ಬ್ಯಾಡ್ಗಿ

ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಬ್ಯಾಡಗಿ: ಶಿವಶಕ್ತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸೆ.2 ರಂದು ಕಬಡ್ಡಿ ಕ್ರೀಡಾಪಟು ದಿವಂಗತ ಸುಭಾಸ್ ಗಂಗಮ್ಮನವರ ಸ್ಮರಣಾರ್ಥ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳು ಪಟ್ಟಣದ ತಾಲ್ಲೂಕಾ ಕ್ರೀಡಾಂಗಣದಲ್ಲಿ ನಡೆಯಲಿವೆ.

  ವಿಜೇತ ತಂಡಕ್ಕೆ ರೂ.21 ಸಾವಿರ ಹಾಗೂ ಟ್ರೋಫಿ, ದ್ವಿತೀಯ ರೂ.15 ಸಾವಿರ ಹಾಗೂ ಟ್ರೋಫಿ, ತೃತೀಯ ರೂ.7 ಸಾವಿರ ಹಾಗೂ ಟ್ರೋಫಿ, ಚತುರ್ಥ ರೂ.5 ಸಾವಿರ ಹಾಗೂ ಟ್ರೋಫಿಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು. ಪಂದ್ಯಗಳು ಕಡ್ಡಾಯವಾಗಿ ಮದ್ಯಾಹ್ನ 1 ಗಂಟೆಗೆ ಪ್ರಾರಂಭವಾಗಲಿವೆ. ಆಸಕ್ತ ತಂಡಗಳು ತಮ್ಮ ತಂಡದ ಹೆಸರನ್ನು ಸೆ.1 ರೊಳಗಾಗಿ ಅಧ್ಯಕ್ಷರು ಶಿವಶಕ್ತಿ ಸ್ಪೋಟ್ರ್ಸ ಕ್ಲಬ್ ಇವರಲ್ಲಿ ನೋಂದಾಯಿಸಿಕೊಳ್ಳಬೇಕು.ಹೆಚ್ಚಿನ ವಿವರಗಳಿಗಾಗಿ ಮೋ.9686272966 ಸಂಪರ್ಕಿಸಬಹು ದಾಗಿದೆ 

ಸುದ್ದಿ ಓದಿ