ಪ್ಲಾಸ್ಟಿಕ್ ಮುಕ್ತ ನಗರ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ

ಪ್ಲಾಸ್ಟಿಕ್ ಮುಕ್ತ ನಗರ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ

ಬಳ್ಳಾರಿ 28: ನಗರದಲ್ಲಿ ಕಳೆದ 5 ವರ್ಷಗಳಿಂದ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅನೇಕ ಸಭೆಗಳಲ್ಲಿ ಹೇಳುತ್ತಲೇ ಇವೆ. ಆದರೆ ಇಲ್ಲಿಯವರೆಗೆ ಆ ನಿಷೇಧದ ಬಗ್ಗೆ ಯಾವೊಬ್ಬ ಅಧಿಕಾರಿಗಳು ಕಾರ್ಯರೂಪಕ್ಕೆ ತಂದಿಲ್ಲ ಏತಕ್ಕ ಎಂದು ಪಾಲಿಕೆಯ ಸದಸ್ಯರು ಬುಧವಾರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಯುಕ್ತರ ಎದರು ಆರೋಗ್ಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಮೇಯರ್ ಸುಶೀಲಾಬಾಯಿ ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ಲಾಸ್ಟಿಕ್ ಬಳಸುವ ಮತ್ತು ಉತ್ಪಾಧಿಸುವವರಿಗೆ ಪ್ಲಾಸ್ಟಿಕ್ಬ್ಯಾಗ್ ಚಿಲ್ಲರೆ ಮತ್ತು ಸಗಟು ಮಾರಾಟಗಾರರಿಗೆ ದಂಡವಿಧಿಸುವ ಕುರಿತು ಪೌರಾಡಳಿತ ಸಚಿವಾಲಯ ನಿಘದಿ ಪಡಿಸುವ ವಿಷಯ ಚಚರ್ೆಗೆ ಬಂತು. ಆಗ ಸದಸ್ಯೆರು ಆರೋಗ್ಯ ಅಧಿಕಾರಿಗಳಿಗೆ ಕಳೆದ 5 ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದೀರಿ ಪ್ಲಾಸ್ಟಿಕ್ ಬಳಕೆ ಮಾತ್ರ ಸಿಷೇಧವಾಗಿಲ್ಲ ಏಕೆ ಎಂದು ಪ್ರಶ್ನಿಸಿದರು. ಮೊದಲು ಸರಕಾರದ ಆದೇಶ ಜಾರಿಗೆ ಮಾಡಿ ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿ 7 ಬಾರಿ ದಾಳಿ ನಡೆಸಿ ಹಲವರ ಮೇಲೆ ಪರಿಸರ ಇಲಾಖೆ ದೂರು ನಿಡಿದ್ದು ನ್ಯಾಯಾಲಯದಲ್ಲಿ ಪ್ರಕರಣಗಳು ಇವೆ ಎಂದರು. ಇಷ್ಟು ಸಾಕ ಎಂದು ಕೇಳಿದಾಗ ಮೊದಲು ನಿಮಗೆ ಪರಿಸರ ಇಲಾಖೆಯವರು ಸಹಕಾರ ನೀಡುತ್ತಿಲ್ಲ ಎಂಬುವುದನ್ನಾದರು ಹೇಳಿ ಎಂದಾಗ ಅವರಿಗಾಗಿ ನೀವು ಕಾಯುವ ಕೆಲಸ ಬೇಡ ನಿವೇ ದಾಳಿಮಾಡಿ. ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಮುಂದಾಗಿ ಅದಕ್ಕೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ ಎಂದರು. ಅದೇ ರೀತಿ ನಗರದಲ್ಲಿ ವಿದ್ಯುತ್ ಚಿಥಗಾರ ನಿಮರ್ಿಸಲು 45 ಲಕ್ಷ ರೂಗಳನ್ನು 2015ರಲ್ಲಿ ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಬೆಳವಣಿಗೆಯಾಗಿಲ್ಲ. ಹರಿಶ್ಚಂದ್ರ ಘಾಟ್ ನಲ್ಲಿ ನಿಮರ್ಿಸಲು ಸಾರ್ವಜನಿಕರ ಅಡ್ಡಿ ಇದೆ ಎನ್ನುವ ಪ್ರಶ್ನೆಗೆ ಮಹಮ್ಮದ್ ಮುನಿರ್ ಅವರೊಂದಿಗೆ ಅಲ್ಲಿಗೆ ತೆರಳಿ ಅಲ್ಲಿನ ಅಡ್ಡಿ-ಆತಂಕಗಳನ್ನು ನಿವಾರಿಸಲು ಪ್ರಯತ್ನಿಸಿ. ಇಲ್ಲದಿದ್ದರೇ ಇತರೆಡೆ ನಿಮರ್ಿಸಲು ಕ್ರಮತೆಗೆದುಕೊಳ್ಳಲು ಹೇಳಿದಾದ ಪಾಲಿಕೆ ಸದಸ್ಯೆ ಶ್ರೀನಿವಾಸ ಮೋತ್ಕರ್ ತಾಳೂರು ರಸ್ತೆಯ ಹರಿಶ್ಚಂದ್ರ ನಗರದಲ್ಲಿ ಸ್ಮಶಾನದಲ್ಲಿ ನಿಮರ್ಿಸಿ ಎಂದು ಸಭೆಗೆ ಕೋರಿದರು. ನಂತರ ನಗರದ ನಾನಾ ಕಡೆ ನೂರಾರು ಅನಧರ್ಿಕೃತ ನೀರಿನ ಶುದ್ದಿಕರಣದ ಬಗ್ಗೆ ಹಾಗೂ ಮಾರಾಟದ ಬಗ್ಗೆ ಸುಧೀರ್ಘ ಚಚರ್ೆ ನಡೆಸಿದರು. 

ಹೀಗೆ ನಗರದಲ್ಲಿ ಹಲವಾರು ಸಮಸ್ಯೆಗಳಿಗೆ ಸ್ಪಂಧಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ಸಭೆಯೂ ನಿಘದಿ ಪಡಿಸಿರುವ ಸಮಯಕ್ಕಿಂತ 30 ನಿಮಿಷಗಳ ತಡವಾಗಿ ಆರಂಭಗೊಂಡರೂ ನಗರದ ಅನೇಕ ಸಮಸ್ಯೆಗಳಿಗೆ ಸುಧೀರ್ಘವಾಗಿ ಚಚರ್ೆ ನಡೆಸಿ ಪರಿಹಾರ ಸೂಚಿಸಿದರು. ಈ ಸಂದರ್ಭದಲ್ಲಿ ವಾಡರ್ಿನ ಎಲ್ಲಾ ಸದಸ್ಯೆರು, ಅಧಿಕಾರಿಗಳು, ಭಾಗವಹಿಸಿದ್ದರು. 

ಸುದ್ದಿ ಓದಿ