ಸೆ.12ರಂದು ತುಂಗಾಜಲ ಚೌಡೇಶ್ವರಿ ದೇವಿಯ ಆಲಯದಲ್ಲಿ ನಾಗ ಪ್ರತಿಷ್ಠಾಪನೆ
ಲೋಕದರ್ಶನ ವರದಿ
ರಾಣೇಬೆನ್ನೂರು 09: ಇಲ್ಲಿನ ಮಾರುತಿ ನಗರದ ಇತಿಹಾಸ ಪ್ರಸಿದ್ಧ ಬೆಂಚಿ ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಸೆ.12ರಂದು ಮಂಗಳವಾರ ಬೆಳಗ್ಗೆ ಸೂರ್ಯೋದಯ ಕಾಲ ಕಡೇ ಶ್ರಾವಣದ ಪ್ರಯುಕ್ತ ಶ್ರೀದೇವಿಗೆ ಅಭಿಷೇಕ, ಚಂಡಿಕಾ ಹೋಮ, ಧಾರ್ಮಿಕ ಕಾರ್ಯಕ್ರಮವು ದೇವಸ್ಥಾನ ಸಮಿತಿಯು ಆಯೋಜಿಸಿದೆ.
ಚೌಡೇಶ್ವರಿ ದೇವಸ್ಥಾನದ ಆಲಯದಲ್ಲಿ ಶ್ರೀ ಬನಶಂಕರಿ ದೇವಿ ಹಾಗೂ ಶ್ರೀ ನಾಗದೇವತೆ ಮೂರ್ತಿಗಳ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಂದೇ ಮಧ್ಯಾಹ್ನ ಸಾರ್ವಜನಿಕವಾಗಿ ಮಹಾ ಪ್ರಸಾದ ವಿತರಣೆಯಾಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಮತ್ತು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ