ಮುದ್ದೆಬಿಹಾಲ್

ಮುದ್ದೇಬಿಹಾಳ ಪುರಸಭೆ ಹರಾಜು ಪ್ರಕ್ರಿಯೆ ಶಾಂತಿಯುತ

ಮುದ್ದೇಬಿಹಾಳ ಪುರಸಭೆ ಹರಾಜು ಪ್ರಕ್ರಿಯೆ ಶಾಂತಿಯುತ

ಮುದ್ದೇಬಿಹಾಳ 14: ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಸಕರ್ಾರಿ ಮಳಿಗೆಯಲ್ಲಿನ 10/30 ಅಡಿ ಚದರಳತೆಯ ಅಂಗಡಿಗೆ ಅಬ್ಬಬ್ಬಾ ಅಂದರೆ ಮಾಸಿಕ ಕನಿಷ್ಠ 5000ದಿಂದ ಗರಿಷ್ಠ 10000ದ ಒಳಗೆ ಬಾಡಿಗೆ ನಿಗದಿ ಆಗಬಹುದು. ಆದರೆ ಇಲ್ಲಿನ ಪುರಸಭೆಯು ಹಳೇ ತಹಸೀಲ್ದಾರ್ ಕಚೇರಿ ಹತ್ತಿರ ಕಟ್ಟಿಸಿರುವ ಮಳಿಗೆಯಲ್ಲಿನ 5 ಅಂಗಡಿ ಪೈಕಿ ಒಂದು ಅಂಗಡಿ ಮಾಸಿಕ ಬಾಡಿಗೆ ರು.42000(ತೆರಿಗೆ ಹೊರತುಪಡಿಸಿ)ಕ್ಕೆ ಹರಾಜಾಗುವ ಮೂಲಕ ಅಚ್ಚರಿ ತಂದಿಟ್ಟ ಬೆಳವಣಿಗೆ ಬುಧವಾರ ಇಲ್ಲಿ ನಡೆಯಿತು.

3 ತಿಂಗಳ ಹಿಂದೆ ಮಳಿಗೆ ಹರಾಜು ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆ ವೇಳೆ ಎಸ್ಸಿ ಎಸ್ಟಿಗೆ ಅಂಗಡಿ ಮೀಸಲಿಟ್ಟಿಲ್ಲ ಎಂದು ದಲಿತರು ತಕರಾರು ತೆಗೆದಿದ್ದರಿಂದ ಹರಾಜು ಪ್ರಕ್ರಿಯೆ ಮುಂದೂಡಲಾಗಿತ್ತು. ಬುಧವಾರ ಪುರಸಭೆ ಸಭಾ ಭವನದಲ್ಲಿ ಮುಂದೂಡಿದ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಈ ವೇಳೆ ಎಸ್ಸಿ ಎಸ್ಟಿಗೆ ಮಿಸಲಿದ್ದ 2ನೇ ಅಂಗಡಿ ಮಾಸಿಕ ರೂ.8800ಕ್ಕೆ, ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದ 2,3 ಮತ್ತು 4ನೇ ಅಂಗಡಿಗಳು ತಲಾ ಮಾಸಿಕ ಬಾಡಿಗೆ ರು.28500, 25200, 26300ಕ್ಕೆ ಹರಾಜಾದವು.

ಆದರೆ 5ನೇ ಅಂಗಡಿಗೆ ಬಿಡ್ ಕೂಗಿದಾಗ ತೀವ್ರ ಸ್ಪಧರ್ೆ ಕಂಡುಬಂತು. ವ್ಯಕ್ತಿಯೊಬ್ಬರು ಏಕಾಏಕಿ ಮಾಸಿಕ ಬಾಡಿಗೆ ರು.40000 ಕೂಗಿದರು. ನಾಗರಾಜ ಪಾಟೀಲ ಎನ್ನುವವರು ರು.42000ಕ್ಕೇರಿಸಿದರು. ಇದೇ ಅಂತಿಮ ಬಾಡಿಗೆ ಆದ ಕಾರಣ ಇದನ್ನೇ ಅಂತಿಮಗೊಳಿಸಲಾಯಿತು. ಹೀಗಾಗಿ 5ನೇ ಅಂಗಡಿ ಬಾಡಿಗೆ ತೆರಿಗೆ ಹೊರತುಪಡಿಸಿ ರೂ.42000 ಎಂದು ಘೋಷಿಸಿ ಬಿಡ್ ಅಂತ್ಯಗೊಳಿಸಲಾಯಿತು. ಇದು ಅಲ್ಲಿದ್ದ ಎಲ್ಲರಲ್ಲೂ ಅಚ್ಚರಿಗೆ ಕಾರಣವಾದರೆ ಪುರಸಭೆಗೆ ಹೆಚ್ಚಿನ ಆದಾಯ ಬಂದ ಖುಷಿ ಹಿಂದಿನ ಅಧ್ಯಕ್ಷ ಬಸನಗೌಡ ಪಾಟೀಲ ಮತ್ತು ಅಧಿಕಾರಿಗಳಲ್ಲಿ ಕಂಡುಬಂತು.

ಪುರಸಭೆ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಕಂದಾಯ ಅಧಿಕಾರಿ ಮಾಡಗಿ, ಸದಸ್ಯರಾದ ಮಹಿಬೂಬ ಗೊಳಸಂಗಿ, ವೀರೇಶ ಹಡಲಗೇರಿ, ಶಿವು ಶಿವಪುರ ಮತ್ತಿತರರು ಹಾಗೂ ಡೆಪಾಜಿಟ್ ಹಣ ನೀಡಿದ್ದ ಬಿಡ್ದಾರರು ಇದ್ದರು.

ಪ್ರಕ್ರಿಯೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲರು ತಮ್ಮ ಅಧಿಕಾರ ಅವಧಿಯಲ್ಲಿ ಹಳೆ ತಹಸೀಲ್ದಾರ್ ಕಚೇರಿ ಎದುರು ನಗರೋತ್ಥಾನ ಅನುದಾನ ಅಡಿ ರೂ.1.4 ಕೋಟಿ ಮೊತ್ತದಲ್ಲಿ ಒಟ್ಟು 48 ಅಂಗಡಿ ಮಳಿಗೆ ಕಟ್ಟಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ ಇದರಲ್ಲಿ ಈಗ ಎಸ್ಎಫ್ಸಿ ಅಡಿ 5 ಅಂಗಡಿ ಕಟ್ಟಿಸಲಾಗಿದೆ. ವಾಷರ್ಿಕ ರೂ.1 ಕೋಟಿ ಆದಾಯವನ್ನು ಪುರಸಭೆಗೆ ತಂದುಕೊಡುವ ಯೋಜನೆ ಇದಾಗಿದೆ. ಪ್ರಸ್ತುತ ಪುರಸಭೆ ಅಧೀನದಲ್ಲಿ 204 ಅಂಗಡಿ ಇದ್ದರೂ ವಾಷರ್ಿಕ ಬಾಡಿಗೆ ಕೇವಲ ರೂ.12 ಲಕ್ಷ ಇತ್ತು. ಬಾಡಿಗೆ ಏರಿಸಿದ್ದರಿಂದ ಸದ್ಯ ರೂ.30 ಲಕ್ಷ ಆದಾಯಕ್ಕೆ ಬಂದಿದೆ. ರಾಜ್ಯದಲ್ಲೇ ಅತಿ ಕಡಿಮೆ ಆದಾಯ ಇರುವ ಪುರಸಭೆ ಇದಾಗಿತ್ತು. ನನ್ನ ಅವಧಿಯಲ್ಲಿ ಅಂದಾಜು ರೂ.1.40 ಕೋಟಿ ವಾಷರ್ಿಕ ಆದಾಯ ತಂದುಕೊಡುವ ಯೋಜನೆ ರೂಪಿಸಲಾಗಿತ್ತು.

ಸುದ್ದಿ ಓದಿ