ಮನೋಧರ್ಮಗಳು ಒಂದೇ ನಾಣ್ಯದ ಎರಡು ಮುಖಗಳು: ನಾರಾಯಣ
ಲೋಕದರ್ಶನ ವರದಿ
ಬಳ್ಳಾರಿ15: ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಧರ್ಮಗಳು ಒಂದೇ ನಾಣ್ಯದ ಎರಡು ಮುಖಗಳು. ಸಾರ್ವಜನಿಕವಾಗಿ ವೇದಿಕೆಯ ಮೇಲೆ ವಿಚಾರವಂತರೆಂದು ಘೋಷಿಸಿಕೊಳ್ಳುವ ವಚನಶೂರ ಠಕ್ಕರು ಮನೆಯೊಳಗೆ ತಾತ ಮುತ್ತಾತಂದಿರು ಹಾಕಿರುವ ಮೂಢನಂಬಿಕೆಯ ಆಲದ ಮರಕ್ಕೆ ನೇತು ಹಾಕಿಕೊಳ್ಳುತ್ತಾರೆಂದು ಹೇಳುವ ರಾಷ್ಟ್ರಕವಿ ಕುವೆಂಪುರವರ ಮಾತು ವೈಚಾರಿಕತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಿರುಗುಪ್ಪದ ಶಿಕ್ಷಕ ಹಾಗೂ ಲೇಖಕರಾದ ದಿವಾಕರ ನಾರಾಯಣ ತಿಳಿಸಿದರು.
ಗುರುವಾರದಂದು ಬೆಳಿಗ್ಗೆ ಸ್ಥಳೀಯ ಬಾಲಕಿಯರ ಸಕರ್ಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ದಿ|| ಕುಪ್ಪಗಲ್ ನಾಗಪ್ಪನವರ ಸ್ಮರಣಾರ್ಥ ದತ್ತಿ ಹಾಗೂ ಸಂಗನಕಲ್ಲು ಶಾಂತಮ್ಮ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪುರವರ ಸಾಹಿತ್ಯದಲ್ಲಿ ವೈಚಾರಿಕತೆ ಎಂಬ ವಿಷಯ ಕುರಿತು ಮಾತನಾಡುತ್ತಿದ್ದರು.
ಕುವೆಂಪು ಬದುಕಿನುದ್ದಕ್ಕೂ ವೈಚಾರಿಕತೆಯನ್ನು ಪ್ರತಿಪಾದಿಸಿದರು. ಯುವ ತಲೆಮಾರು ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಂತಿಕೆಯ ಬುದ್ಧಿಯನ್ನು ಬೆಳೆಸಿಕೊಂಡು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆಕೊಟ್ಟರು. ಅವರ ಸಾಹಿತ್ಯದ ಎಲ್ಲ ಕೃತಿಗಳಲ್ಲೂ ಕನ್ನಡ ಪ್ರಜ್ಞೆ ಹಾಸುಹೊಕ್ಕಾಗಿದೆ. ಅವರು ಪ್ರೌಢ ವಿದ್ಯಾಥರ್ಿಯಾಗಿದ್ದಾಗಲೇ ರಾಮಕೃಷ್ಣ ಪರಮಹಂಸರು, ವಿವೇಕಾನಂದ, ಬಟ್ರಾಂಡ್ ರಸೆಲ್, ಹಕ್ಸಲೆ, ಮುಂತಾದ ಮಹಾನ್ ದಾರ್ಶನಿಕರ ಪ್ರಭಾವಕ್ಕೆ ಒಳಗಾಗಿ ಶ್ರದ್ಧೆಯೇ ನಾಕ, ಅಶ್ರದ್ಧೆಯೇ ನರಕ ಎಂದು ಹೇಳಿ ಲೋಕ ಹಿತವನ್ನು ಬಯಸಬೇಕಾದುದು ಮನುಷ್ಯ ಧರ್ಮ ಎಂದಿರುವರು.
ಮತವನ್ನು ತೊರೆದು ಆಧ್ಯಾತ್ಮಪಥವನ್ನು ವೈಚಾರಿಕ ನಿಲುವುಗಳೊಂದಿಗೆ ಸ್ವೀಕರಿಸಿದ ಪ್ರತಿಯೊಬ್ಬ ವ್ಯಕ್ತಿಯು ವಿಶ್ವಮಾನವ ಎಂದ ಅವರು ಮನುಜ ಮತ-ವಿಶ್ವಪಥ, ಸವರ್ೋದಯ, ಸಮನ್ವಯ, ಪೂರ್ಣದೃಷ್ಟಿ ಪಂಚಮಂತ್ರಗಳೊಂದಿಗೆ ಈ ನಾಡಿಗೆ ತಮ್ಮ ಉತ್ಕೃಷ್ಟ ಸಾಹಿತ್ಯದ ಮೂಲಕ ವಿಚಾರವಾದದ ದೀಕ್ಷೆಕೊಟ್ಟವರು ಕುವೆಂಪು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕುವೆಂಪುರವರ ಅಖಂಡ ಕನರ್ಾಟಕ ಎನ್ನುವ ಕವಿತೆಯನ್ನು ವಾಚಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ, ಕೊಟ್ಟೂರು ಸ್ವಾಮಿ ಶಿಕ್ಷಕರ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ.ಎಂ.ರಾಜಶೇಖರ ಅವರು ಕುವೆಂಪು ಸಾಹಿತ್ಯದ ಮೇರುಪರ್ವತ ಶಿಖರ. ಸಾಮಾನ್ಯರಾಗಿ ಒಡನಾಡಿ ಅಸಾಮಾನ್ಯ ಕೃತಿಗಳನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ನಮ್ಮ ನಡುವೆ ಆಗಿ ಹೋದ ಮಹಾನ್ ಚೇತನ. ಮನುಷ್ಯ ಅನಿಕೇತನವಾಗಬೇಕು ಎಂಬುದು ಅವರ ಹಂಬಲವಾಗಿತ್ತು. ಶ್ರೀರಾಮಾಯಣದರ್ಶನಂ ಕೃತಿಯ ಮೂಲಕ ಅವರು ವಿಶ್ವಮಾನ್ಯರಾಗಿದ್ದಾರೆ ಎಂದರು.
ಮುಖ್ಯ ಅತಿಥಿಗಳಾದ ನಿವೃತ್ತ ಆರಕ್ಷಕ ಅಧಿಕಾರಿ ಪಿ.ವೀರೇಶಪ್ಪ ಮಾತನಾಡಿ, ಸಾಹಿತ್ಯದ ಓದಿನ ಮೂಲಕ ವಿದ್ಯಾಥರ್ಿಗಳು ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಪರಿಶ್ರಮ ಪಡಬೇಕು. ಕನ್ನಡ ಸಾಹಿತ್ಯವು ಅತ್ಯಂತ ಸಮೃದ್ಧವಾಗಿದ್ದು, ಕೃತಿಗಳನ್ನು ಓದುವುದರೊಂದಿಗೆ ಜ್ಞಾನ ವೃದ್ಧಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ದತ್ತಿದಾನಿಗಳಾದ ಕುಪ್ಪಗಲ್ ಅಯ್ಯಪ್ಪ, ಸಂಗನಕಲ್ಲು ಪ್ರಕಾಶ್, ರಮೇಶ್ಗೌಡ ಪಾಟೀಲ್, ಕಾಲೇಜು ಅಭಿವೃದ್ಧಿ ಸಮಿತಿಯ ಶ್ರೀದೇವಿ, ಶೈಲ, ರಮೀಜಾ, ಸಿದ್ಮಲ್ ಮಂಜುನಾಥ, ಗೌರವ ಕಾರ್ಯದಶರ್ಿ ಕೋಳೂರು ಚಂದ್ರಶೇಖರಗೌಡ, ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ, ಶಿವಾನಂದ, ಹೆಚ್.ಎಂ.ಅಮರೇಶ್ ಹಾಜರಿದ್ದರು.
ಆರಂಭದಲ್ಲಿ ವಿದ್ಯಾಥರ್ಿನಿ ಭಾಗ್ಯ ಪ್ರಾಥರ್ಿಸಿದರು. ಕನ್ನಡ ಉಪನ್ಯಾಸಕ ಚಾಂದ್ಬಾಷಾ ನಿರೂಪಿಸಿದರು. ಉಪನ್ಯಾಸಕ ಯು.ಶ್ರೀನಿವಾಸಮೂತರ್ಿ ವಂದಿಸಿದರು.