ಬರದಿಂದ ಕಂಗೆಟ್ಟ ಪ್ರದೇಶಗಳಿಗೆ ನರೇಗಾ ವರದಾನ: ಡಾ.ಕೆ.ವಿ.ರಾಜೇಂದ್ರ

ಬರದಿಂದ ಕಂಗೆಟ್ಟ ಪ್ರದೇಶಗಳಿಗೆ ನರೇಗಾ ವರದಾನ: ಡಾ.ಕೆ.ವಿ.ರಾಜೇಂದ್ರ

ಬಳ್ಳಾರಿ 11: ಬರದಿಂದ ಕಂಗೆಟ್ಟ ಪ್ರದೇಶಗಳಿಗೆ ನರೇಗಾ ಒಂದು ವರದಾನವಾಗಿದ್ದು,ಅದನ್ನು ಸಮರ್ಪಕವಾಗಿ ತಿಳಿದುಕೊಂಡು ಬರದಿಂದ ಕಂಗೆಟ್ಟ ಜನರಿಗೆ ಸಹಾಯ ಮಾಡುವ ಕೆಲಸ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕಿದೆ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಹೇಳಿದರು. ನರೇಗಾ ಯೋಜನೆ ಅಡಿ ದೀರ್ಘಕಾಲಿಕ ಬಾಳಿಕೆ ಬರುವ ಆಸ್ತಿಗಳ ಸೃಜನೆಗೆ ಸಂಬಂಧಿಸಿದ ಕಾಮಗಾರಿಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ನಗರದ ಬಿಡಿಎಎ ಪುಟ್ಬಾಲ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಯರ್ಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ನರೇಗಾ ಯೋಜನೆ ಅಡಿ ದೀರ್ಘಕಾಲಿಕ ಬಾಳಿಕೆ ಬರುವ ಆಸ್ತಿಗಳ ಸೃಜನೆಯಂತ ಕೃಷಿಹೊಂಡ, ಬದು ನಿಮರ್ಾಣ, ಎರೆಹುಳು ತೊಟ್ಟಿ,ದನದ ತೊಟ್ಟಿ ನಿಮರ್ಾಣ, ವೈಯಕ್ತಿಕ ಕೊಳವೆ ಬಾವಿ, ಹಂದಿ,ಕೊಳಿ ಸಾಗಾಣಿಕೆ ಶೆಡ್,ವೈಯಕ್ತಿಕ ಮನೆ ನಿಮರ್ಾಣ ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಅದರ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡು ತಮ್ಮ ಗ್ರಾಪಂ ವ್ಯಾಪ್ತಿಯ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು.ಇದಕ್ಕೆ ಅಧಿಕಾರಿಗಳು ಕೈಜೋಡಿಸಬೇಕು ಎಂದರು. 

ಬಹಳಷ್ಟು ಕಡೆಗಳಲ್ಲಿ ಕೃಷಿ ಚಟುವಟಿಕೆ ಇಲ್ಲ, ರೈತರು ಹೊಟ್ಟೆಪಾಡಿಗಾಗಿ ಗುಳೆ ಹೋಗ್ತಾ ಇದ್ದಾರೆ ಎಂಬ ವರದಿಗಳು ಪ್ರತಿನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ಉತ್ತಮ ಅವಕಾಶಗಳನ್ನು ನಿರೀಕ್ಷೆ ಮಾಡಿ ಗುಳೆ ಹೋಗುವುದರಲ್ಲಿ ತಪ್ಪಿಲ್ಲ; ಆದರೇ ಕಂಗೆಟ್ಟು ಗುಳೆ ಹೊದರೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಲೆತಗ್ಗಿಸಬೇಕಾದ ವಿಚಾರ. ಇದಕ್ಕೆ ಯಾವುದೇ ಕಾರಣಕ್ಕೂ ಅಸ್ಪದ ನೀಡಬೇಡಿ ಎಂದರು. 

ಬಳ್ಳಾರಿ ಜಿಪಂನಲ್ಲಿ 44 ಲಕ್ಷ ಮಾನವ ದಿನಗಳ ಸೃಜನೆ ಗುರಿ ಇದ್ದರೂ ಕೂಡ 10 ಕೋಟಿ ಮಾನವ ದಿನಗಳ ಕ್ರಿಯಾಯೋಜನೆ ತಯಾರು ಮಾಡಿ ನೀಡಲಾಗಿದೆ ಎಂದರು. ನಿಮ್ಮ ರಾಜಕೀಯ ಗ್ರಾಪಂ ಹೊರಗಿಡಿ: ನಿಮ್ಮ ರಾಜಕೀಯ ಏನಿದ್ರೂ ಗ್ರಾಮ ಪಂಚಾಯಿತಿ ಹೊರಗಡೆ ಇಟ್ಟುಕೊಳ್ಳಿ;ಮೊದಲು ಗ್ರಾಮದ ಅಭಿವೃದ್ಧಿಗೆ ಮುಂದಾಗಿ ಎಂದು ತಮ್ಮ ಸೂಚ್ಯ ಮಾತುಗಳಲ್ಲಿಯೇ ತಿಳಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ತಮಗೆ ಅವಕಾಶವಿರುವ ಮತ್ತು ಮಾಡಬೇಕಿರುವ ಕೆಲಸಗಳನ್ನು ಮುತುವಜರ್ಿ ವಹಿಸಿ ಮಾಡಿ;ಅದಕ್ಕಾಗಿಯೇ ತಮಗೆ ತಿಳಿವಳಿಕೆ ಮೂಡಿಸುವ ಕಾಯರ್ಾಗಾರ ಏರ್ಪಡಿಸಲಾಗಿದೆ ಎಂದರು. ಪಿಡಿಒ, ಇಒ ಮತ್ತು ಸಿಇಒ ಅವರು ನರೇಗಾ ಕುರಿತು ಮಾಹಿತಿ ನೀಡಿಲ್ಲ ಅಂತ ಹೇಳದೇ ಸಂಪೂರ್ಣವಾದ ಮಾಹಿತಿ ಇಲ್ಲಿ ತಿಳಿದುಕೊಂಡರೇ ಪಿಡಿಒ,ಟೆಕ್ನಿಕಲ್ ಸಹಾಯಕರು ತಮಗೆ ಮೂರ್ಖರನ್ನಾಗಿಸುವುದನ್ನು ತಪ್ಪಿಸಬಹುದು ಎಂದರು. ಪ್ಲಾಸ್ಟಿಕ್ ನಿಮರ್ೂಲನೆ ದಿವಸ ಮಾಡಿ: ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಪ್ರಾಸ್ಲಿಕ್ ನಿಮರ್ೂಲನೆ ದಿವಸ ಅಂತ ಒಂದು ದಿನ ಶ್ರಮಶಕ್ತಿ ದಿವಸ ಅಂತ ಮಾಡಿ ಗ್ರಾಮಗಳಲ್ಲಿನ ಪ್ಲಾಸ್ಟಿಕ್ನ್ನು ತೆಗೆದು ಒಂದೇಡೆ ಹಾಕಿ ಎಂದು ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು. ಜಿಪಂ ಅಭಿವೃದ್ಧಿ ಉಪಕಾರ್ಯದಶರ್ಿ ಮುಕ್ಕಣ್ಣ ಕರಿಗಾರ್, ಜಿಪಂ ಸದಸ್ಯರಾದ ಎ.ಮಾನಯ್ಯ, ಅಲ್ಲಂ ಪ್ರಶಾಂತ ಮಾತನಾಡಿದರು. 

ಈ ಸಂದರ್ಭದಲ್ಲಿ ಬಳ್ಳಾರಿ ತಾಪಂ ಅಧ್ಯಕ್ಷೆ ರಮೀಜಾ ಬಿ., ಉಪಾಧ್ಯಕ್ಷೆ ಪುಷ್ಪಾವತಿ, ಜಿಪಂ ಸದಸ್ಯೆ ಬನಶಂಕರಿ, ಬಳ್ಳಾರಿ ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಜಾನಕಿರಾಮ್ ಸೇರಿದಂತೆ ಬಳ್ಳಾರಿ ತಾಲೂಕಿನ ವಿವಿಧ ಗ್ರಾಪಂಗಳಿಂದ ಆಗಮಿಸಿದ್ದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಕೂಲಿ ಖಾತರಿ ಮನರೇಗಾ ಯೋಜನೆ ಅಡಿ ಕೂಲಿ ಕೆಲಸಕ್ಕೆ ಆಹ್ವಾನ ಪತ್ರ ಎಂಬ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.


ಸುದ್ದಿ ಓದಿ