ಹಾಲು ಶಿಥಿಲೀಕರಣ ಘಟಕ ಉದ್ಘಾಟನೆ
ರಾಯಬಾಗ 15: ಗ್ರಾಹಕರಿಗೆ ಕಲಬರಕೆ ರಹಿತ ತಾಜಾ ಹಾಲನ್ನು ಪೂರೈಸಲು ಕೆ.ಎಂ.ಎಫ್. ವತಿಯಿಂದ ಶಿಥಿಲೀಕರಣ ಘಟಕಗಳನ್ನು ಸ್ಥಾಪಿಸಿ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಗ್ರಾಹಕರು ಮತ್ತು ರೈತರು ಪಡೆದುಕೊಳ್ಳಬೇಕೆಂದು ಅಭಾಜಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಪ್ರಣಯ ಪಾಟೀಲ ಹೇಳಿದರು.
ಇತ್ತೀಚಿಗೆ ತಾಲೂಕಿನ ಭಿರಡಿ ಗ್ರಾಮದಲ್ಲಿ 3000 ಲೀಟರ್ ಸಾಮಥ್ರ್ಯ ಹೊಂದಿದ ಹಾಲು ತಂಪುಗೊಳಿಸುವ ಶಿಥಿಲೀಕರಣ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಂಕರ ಪಾಟೀಲ, ರಾಜು ಪಾಟೀಲ, ರಾಜು ಹಿಪ್ಪರಗಿ, ನರಸಿಂಗ ಗುರವ, ಮಹಾದೇವ ಕರಿಗಾರ, ಸುಭಾಷ ಪಾಟೀಲ, ಡಾ.ಎಂ.ವಿ.ಲಕ್ಕನ್ನವರ, ಡಾ. ರಮೇಶ ಕಂಕಣವಾಡಿ, ಡಾ.ರಮೇಶ ಗಲಗಲಿ, ಶ್ರೀಶೈಲ ಪೂಜಾರಿ, ಮುಸ್ತಾಕ ನದಾಫ, ಚಂದ್ರ ಪಾಟೀಲ, ಶಾಲಾ ಗಾವಡೆ, ಎಲ್.ಎನ್ ಗಾವಡೆ ಹಾಗೂ ಅಭಾಜಿ ಫೌಂಡೇಶನ ಸದಸ್ಯರು ಇದ್ದರು.