ಸಮಾನ ಭಾವದಿಂದ ಕಾಣುವ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ : ವಿಶ್ವಾಸ ವೈದ್ಯ
ಸಮಾನ ಭಾವದಿಂದ ಕಾಣುವ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ : ವಿಶ್ವಾಸ ವೈದ್ಯ
ಯರಗಟ್ಟಿ 06: ಮಾಧವಾನಂದ ಪ್ರಭೂಜಿ ಅವರು ಸರ್ವ ಧರ್ಮೀಯರನ್ನು ಸಮಾನ ಭಾವದಿಂದ ಕಾಣುವ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ಮಬನೂರ ಗ್ರಾಮದ ಮಾಧವಾನಂದ ಪ್ರಭೂಜಿಯವರ ಆಶ್ರಮದಲ್ಲಿ ಇಚಗೆ ಹಮ್ಮಿಕೊಂಡಿದ್ದ ಮಾಧವಾನಂದ ಪ್ರಭೂಜಿಯವರ 109 ನೇ ಜಯಂತ್ಯೋತ್ಸವ ಹಾಗೂ ಕರೆಪ್ಪ ಮಹಾರಾಜರ 6ನೇ ಪುಣ್ಯಸ್ಮರಣೋತ್ಸವ, ತೊಟ್ಟಿಲು ಪೂಜೆ, ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಯುವಕರು ಮಾಧವಾನಂದ ಪ್ರಭೂಜಿ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಇಂಚಗೇರಿಮಠದ ಶ್ರೀ ಪ್ರಭುಜಿ ಮಹಾರಾಜರು ಮಾತನಾಡಿ, ಏಕತೆಯಿಂದ ಬದುಕುವ ಮೂಲಕ ಜಗತ್ತು ಅಜರಾಮರವಾಗಿ ಬೆಳೆಯುತ್ತಿದೆ. ಇಂಚಗೇರಿ ಮಾಧವಾನಂದರು ಎಲ್ಲ ಜಾತಿಯವರನ್ನು ಒಗ್ಗುಡಿಸಿಕೊಂಡು ಮಹಾತ್ಮ ಗಾಂಧೀಜಿ ಹಾಗೂ ಜವಹರಲಾಲ ನೆಹರು ಅವರ ಜತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕ್ರಾಂತಿಕಾರಿ ಎಂದರು. ಮುಂಜಾನೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಮಾಧವಾನಂದ ಪ್ರಭೂಜೀಯವರ ಭಾವಚಿತ್ರ ಭವ್ಯ ಮೆರವನಿಗೆ, ಸುಮಂಗಲೆಯರಿಂದ ತೊಟ್ಟಿಲ ಪೂಜೆ ಜರುಗಿತು. ಶಾಸಕ ವಿಶ್ವಾಸ ವೈದ್ಯ ಅವರನ್ನು ಗ್ರಾಮಸ್ಥರು, ಕಾರ್ಯಕರ್ತರು ಸನ್ಮಾನಿಸಿದರು. ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಮಹಾರಾಜರು, ಮಾಜಿ ಗ್ರಾಪಂ ಸದಸ್ಯ ಕರೆಪ್ಪ ಮುರಗೋಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ನಿಂಗವ್ವ ಮೇಟಿ, ಗೋಕಾಕ ಆದ್ಯಾತ್ಮ ಜ್ಞಾನಮಂದಿರದ ಸುವರ್ಣತಾಯಿ ಹೊಸಮಠ, ಕರ್ನಾಟಕ ರಾಜ್ಯ ಸ.ಮಾ.ಮ ಮಂಡಳಿ ನಿರ್ದೇಶಕ ರವೀಂದ್ರ ಯಲಿಗಾರ, ಕರ್ನಾಟಕ ಪ್ರದೇಶ ಕುರುಬರ ಕಾರ್ಯಧ್ಯಕ್ಷ ಬಸವರಾಜ ಬಸಳಿಗುಂದಿ, ಜಿಪಂ ಮಾಜಿ ಸದಸ್ಯ ಫಕೀರ್ಪ ಹದ್ದನ್ನವರ, ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಪುಂಡಲೀಕ ಮೇಟಿ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಮುನವಳ್ಳಿ ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ. ರಾಮಚಂದ್ರ ಪಟಾತ, ಎಚ್.ಕೆ.ಪಟಾತ, ದಾವಲಸಾಬ ಶಿಂದೋಗಿ, ಯಲ್ಲಪ್ಪ ನರಿ, ಲಕ್ಷ್ಮಣ ಮುರಗೋಡ, ಜಡೆಪ್ಪ ಮುರಗೋಡ, ಮಂಜುಳಾ ಮಾದರ, ಬಸವ್ವ ಹಡಪದ, ಪಡೆಪ್ಪ ನರಿ, ಪಿಡಿಒ ರಾಜೇಸಾಬ ಚಿಪ್ಪಲಕಟ್ಟಿ, ಮಂಜು ಮುರಗೋಡ, ಸಂಗಪ್ಪ ಮುರಗೋಡ ಸೇರಿದಂತೆ ಇತರರು ಇದ್ದರು.