ರಾಷ್ಟ್ರೀಯ ರಕ್ಷಣಾ ನಿಧಿ ಸುಕೋ ಬ್ಯಾಂಕ ನೌಕರರ ಅಳಿಲು ಸೇವೆ
ಲೋಕದರ್ಶನ ವರದಿ
ಬಳ್ಳಾರಿ 05: ಭಾರತೀಯ ಯೋಧರು ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹಗಲು, ರಾತ್ರಿ, ಮಳೆ, ಗಾಳಿ, ಚಳಿಯ ಪರಿವೆ ಇಲ್ಲದೇ ಕುಟುಂಬವನ್ನು ತೊರೆದು ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಎಷ್ಟೋ ಜನ ಯೋಧರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿ ದೇಶವನ್ನು ರಕ್ಷಿಸುತ್ತಿದ್ದಾರೆ. ಅವರ ಈ ಅಮೂಲ್ಯ ಸೇವೆಗೆ ಕೃತಜ್ಞತೆಯನ್ನು ಅಪರ್ಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಈ ಹಿನ್ನೆಲೆಯಲ್ಲಿ ಸುಕೋ ಬ್ಯಾಂಕಿನ ನೌಕರರು ಸ್ವ ಇಚ್ಛೆಯಿಂದ "ರಾಷ್ಟ್ರೀಯ ರಕ್ಷಣಾ ನಿಧಿಗೆ ತಮ್ಮ ಅಳಿಲು ಸೇವೆಯನ್ನು ರೂ. 55,000/- ಗಳ ಡಿ.ಡಿ ಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ದೇಣಿಗೆ ನೀಡಿದರು. ತನ್ಮೂಲಕ ಯೋಧರ ಕಲ್ಯಾಣಕ್ಕಾಗಿ ಸಂಬಂಧಿಸಿದ ನಿಧಿಗೆ ತಲುಪಿಸಲು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದರು. ರಾಷ್ಟ್ರ ಕಟ್ಟುವ ಕಾಯಕದಲ್ಲಿ ಸುಕೋ ಬ್ಯಾಂಕಿನ ನೌಕರರು ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುಕೋ ಬ್ಯಾಂಕಿನ ಆಡಳಿತ ಮಂಡಳಿಯ ಕಾರ್ಯದಶರ್ಿ ವೆಂಕಟೇಶ್ರಾವ್, ಸಿಬ್ಬಂದಿಗಳಾದ ಅಡವಿ ಸ್ವಾಮಿ, ಪ್ರಮೋದ್, ಚೇತನ್, ನೇತ್ರಾವತಿ, ವಿದ್ಯಾ, ಮಂಜುಳಾ, ರೂಪಾ ಮತ್ತಿತರರು ಹಾಜರಿದ್ದರು.