ಹೂವಿನ ಹಡಗಲಿ

ಪತ್ರಿಕೆಗಳು ಜನಾಭಿಪ್ರಾಯ ರೂಪಿಸುವ ಪ್ರಬಲ ಸಾಧನ: ಹೆಚ್.ಜಿ.ಪಾಟೀಲ

ಪತ್ರಿಕೆಗಳು ಜನಾಭಿಪ್ರಾಯ ರೂಪಿಸುವ ಪ್ರಬಲ ಸಾಧನ: ಹೆಚ್.ಜಿ.ಪಾಟೀಲ

ಲೋಕದರ್ಶನ ವರದಿ

ಹೂವಿನಹಡಗಲಿ : ನಮ್ಮ ಸುತ್ತು-ಮುತ್ತಲಿನ ಹಾಗೂ ಜಗತ್ತಿನ ವಿದ್ಯಮಾನಗಳ ಬಗ್ಗೆ ಮಾಹಿತಿ ಒದಗಿಸುವ ಪತ್ರಿಕೆಗಳು ಜನಾಭಿಪ್ರಾಯ ರೂಪಿಸುವ ಪ್ರಬಲ ಸಾಧನಗಳಾಗಿವೆ ಎಂದು ಶಿಕ್ಷಕ,ಕಸಾಪ ಮಾಜಿ ಅಧ್ಯಕ್ಷ ಹೆಚ್.ಜಿ.ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ಜೆಎಸ್ಎಸ್ ಕಾಲೇಜಿನಲ್ಲಿ ತಾಲೂಕು ಕಸಾಪ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಶಾಲೆ-ಕಾಲೇಜಿಗೊಂದು ಕನ್ನಡ ಕಾರ್ಯಕ್ರಮದಲ್ಲಿ ಪತ್ರಿಕೆಗಳು ಮತ್ತು ಸಮಾಜ ಕುರಿತು ಉಪನ್ಯಾಸ ನೀಡಿದ ಅವರು ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವ ಸೇತುವೆಯಾಗಿರುವ ಪತ್ರಿಕೆಗಳು ದೇಶದ ಪ್ರಗತಿಗೆ, ಪ್ರಜಾಪ್ರಭುತ್ವದ ಯಶಸ್ವಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.

ಕಸಾಪ ಕಾರ್ಯದರ್ಶಿ  ಎ.ಎಂ.ಚನ್ನವೀರಸ್ವಾಮಿ ಪ್ರಾಸ್ತಾವಿಕ ಮಾತನಾಡಿ ಮಕ್ಕಳಲ್ಲಿ ಭಾಷಾಭಿಮಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ವಾತಂತ್ರ್ಯ ಹೋರಾಟ, ಏಕೀಕರಣ, ನಾಡಿನ ಪರಂಪರೆ ಸಂಸ್ಕೃತಿ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಪ್ರಾಚಾರ್ಯ ಡಾ.ಹೆಚ್.ಪಿ.ರಮೇಶ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ, ಪ್ರಾಧ್ಯಪಕ  ಡಾ.ಎಂ.ಪಿ.ಎಂ.ಮಂಜುನಾಥ, ಡಾ.ಅಶೋಕ ಈಡಿಗರ,ಶಿಕ್ಷಕ ಕೆ.ಮಲ್ಲಪ್ಪ ಇದ್ದರು. ಹೆಚ್.ಬಸವರಾಜ, ವಿದ್ಯಾರ್ಥಿನಿಯರಾದ ಜಿ.ನೇತ್ರಾವತಿ,ಹನುಮಮ್ಮ ಸಂಗಡಿಗರು ಕನ್ನಡ ಗೀತೆಗಳನ್ನು ಹಾಡಿದರು.ರೇಖಾ ಸ್ವಾಗತಿಸಿದರು.ಯಮನೂರಸಾಬ್ ನಿರೂಪಿಸಿದರು. ನಾಗರಾಜ ವಂದಿಸಿದರು 

ಸುದ್ದಿ ಓದಿ