ಬೆಳಗಾವಿ

ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಲೋಕದರ್ಶನ ವರದಿ 

ಯಲ್ಲೂರು 02: ರಸ್ತೆಯಲ್ಲಿರುವ ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾಜದ ಆರೋಗ್ಯ ರಕ್ಷಣೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವನಾಥ ಭೋವಿ ಮಾತನಾಡಿ, ಆರೋಗ್ಯ ಸೇವೆಯಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. “ವೈದ್ಯರ ಸೇವೆಯೇ ಸಮಾಜದ ಅಡಿಪಾಯ. ನಿಷ್ಠೆ, ಸೇವಾಭಾವ ಮತ್ತು ಕರುಣೆಯಿಂದ ಕಾರ್ಯನಿರ್ವಹಿಸುವುದೇ ವೈದ್ಯಕೀಯ ವೃತ್ತಿಯ ನಿಜವಾದ ಗುರಿ,” ಎಂದು ಅವರು ಅಭಿಪ್ರಾಯಪಟ್ಟರು.  

್ಖ್ದವ್ಠ್ಲಿವಿದಿಹಿ್ಪೂವ್ಚ್ಲಿಪಿ ನಿರ್ದೇಶಕರಾದ ಡಾ. ಎಚ್‌.ಬಿ. ರಾಜಶೇಖರ ಅವರು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಮಹತ್ವವನ್ನು ವಿವರಿಸಿ, ವೈದ್ಯರ ಸಮರೆ​‍್ಣ ಹಾಗೂ ಸೇವಾ ಮನೋಭಾವ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. ಭಾರತ ರತ್ನ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ಹಾಗೂ ನಿಧನ ದಿನದ ಸ್ಮರಣಾರ್ಥವಾಗಿ ಜುಲೈ 1ರಂದು ಈ ದಿನವನ್ನು ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು.  ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಎನ್‌. ಮಾತನಾಡಿ, ಎಲ್ಲಾ ವೈದ್ಯರಿಗೆ ಶುಭಾಶಯಗಳನ್ನು ತಿಳಿಸಿ, ರೋಗಿಗಳ ಆರೈಕೆ, ನೈತಿಕತೆ ಮತ್ತು ಸೇವಾಭಾವವೇ ಸಂಸ್ಥೆಯ ಶಕ್ತಿ ಎಂದು ಹೇಳಿದರು.  

ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ್ ಅವರು ವೈದ್ಯರ ಸೇವೆಯ ಮಹತ್ವ, ರೋಗಿಗಳೊಂದಿಗೆ ಮಾನವೀಯ ಸಂಬಂಧ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಪಾತ್ರ ಕುರಿತು ಮಾತನಾಡಿದರು.  ಕಾರ್ಯಕ್ರಮದಲ್ಲಿ ಹಿರಿಯ ಜನರಲ್ ಸರ್ಜನ್ ಡಾ. ಅಜಯ್ ಕಾಳೆ ಹಾಗೂ ಹಿರಿಯ ವೈದ್ಯಕೀಯ ವಿಭಾಗದ ಡಾ. ಶ್ರೀಕಾಂತ್ ಮೇತ್ರಿ ಅವರನ್ನು ಅವರ ನಿಸ್ವಾರ್ಥ ಸೇವೆ ಮತ್ತು ಆಸ್ಪತ್ರೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಅನಿಲ್ ಪೋಟೆ, ಡಾ. ಇರ್ಫಾನ್ ಜಮಾದಾರ್, ಡಾ. ಜೆ.ಎಂ. ಖೋತ್ ಹಾಗೂ ಡಾ. ಕೇದಾರಿ ಸಮಾಜಿ ಅವರನ್ನು ಸಹ ಗೌರವಿಸಲಾಯಿತು.  

ಆಸ್ಪತ್ರೆಯ ಅಭಿವೃದ್ಧಿ ಹಾಗೂ ನಿರಂತರ ಸಹಕಾರಕ್ಕಾಗಿ ವೈದ್ಯರು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲಾಯಿತು. ಜೊತೆಗೆ ಆಯೋಜಿಸಲಾದ ಉಚಿತ ಹೊರರೋಗಿ (ಓಕಆ) ನೋಂದಣಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು 250ಕ್ಕೂ ಹೆಚ್ಚು ರೋಗಿಗಳು ಇದರ ಪ್ರಯೋಜನ ಪಡೆದರು.  ಕಾರ್ಯಕ್ರಮವನ್ನು ಡಾ. ಸಂಜೀವಿನಿ ರಾಥೋಡ್ ನಿರೂಪಿಸಿದರು ಹಾಗೂ ಡಾ. ಅಶ್ವಿನಿ ಪದ್ಮಶಾಲಿ ವಂದನಾರೆ​‍್ಣ ಸಲ್ಲಿಸಿದರು. 


ಸುದ್ದಿ ಓದಿ