುಲ್ಲಾ, ಆಝಮ ಝಂಡೆ, ತಾಲೂಕಾ ವೈದ್ಯಾಧಿಕಾರಿ ಡಾ.ಜಿ.ಎಸ್.ಗಲಗಲಿ ಸಹಿತ ಹಲವರು ಇದ್ದರು. ಮೌಲಾನ ಮೋಸಿನ ಪ್ರಾಥರ್ಿಸಿದರು. ರಾಜ್ಯ ಹಜ್ ಸಮಿತಿ ಜಿಲ್ಲಾಉಪಾಧ್ಯಕ್ಷ ಸಮೀರ ಕಂಗನೊಳ್ಳಿ ಸ್ವಾಗತಿಸಿದರು. ಮಹಮ್ಮದ ಇಲಿಯಾಸ್ ನಿರೂಪಿಸಿದರು. ಅನ್ವರ ಮೋಮಿನ ವಂದಿಸಿದರು.
ಪೋಟೋ : ಜಮಖಂಡಿ ನಗರದ ಹೊರವಲಯದ ಗಲಗಲಿ ಪುನರವಸತಿ ಕೇಂದ್ರದಲ್ಲಿರುವ ಅಂಜುಮನ್ ಇಸ್ಲಾಂ ಸಮೀತಿ ಸಭಾಭವನದಲ್ಲಿ ಹಜ್ ಯಾತ್ರಾಥರ್ಿಗಳಿಗೆ ಜಿಲ್ಲಾಮಟ್ಟದ ತರಬೇತಿ ಮತ್ತು ಲಸಿಕೆ ಶಿಬಿರದಲ್ಲಿ ರಾಜ್ಯ ಹಜ್ ಕಮಿಟಿ ಅಧ್ಯಕ್ಷ ರೂಫೀವುದ್ದೀನ ಕಚೇರಿವಾಲೆ ಉದ್ಘಾಟಿಸಿದರು