ರಾಣೆಬೆನ್ನೂರ

ಮೋದಿಜಿ ಜನ್ಮದಿನೋತ್ಸವ: ಸಾರಿಗೆ ಸಂಸ್ಥೆ ಚಾಲಕರಿಗೆ ಬೂಸ್ಟರ್ ಡೋಜ್

ಮೋದಿಜಿ ಜನ್ಮದಿನೋತ್ಸವ: ಸಾರಿಗೆ ಸಂಸ್ಥೆ ಚಾಲಕರಿಗೆ ಬೂಸ್ಟರ್ ಡೋಜ್

ರಾಣೆಬೆನ್ನೂರು 17:  ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಜನ್ಮದಿನೋತ್ಸವ ನಿಮಿತ್ತ  ಕರ್ನಾಟಕ  ರಾಜ್ಯ ಸಾರಿಗೆ ಸಂಸ್ಥೆಯ  ವಾಹನ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಉಚಿತವಾಗಿ ಬೋ ಸ್ಟರ್ ಡೋಜ್ ಲಸಿಕಾ ಕಾರ್ಯಕ್ರಮವು, ಸೆ.17ರಿಂದ  ಆಯೋಜಿಸಿರುವುದಾಗಿ, ವಾಯುವ್ಯ ಕರ್ನಾಟಕ  ಸಾರಿಗೆ ಸಂಸ್ಥೆಯ  ಉಪಾಧ್ಯಕ್ಷ ಡಾ . ಬಸವರಾಜ್ ಕೇಲಗಾರ ಹೇಳಿದರು. ಅವರು ಶುಕ್ರವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೋದಿಜಿಯವರು ಅಪ್ರತಿಮ ನಾಯಕತ್ವ ಹೊಂದಿರುವ  ಮುತ್ಸದ್ದಿ, ಕೇಂದ್ರ ಸರ್ಕಾರ  ಬಡವರ ದೀನದಲಿತರ, ಸಂಖ್ಯಾತರ ಇನ್ನಿತರೆ ಸಮುದಾಯಗಳ  ಅಭಿವೃದ್ಧಿಗೆ ಸದಾ ಬದ್ಧವಾಗಿದೆ ಎಂದರು. ಸೆ.17ರಂದು ಅವರ ಹುಟ್ಟುಹಬ್ಬ, ಈ ನಿಮಿತ್ತ ಅ.2ರವರೆಗೆ, ಸೇವಾ ಪಾಕ್ಷಿಕ  ದಿನವೆಂದು ಜನರ ಸೇವೆಯಲ್ಲಿ ಮುಂದಾಗಿದ್ದೇವೆ ಈ ನಿಮಿತ್ತ ಹದಿನೈದು ದಿನಗಳ ಕಾಲ ವೈವಿಧ್ಯಮಯ ಸೇವಾಕಾರ್ಯಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದ ಅವರು ಸಾರ್ವಜನಿಕರು ಎಲ್ಲ ಸೇವೆಗಳನ್ನು ಊಚಿತವಾಗಿ ಪಡೆಯಬೇಕು ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕೇಲಗಾರ. ನಗರಾಧ್ಯಕ್ಷ ದೀಪಕ್ ಹರಪನಹಳ್ಳಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಚೋಳಪ್ಪ ಕಸವಾಳ, ಜಿಪಂ ಮಾಜಿ ಸದಸ್ಯ, ಮಂಗಳಗೌರಿ ಅರುಣ್ ಕುಮಾರ್ ಪೂಜಾರ್  ಮತ್ತಿತರರು ಉಪಸ್ಥಿತರಿದ್ದರ 

ಸುದ್ದಿ ಓದಿ