ಸಕರ್ಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ, ಶುಲ್ಕ ಹೆಚ್ಚಳದ ಕುರಿತು ಪ್ರತಿಭಟನೆ
ಬಳ್ಳಾರಿ 22: ಸಕರ್ಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾವನ್ನು ಜಾರಿಗೆ ತರುವ ಪ್ರಸ್ತಾಪವನ್ನು ವಿರೋಧಿಸಿ ಹಾಗೂ ಶುಲ್ಕ ಹೆಚ್ಚಳವನ್ನು ಖಂಡಿಸಿ ಇಂದು ಎಐಡಿಎಸ್ಒ ವಿದ್ಯಾಥರ್ಿ ಸಂಘಟನೆಯ ನೇತೃತ್ವದಲ್ಲಿ ನೂರಾರು ವಿದ್ಯಾಥರ್ಿಗಳು ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಡಿಸಿ ಕಛೇರಿಯವರೆಗೆ ಮೆರವಣಿಗೆ ನಡೆಸಿ ಮನವಿ ಪತ್ರವನ್ನು ಸಲ್ಲಿಸಿದರು. ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಒ ಸಂಘಟನೆಯ ರಾಜ್ಯಧ್ಯಕ್ಷರಾದ ಡಾ.ಪ್ರಮೋದ್ ರವರು ಮಾತನಾಡುತ್ತಾ.., "ಸಕರ್ಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ (ಅನಿವಾಸಿ ಭಾರತೀಯರ ಕೋಟಾ) ಜಾರಿಗೆ ತರುವ ಹಾಗೂ ಪದವಿ ಹಾಗೂ ಸ್ನಾತ್ತಕೋತ್ತರ ಕೋಸರ್ುಗಳ ಶೇ.300 ಶುಲ್ಕ ಹೆಚ್ಚಿಸುವ ಕುರಿತು ರಾಜ್ಯ ಸಕರ್ಾರ ಪ್ರಸ್ತಾಪ ಮಾಡಿದೆ. ಹಾಗೆಯೇ ಪದವಿ ಕೋಸರ್ುಗಳ ಶುಲ್ಕ ರೂ.17,000 ರಿಂದ ರೂ.50,000ಕ್ಕೆ ಈಗಾಗಲೆ ಏರಿಸಲಾಗಿದೆ. ಸ್ನಾತ್ತಕೋತ್ತರ ಕೋಸರ್ುಗಳ ಶುಲ್ಕಗಳನ್ನು ರೂ.3.5ಲಕ್ಷಕ್ಕೆ ಏರಿಸುವ ಪ್ರಸ್ತಾಪವಿದೆ.
ಸಕರ್ಾರದ ಈ ನಿಲುವು ನಿಜಕ್ಕೂ ವೈದ್ಯರಲ್ಲಿ, ವಿದ್ಯಾಥರ್ಿ, ಪೋಷಕರು, ಹಾಗೂ ಜನಸಾಮಾನ್ಯರಲ್ಲೂ ದೊಡ್ಡ ಆಘಾತ ಮೂಡಿಸಿದೆ. ಖಾಸಗಿ ಕಾಲೇಜುಗಳಲ್ಲೂ ಎನ್.ಆರ್.ಐ ಕೋಟಾ ಜಾರಿಗೆ ತರುವುದು ಸಂವಿಧಾನ ಬಾಹಿರ ಹಾಗೂ ಸಹಜ ನ್ಯಾಯಕ್ಕೆ ವಿರುದ್ಧವಾಗಿರುವಾಗ, ರಾಜ್ಯ ಸಕರ್ಾರ, ಸಕರ್ಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10ರಷ್ಟು ಎನ್.ಆರ್.ಐ ಕೋಟಾ ಜಾರಿ ಮಾಡುವ ಪ್ರಸ್ತಾಪ ಮಾಡಿದೆ. ಇದರಿಂದ ವೈದ್ಯಕೀಯ ಶಿಕ್ಷಣ ಇನ್ನಷ್ಟು ವ್ಯಾಪಾರೀಕರಣ-ಖಾಸಗೀಕರಣಗೊಳ್ಳುವ ಆತಂಕ ಎದುರಾಗಿದೆ. ಈಗಾಗಲೆ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಕೈಗೆಟಕದಷ್ಟು ದುಬಾರಿಯಾಗಿರುವಾಗ, ಬಡ ವಿದ್ಯಾಥರ್ಿಗಳಿಗೆ ಇದ್ದ ಏಕೈಕ ಆಸರೆಯೆಂದರೆ, ಅದು ಸಕರ್ಾರಿ ವೈದ್ಯಕೀಯ ಕಾಲೇಜುಗಳು. ಸಕರ್ಾರಿ ವೈದ್ಯಕೀಯ ಕಾಲೇಜುಗಳಲ್ಲಿ ಓದಿದ ಎಷ್ಟೋ ಬಡ ವಿದ್ಯಾಥರ್ಿಗಳು ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುವ ಕಾಳಜಿ ತೋರುತ್ತಿದ್ದರು. ಇನ್ನು ಬರುವ ದಿನಗಳಲ್ಲಿ ಸಕರ್ಾರಿ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಜಾರಿಯಾದರೆ, ಶುಲ್ಕಗಳು ದುಬಾರಿಯಾಗುತ್ತಾ ಹೋದರೆ, ಬಡ ಹಾಗೂ ಪ್ರತಿಭಾವಂತ ವಿದ್ಯಾಥರ್ಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದರ ಪರಿಣಾಮವಾಗಿ ಲಕ್ಷಾಂತರ-ಕೋಟ್ಯಾಂತರ ರೂಪಾಯಿ ನೀಡುವವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಸೀಮಿತಗೊಳ್ಳುತ್ತದೆ. ಅಷ್ಟೊಂದು ದುಬಾರಿ ಹಣ ತೆತ್ತ ವಿದ್ಯಾಥರ್ಿಗಳಿಗೆ ಹೂಡಿದ 'ಬಂಡವಾಳ'ವನ್ನು ವಾಪಸ್ಸು ಗಳಿಸುವುದೇ ಮುಖ್ಯ ಉದ್ದೇಶವಾಗಿ, ಆರೋಗ್ಯ ಕ್ಷೇತ್ರವು ಇನ್ನಷ್ಟು ವ್ಯಾಪಾರಿಕರಣಗೊಳ್ಳುತ್ತದೆ" ಎಂದು ತಿಳಿಸಿದರು. ಎಐಡಿಎಸ್ಒ ಜಿಲ್ಲಾಧ್ಯಕ್ಷರಾದ ಗೋವಿಂದ್ರವರು ಮಾತನಾಡುತ್ತಾ.., "ರಾಜ್ಯ ಸಕರ್ಾರ ವೈದ್ಯಕೀಯ ಕಾಲೇಜುಗಳನ್ನು ಅಭಿವೃದ್ಧಿಗೊಳಿಸಲು, ಸಿಬ್ಬಂದಿಗಳಿಗೆ ಸೌಲಭ್ಯಗಳನ್ನು ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಇದಕ್ಕೆಂದೇ ಸಕರ್ಾರ ಹೆಚ್ಚಿನ ಬಜೆಟ್ ನೀಡಿದರೆ ಸಂತೋಷವೇ,
ಈ ಅಗತ್ಯಗಳನ್ನು ಪೂರೈಸಲು ಶುಲ್ಕ ಹೆಚ್ಚಳ ಹಾಗೂ ಎನ್.ಆರ್.ಐ ಕೋಟಾ ಜಾರಿಗೆ ತರುತ್ತಿರುವುದಾಗಿ ರಾಜ್ಯ ಸಕರ್ಾರ ಹೇಳುತ್ತಿರುವುದು ಮಾತ್ರ ಸರ್ವ ಸಮ್ಮತವಲ್ಲ ಎಂದು ಎಐಡಿಎಸ್ಓ ಅಭಿಪ್ರಾಯಪಡುತ್ತದೆ. ವಿದ್ಯಾಥರ್ಿಗಳ ಶುಲ್ಕವನ್ನು ಆದಾಯದ ಮೂಲವೆಂದು ಪರಿಗಣಿಸುವುದೇ ಪ್ರಜಾತಾಂತ್ರಿಕ ಶಿಕ್ಷಣದ ಮೌಲ್ಯಗಳಿಗೆ ವಿರುದ್ಧವಾದದ್ದು ಎಂಬುದು ಶಿಕ್ಷಣ ತಜ್ಞರ ನಿಲುವಾಗಿದೆ. ಈ ಹಿನ್ನಲೆಯಲ್ಲಿ ಎನ್.ಆರ್.ಐ ಕೋಟಾ ಹಾಗೂ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೈಬಿಡಬೇಕೆಂದು" ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾ ಕಾರ್ಯದಶರ್ಿ ಸುರೇಶ್.ಜಿ, ಉಪಾಧ್ಯಕ್ಷರಾದ ಜಗದೀಶ್.ವಿ.ಎನ್ ಹಾಗೂ ಎಐಡಿಎಸ್ಒ ಜಿಲ್ಲಾ ಸಮಿತಿಯ ಸದಸ್ಯರು ಮತ್ತು ನೂರಾರು ವಿದ್ಯಾಥರ್ಿಗಳು ಭಾಗವಹಿಸಿದ್ದರು.