ನಾಟ್ಯಶಾಸ್ತ್ರ ವೈಜ್ಞಾನಿಕವಾಗಿ ರೂಪಿಸಲ್ಪಟ್ಟ ತಪಸ್ಸು: ಬಸವರಾಜ
ಲೋಕದರ್ಶನ ವರದಿ
ಬಳ್ಳಾರಿ 26: ನಾಟ್ಯಶಾಸ್ತ್ರ ಎಂಬುದು ವೈಜ್ಞಾನಿಕವಾಗಿ ರೂಪಿಸಲ್ಪಟ್ಟ ಒಂದು ತಪ್ಪಸ್ಸು. ಅನೇಕ ಶಿಲ್ಪಗಳಲ್ಲಿ ಉದಾಹರಣೆಗೆ ಬೇಲೂರಿನಲ್ಲಿರುವ ಶಿಲಾಬಾಲಕಿಯರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿರುವ ಕುರುವತ್ತಿಯಲ್ಲಿರುವ ಮಲ್ಲಿಕಾಜರ್ುನ ದೇವಸ್ಥಾನದಲ್ಲಿರುವ ಶಿಲಾಬಾಲಕಿಯರು ಅವರ ಕೈಬೆರಳುಗಳು ಮತ್ತು ಭಂಗಿಗಳು ನಾಟ್ಯಶಾಸ್ತ್ರದ ಪ್ರಕಾರವೇ ಇರುತ್ತದೆ.
ನಾಟ್ಯಶಾಸ್ತ್ರದಲ್ಲಿ ಅನೇಕರು ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿಯನ್ನು ತೆಗೆದುಕೊಂಡಿದ್ದಾರೆ. ಆ ಬೆರಳುಗಳಲ್ಲಿರುವ ಭಂಗಿಗಳ ಅನುಗುಣವಾಗಿಯೇ ನೃತ್ಯಗಾತರ್ಿಯರು ನಾಟ್ಯ ಮಾಡುವ ಮೊದಲು ತಮ್ಮ ಗುರುಗಳ ಆಶೀವರ್ಾದದಿಂದ ತರಬೇತಿ ಹೊಂದಿ ರಂಗಪ್ರವೇಶ ಮಾಡಿ ಗೆಜ್ಜೆ ಪೂಜೆ ಮಾಡಿ ರಂಗದ ಮೇಲೆ ಬರುತ್ತಾರೆ ಎಂದು ಸೂರ್ಯ ಕಲಾಟ್ರಸ್ಟ್, ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಜಾನಪದ ಪರಿಷತ್ತಿನ ಸಹಕಾರದೊಂದಿಗೆ ಹಮ್ಮಿಕೊಂಡ ನೃತ್ಯ ವಿನೋದ ಸಂಭ್ರಮ 2019 ಮತ್ತು 17ನೇ ವಾಷರ್ಿಕೋತ್ಸವ ಹಾಗೂ ಪ್ರಥಮ ಗೆಜ್ಜೆ ಪೂಜೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಕನರ್ಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ ರವರು ಮಾತನಾಡಿದರು.
ಬಳ್ಳಾರಿಯ ಡಾ|| ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ದಿನಾಂಕ: ನಡೆದ ಕಾರ್ಯಕ್ರಮವನ್ನು ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಸ್ವರೂಪ ನೀಲಿಮಾ ರಮೇಶ್ ಇವರು ಉದ್ಘಾಟಿಸಿ ಜಾನಪದ ನೃತ್ಯಗಳನ್ನು ಕೊಂಡಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ಜ್ಯೋತಿ.ಎಲ್ ಇವರು ಖಿನ್ನತೆಯಿಂದ ಬಳಲುತ್ತಿರುವ ಜನರು ನೃತ್ಯಗಳನ್ನು ನೋಡುವುದರಿಂದ ತಮ್ಮ ಖಾಯಿಲೆಗಳನ್ನು ಗುಣಪಡಿಸಿಕೊಂಡು ಮನಸ್ಸನ್ನು ಹಗುರಮಾಡಿಕೊಳ್ಳಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿನಗರ ಪೊಲೀಸ್ ಇನ್ಸ್ಪೆಕ್ಟರ್ರಾದ ಆರ್.ನಾಗರಾಜ, ಎ.ಪಿ.ಎಂ.ಸಿ. ಅಸಿಸ್ಟೆಂಟ್ ಸೆಕ್ರೆಟಿರಿಯವರಾದ ವಿ.ಬಸವರಾಜ, ಚಿತ್ರಕಲಾವಿದರಾದ ಕೆ.ಪಿ.ಚೆನ್ನಬಸವರಾಜ, ದಂತವೈದ್ಯರಾದ ಡಾ|| ರಚನ.ಕೆ.ಬಿ., ಡ್ಯಾನ್ಸ್ ಮಾಸ್ಟರ್ ಸುರೇಶ್ ಅಲುವೇಲು, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಎನ್.ಧನುಂಜಯ್ಯ ಹಮಲ್ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ನಟರಾಜನಿಗೆ ಪೂಜೆ ಸಲ್ಲಿಸಿ ಎಲ್ಲಾ ನೃತ್ಯ ಕಲಾವಿದರು ಹೊಸ ಗೆಜ್ಜೆಗಳನ್ನು ಪೂಜೆ ಮಾಡಿ ಕಟ್ಟಿಕೊಂಡು ನತರ್ಿಸಿದರು. ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯೋಜಕತ್ವದಡಿಯಲ್ಲಿ ಪವನ್ ಕುಮಾರ್ ಮತ್ತು ತಂಡದಿಂದ ರಾಮಾಯಣ ದರ್ಶನಂ ಎಂಬ ಸಮೂಹ ನೃತ್ಯ ಮತ್ತು ರಾಘವೇಂದ್ರ ಹಾಗೂ ನಿತಿನ್ ಇವರುಗಳಿಂದ ಯುಗಳ ನೃತ್ಯ ಮತ್ತು ಜಾನಪದ ನೃತ್ಯಗಳು ನೋಡುಗರ ಮನಸ್ಸನ್ನು ಸೂರೆಗೊಂಡವು. ಎಂ.ವಿನೋದ ಕಾರ್ಯಕ್ರಮವನ್ನು ನಿರೂಪಿಸಿದರು. ಸೂರ್ಯ ಕಲಾ ಟ್ರಸ್ಟ್ನ ಅಧ್ಯಕ್ಷರಾದ ಅಭಿಷೇಕ್ ರವರು ಸ್ವಾಗತಿಸಿದರು. ಹಿರೇಮಠರವರು ವಂದಿಸಿದರು. ಇಡೀ ಸಭೆ ನೂರಾರು ಶೋತೃಗಳಿಂದ ತುಂಬಿ ತುಳುಕುತ್ತಿತ್ತು.