ಡಂಬಳ ಪ್ಲಾಟ್‌ಹಿಹಾಲಟ್ಟಿಯಲ್ಲಿ ನವರಾತ್ರಿ ಮೆರಗು: ಪುರಸಭೆ ಸದಸ್ಯೆಯ ಪ್ರೇರಣೆಯಿಂದ ನವರಾತ್ರಿ ಸಂಭ್ರಮ
ಚಿಕ್ಕೋಡಿ 26 : ನಗರದ ಹಾಲಟ್ಟಿಯಲ್ಲಿ ನವರಾತ್ರಿ ಹಬ್ಬದ ಸಡಗರವು ಈ ಬಾರಿ ವಿಶಿಷ್ಟ ಮೆರಗು ಪಡೆದುಕೊಂಡಿದೆ. ಇದುವರೆಗೆ ಮನೆಮನೆಗಳಲ್ಲಿ ಮಾತ್ರ ಸೀಮಿತವಾಗಿದ್ದ ಪೂಜೆಹಿಆರಾಧನೆ, ಈಗ ವಾರ್ಡ್ ನಂ. 13ರ ಪುರಸಭೆ ಸದಸ್ಯೆ ಶ್ರೀಮತಿ ರಂಜನಾ ವಿಶ್ವನಾಥ ಕಾಮಗೌಡ ಅವರ ಪ್ರೇರಣೆಯಿಂದ ಪಟ್ಟಣದ ಡಂಬಳಪ್ಲಾಟ ಮತ್ತು ಹಾಲಟ್ಟಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.ಉತ್ಸವದ ಅಂಗವಾಗಿ ಪ್ರತಿದಿನವೂ ದೇವಿ ಪೂಜೆ, ದಾಂಡಿಯಾ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲ್ಪಟ್ಟಿವೆ.
ಮಹಿಳೆಯರ ವಿಭಾಗದಲ್ಲಿ ನೃತ್ಯ ಹಾಗೂ ವೇಷಭೂಷಣ ಸ್ಪರ್ಧೆಗಳು, ಹಿರಿಯ ನಾಗರಿಕರಿಗೆ ಪ್ರೋತ್ಸಾಹಕ ಬಹುಮಾನ ವಿತರಣೆ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿವೆ.ಅಭಿವೃದ್ಧಿ ಕಾರ್ಯಗಳ ಜೊತೆಗೆ ವಾರ್ಡಿನ ಜನರ ಸುಖಹಿದುಃಖಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಈ ನವರಾತ್ರಿ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ವರ್ಷದಿಂದ ವರ್ಷಕ್ಕೆ ಈ ಹಬ್ಬದ ವಿಜೃಂಭಣೆಯು ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ ಎಂದು ವಿಶ್ವನಾಥ ಕಾಮಗೌಡ ತಿಳಿಸಿದ್ದಾರೆ.