ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಭಗ್ನ; ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹ
ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಭಗ್ನ; ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹ
ಶಿಗ್ಗಾವಿ 16: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಸಿರುವುದನ್ನು ಖಂಡಿಸಿ, ಮೂರ್ತಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ತಾಲೂಕು ಗಂಗಾಮತ ಸಮಾಜವು ತಾಲೂಕಿನ ಇತರ ಸಮಾಜದ ಮುಖಂಡರ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟಿಸುವ ಮೂಲಕ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಿಸಿದ ಘಟನೆ ನಡೆದಿದೆ.
ಪಟ್ಟಣದ ರಾಣಿಚನ್ನಮ್ಮ ವೃತ್ತದಲ್ಲಿ ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ತಹಶೀಲ್ದಾರ ಅವರಿಗೆ ಮನವಿ ಅರ್ಿಸಿ ಮಾತನಾಡಿ, ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕೆಲ ಕಿಡಗೇಡಿಗಳು ಭಗ್ನಗೊಳಿಸಿದ್ದು ಖಂಡನೀಯ. ತಪ್ಪಿತಸ್ತರನ್ನು ತಕ್ಷಣದಲ್ಲಿಯೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಈ ಕೃತ್ಯವು ನಾಡಿನ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಾಗಿದ್ದು, ರಾಜ್ಯದ ಇಡೀ ಸಮಾಜ ಖಂಡಿಸುತ್ತಿದೆ. ಸಮಾಜದ ಶಾಂತಿಯನ್ನು ಕದಡಿದವರನ್ನು ಪೊಲೀಸರು ಕೂಡಲೆ ಪತ್ತೆಮಾಡಿ ಬಂಧಿಸಬೇಕು. ಕರ್ನಾಟಕ ಸರ್ಕಾರ ಮುಂದಿನ ದಿನಗಳಲ್ಲಿ ಇಂತಹ ಸಮಾಜ ಘಾತುಕ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಸೂಚಿಸಬೇಕು. ತಪ್ಪಿತಸ್ತರಿಗೆ ಶಿಕ್ಷೆಯಾಗದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಇದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಹೇಳಿದರು.
ಸಮಾಜದ ಮುಖಂಡ ದೇವರಾಜ ಸುಣಗಾರ ಮಾತನಾಡಿ, ಜನಪದ ಮೂಲದಿಂದ ಬೆಳೆದುಬಂದ ನಮ್ಮ ಸಂಸ್ಕೃತಿಗೆ 12ನೇ ಶತಮಾನದ ಶರಣರು ಭಾವೈಕ್ಯತೆಯ ಶರಣಸಂಸ್ಕೃತಿಯನ್ನು ಕಟ್ಟಿಕೊಟ್ಟು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿವ ಕೆಲಸವನ್ನು ಮಾಡಿದ್ದರು. ಅಂತ ಶರಣ ಪರಂಪರೆಯಲ್ಲಿ ನಿಜಶರಣ ಎಂದೇ ಕರೆಯಿಸಿಕೊಂಡ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕಿಡಗೇಡಿಗಳು ಭಗ್ನಗೊಳಿಸುವ ಘನಗೋರ ಕೃತ್ಯವನ್ನು ಮಾಡಿದ್ದಾರೆ. ಈ ಘಟನೆ ಶರಣ ಪರಂಪರೆಯನ್ನು ತನ್ನ ಜೀವನ ಪದ್ದತಿಯನ್ನಾಗಿಸಿಕೊಂಡು ಬಂದಿರುವ ಎಲ್ಲ ಸಮಾಜಗಳ ಬಾಂದವರಿಗೆ ನೋವೊನುಂಟು ಮಾಡಿದೆ. ಸರ್ಕಾರ ಕಿಡಗೇಡಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ತಿಪ್ಪಣ್ಣ ಸಾತಣ್ಣನವರ, ಮಂಜುನಾಥ ಬ್ಯಾಹಟ್ಟಿ, ಅಶೋಕ ಕಾಳೆ, ನಿಂಗಪ್ಪ ಹೊಸಪೇಟಿ, ಪುಟ್ಟಪ್ಪ ಕಟ್ಟಿಮನಿ, ಹೊನ್ನಪ್ಪ ಹಾಳಿ, ಮರಿತಿಮ್ಮಪ್ಪ ಮತ್ತಿಗಟ್ಟಿ, ವಾಸುದೇವ ಮತ್ತಿಗಟ್ಟಿ, ನಾಗಪ್ಪ ಓಲೆಕಾರ, ರಮೇಶ ಹೊಸಪೇಟಿ, ಚನ್ನಪ್ಪ ಶ್ಯಾಡಂಬಿ, ನಾಗರಾಜ ನಾಡಿಗೇರ, ಮುದಕಣ್ಣ ಹೊಸಪೇಟಿ, ರಾಮಣ್ಣ ಅಂದಲಗಿ, ಲಕ್ಷ್ಮಣ ಸುಣಗಾರ, ರುದ್ರ್ಪ ಬಂಕಾಪುರ, ಅರ್ಜುನಪ್ಪ ಬಾರಿಕೇರ, ಪಕ್ಕಿರೇಶ ಮಸ್ತಿ, ಗೀರೀಶ ಕರ್ಜಗಿ, ಮಂಜು ಬಾರಕೇರ ಇತರರಿದ್ದರು.