ಕೇಂದ್ರ ಕಾರಾಗೃಹದಲ್ಲಿ ಸಂಗೀತ-ಹಾಸ್ಯಸುಧೆ ಕಾರ್ಯಕ್ರಮ ಬಂಧಿಗಳು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುವತ್ತ ಗಮನಹರಿಸಿ: ಸಿದ್ದರಾಮ
ಬಳ್ಳಾರಿ,ಡಿ.17: ಮನುಷ್ಯನ ಜೀವನ ಎಲ್ಲಕ್ಕಿಂತ ಶ್ರೇಷ್ಠವಾಗಿದ್ದು, ಇದನ್ನು ಹಾನಿ ಮಾಡಿಕೊಳ್ಳದೇ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಹಾಗಾಗಿ ಯಾವುದೇ ಸಂದರ್ಭದಲ್ಲಿ ಸಿಟ್ಟಿನ ಕೈಗೆ ಮನಸ್ಸನ್ನು ನೀಡಿ ತಪ್ಪು ಮಾಡಿ ಬಂಧಿಗಳಾಗಿದ್ದೀರಿ ಆದರೆ. ಇದಕ್ಕಾಗಿ ಚಿಂತಿಸಬೇಕಾಗಿಲ್ಲ. ನೀವು ಬಿಡುಗಡೆಯಾದ ನಂತರ ಸಮಾಜದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಗಮನಹರಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಕರೆ ನೀಡಿದರು. ಅವರು ಸ್ಥಳೀಯ ಕೇಂದ್ರ ಕಾರಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಭಾನುವಾರದಂದು ಬೆಳಿಗೆ ಹಮ್ಮಿಕೊಂಡಿದ್ದ `ಸಂಗೀತ ಹಾಗೂ ಹಾಸ್ಯಸುಧೆ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತಮ ಜೀವನ ನಡೆಸುವುದೇ ಬದುಕಿನ ಮೂಲ ಆಶಯವೂ ಹೌದು. ನಮ್ಮ ನಡೆ, ನುಡಿ ಶುದ್ಧಿಯಿಂದ ನೆಮ್ಮದಿಯ ನಾಳೆಗಳನ್ನು ನಮ್ಮದಾಗಿಸಿಕೊಳ್ಳಬೇಕು. ಸಕಲ ಜೀವರಾಶಿಗಳ ಪೈಕಿ ಮನುಷ್ಯನ ಜನ್ಮ ಬಹುದೊಡ್ಡದು. ಹೀಗಾಗಿ ಅನೇಕ ಶರಣರು, ಸಂತರು ಮಾನವ ಬದುಕಿನ ಮಹತ್ವದ ಬಗ್ಗೆ ತಮ್ಮ ಕಾವ್ಯಗಳಲ್ಲಿ ಹೆಚ್ಚು ಪ್ರಸ್ತಾಪಿಸಿದ್ದಾರೆ. ಪುರಂದರ ದಾಸರು `ಮಾನವ ಜನ್ಮ ಬಹುದೊಡ್ಡದು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ..' ಎಂದು ಮಾನವ ಜನ್ಮದ ಮಹತ್ವವನ್ನು ವಿವರಿಸಿದ್ದಾರೆ ಎಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಪಿ.ರಂಗನಾಥ್, ಜೈಲನ್ನು ಮುಚ್ಚಿದ ಬಯಲು ಎಂದು ಕರೆಯಲಾಗುತ್ತದೆ. ಆದರೆ, ಬಳ್ಳಾರಿಯ ಜೈಲನ್ನು ಮುಕ್ತಗೊಳಿಸುವ ಕೆಲಸ ಮಾಡಿದ್ದೇವೆ. ಕಾರಾಗೃಹದ ವೀಕ್ಷಣೆಗೆಂದು ಬರುವವರೆಗೆ ಮುಕ್ತವಾಗಿ ಅವಕಾಶ ನೀಡಿದ್ದೇವೆ. ಜೈಲುಗಳು ಮುಕ್ತವಾಗಿದ್ದರೆ ಮಾತ್ರ ಬಂಧಿಗಳ ಮನಸ್ಸು ಮುಕ್ತವಾಗಲು ಸಾಧ್ಯವಿದ್ದು, ಈ ದಿಸೆಯ ಪ್ರಯತ್ನಗಳು ನಿರಂತರವಾಗಿ ನಡೆದಿವೆ ಎಂದರು. ಕಳೆದ ಒಂದು ವರ್ಷದಲ್ಲಿ ವಿವಿಧ ಸಾಹಿತ್ಯ, ಸಂಗೀತ ಹಾಗೂ ನಾಟಕ ಪ್ರಕಾರದ 12 ಕಾರ್ಯಕ್ರಮಗಳು ಕಾರಾಗೃಹದಲ್ಲಿ ನಡೆದಿವೆ. ಜೈಲುವಾಸಿಗಳ ಖಿನ್ನತೆಯನ್ನು ದೂರ ಮಾಡಲು ಆಗಾಗ್ಗೆ ಸಾಹಿತ್ಯ, ಸಂಗೀತ ಹಾಗೂ ನಾಟಕಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಜಿಲ್ಲಾ ಸೂಚನಾವಿಜ್ಞಾನಾಧಿಕಾರಿ ಶಿವಪ್ರಕಾಶ್ ವಸ್ತ್ರದ್ ಮಾತನಾಡಿ, ಸಂಗೀತ ಹಾಗೂ ಸಾಹಿತ್ಯ ಚಟುವಟಿಕೆಗಳಿಂದ ಮನಸ್ಸು ಸುಸಂಸ್ಕೃತಗೊಳ್ಳುತ್ತದೆ. ಇದು ಉತ್ತಮ ಬದುಕಿನೆಡೆಗೆ ಮನುಷ್ಯನನ್ನು ಕೊಂಡೊಯ್ಯುತ್ತದೆ ಎಂದರು. ಸಾಹಿತ್ಯ ಹಾಗೂ ಸಂಗೀತ ಒಂದಕ್ಕೊಂದು ಪೂರಕ. ಈ ಎರಡು ಪ್ರಕಾರಗಳು ಮನುಷ್ಯನ ಬದುಕಿಗೆ ಉತ್ತಮ ಸಂಸ್ಕಾರ ನೀಡುತ್ತವೆ. ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಳ್ಳಲು ಸಹಕಾರಿಯಾಗುತ್ತವೆ. ಬಳ್ಳಾರಿ ಕಾರಾಗೃಹದ ಅಧಿಕಾರಿಯ ಸಾಂಸ್ಕೃತಿಕ ಮನಸ್ಸಿನ ಫಲವಾಗಿ ಇಲ್ಲಿ ನಿರಂತರವಾಗಿ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದು, ಇದು ಗಮನಾರ್ಹ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸೊಂತ ಗಿರಿಧರ್ ಮಾತನಾಡಿ, ಕೇಂದ್ರ ಕಾರಾಗೃಹದ ಕೈದಿಗಳ ಮನಃ ಪರಿವರ್ತನೆಗೆ ನಿರಂತರವಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಸ್ಮರಿಸಿದರು. ಕಾರಾಗೃಹದ ಅಭಿವೃದ್ಧಿ ನೆಲೆಯಲ್ಲಿ ಆಥರ್ಿಕ ನೆರವು ಬಯಸಿದಲ್ಲಿ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆಯಿಂದ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು. ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಗಾಯಕರಾದ ಕೆ.ವಸಂತಕುಮಾರ್, ರಾಘವೇಂದ್ರ ಗುಡದೂರು ಹಾಗೂ ಪರಶುರಾಮ ಹಂದ್ಯಾಳು ಅವರು ಕನ್ನಡದ ಅನೇಕ ಭಾವಸ್ಪಶರ್ಿ ಭಾವಗೀತೆ, ತತ್ವಪದಗಳನ್ನು ಹಾಡಿ ಮನಸೂರೆಗೊಂಡರು. ಗಮನ ಸೆಳೆದ
ಹಾಸ್ಯ ಕಾರ್ಯಕ್ರಮ : ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಹಾಸ್ಯ ಸುಧೆ ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಹಾಸ್ಯ ಕಲಾವಿದ ಎ.ಎರ್ರಿಸ್ವಾಮಿ ಅವರ ವಿವಿಧ ಹಾಸ್ಯ ಪ್ರಸಂಗಗಳಿಗೆ ಕೈದಿಗಳು ನಗುವಿನ ಅಲೆಯಲ್ಲಿ ತೇಲಿಹೋದರು. ನಿತ್ಯ ಜೀವನದಲ್ಲಿ ಜರುಗುವ ಅನೇಕ ಪ್ರಸಂಗಗಳನ್ನು ಹಾಸ್ಯದ ವಸ್ತುವನ್ನಾಗಿಸಿದ ಎರ್ರಿಸ್ವಾಮಿ ಅವರು, ಹಾಸ್ಯದ ನಡುವೆ ಕನ್ನಡ ಸಾಹಿತ್ಯದ ಗಟ್ಟಿತನ ಹಾಗೂ ಡಿ.ವಿ.ಜಿ ಸೇರಿದಂತೆ ಅನೇಕ ಸಾಹಿತಿಗಳ ಕಾವ್ಯಗಳ ಸಾಲುಗಳನ್ನು ಮೆಲುಕು ಹಾಕಿದರು.