ವೈದ್ಯಕೀಯ ವೃತ್ತಿ ಸಮಾಜಮುಖಿಯಾಗಿರಬೇಕು: ಡಾ ರಮೇಶ್ ಎಂ ಕೆ
ಮಾಂಜರಿ 21: ವೈದ್ಯಕೀಯ ವೃತ್ತಿಯು ಒಂದು ಪವಿತ್ರವಾದ ಸೇವೆಯಾಗಿದೆ. ಅದನ್ನ ಸಮಾಜಮುಖಿಯಾಗಿ ಅರ್ಪಣೆ ಮಾಡಿದಾಗ ಅದರ ಪವಿತ್ರತೆ ಹೆಚ್ಚಾಗುತ್ತದೆ ಎಂದು ಬೆಂಗಳೂರಿನ ರಾಜೀವ್ ಗಾಂಧಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಉಪಕುಲಪತಿಗಳಾದ ಡಾ. ರಮೇಶ್ ಎಂ ಕೆ ಅವರು ಹೇಳಿದರು.
ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಡಾ ಎನ್ ಎ ಮಗದುಮ ಆಯುರ್ವಾದಿಕ್ ಮಹಾವಿದ್ಯಾಲಯದ ಮೊದಲನೆಯ ಬ್ಯಾಚ್ ಬಿಎ ಎಂಎಸ್ ವಿದ್ಯಾರ್ಥಿಗಳ ಪದವಿಧಾನ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಮಾರಂಭದ ಅಧ್ಯಕ್ಷ್ಯಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ನೇಮಿನಾಥ ಮಗದುಮ ಮುಖ್ಯ ಅತಿಥಿಯಾಗಿ ಅತಿಥಿಯಾಗಿ ವಿಧಾನಪರಿಷತ್ತಿನ ಸದಸ್ಯ ಪ್ರಕಾಶ್ ಹುಕ್ಕೇರಿ ಮಾಜಿ ಶಾಸಕ ಶ್ಯಾಮ್ ಘಾಟಿಗೆ ಎಲ್ ಎನ್ ಮಗದುಮ ಪ್ರಾಚಾರ್ಯ ಡಾ ರಮೇಶ್ ಹಾಜರಿದ್ದರು ತಂದೆ ತಾಯಿಗಳ ಕನಸನ್ನ ನೀವು ನನಸಾಗಿದ್ದೀರಿ. ಈ ಭರವಸೆ ಹೆಜ್ಜೆಗಳನ್ನ ಮುಂದಿನ ವೈದ್ಯಕೀಯ ಶಿಕ್ಷಣದಲ್ಲಿಯೂ ಕೂಡ ಮುಂದುವರಿಸಬೇಕು. ವೈದ್ಯರಾದರೆ ಮಾತ್ರ ಸಾಲುವುದಿಲ್ಲ ಮಾನವೀಯ ಮೌಲ್ಯಗಳನ್ನು ಕೂಡ ಹೊಂದುವುದು ಅಷ್ಟೇ ಮಹತ್ವಪೂರ್ಣವಾದದ್ದು. ಜನಸಾಮಾನ್ಯರ ಸೇವೆ ಮಾಡುವುದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಆದರ್ಶ ವೈದ್ಯರ ಬದುಕನ್ನು ಅರಿಯಬೇಕು. ಗುರು ಹಿರಿಯರ ಮಾರ್ಗದರ್ಶನ ಪಡೆಯಬೇಕು.
ಒಬ್ಬ ಹೃದಯವಂತ ವೈದ್ಯ ಸಮಾಜಕ್ಕೆ ಸಂಜೀವಿನಿ ಆಗಿರುತ್ತಾನೆ ಎಂದು ಹೇಳಿದರು. ವಿಧಾನ ಪರಿಷತ್ತಿನ ಸದಸ್ಯ ಹಾಗೂ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅವರು ಮಾತನಾಡಿ, ವೈದ್ಯಕೀಯ ಪದವಿ ದೊರೆತ ಮಾತ್ರಕ್ಕೆ ನಾವು ವೈದ್ಯರಾಗಲಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ದುಷ್ಟ ಹವ್ಯಾಸಗಳಿಗೆ ಒಳಗಾಗದೆ ನಿಷ್ಠೆ ಬದ್ಧತೆಯಿಂದ ಕಲಿಕೆಯಲ್ಲಿ ಹೊಸತನವನ್ನು ಹೊಂದಬೇಕು. ಸಮಯ ಹಾಗೂ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು.
ವೈದ್ಯರಾದ ಮಾತ್ರಕ್ಕೆ ದೇವರು ಆಧ್ಯಾತ್ಮವನ್ನ ದೂರಸರಿಸುವುದಲ್ಲ ಅದರ ಹತ್ತಿರವಾಗುವುದು. ಅಂತಹ ಒಂದು ಶಕ್ತಿ ನಮ್ಮನ್ನು ಸದಾ ಆವರಿಸಿಕೊಂಡಿರುತ್ತದೆ. ಸಮಾಜದ ಆದರ್ಶ ವೈದ್ಯರಾಗಿ ಈ ಮಣ್ಣಿನ ಈ ದೇಶದ ಋಣವನ್ನ ತೀರಿಸಬೇಕು. ವೈದ್ಯದೇವೋಭವ ಎಂಬ ಮಾತಿನಂತೆ ಬದುಕನ್ನು ಅನ್ವರ್ಥಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ನೇಮಿನಾಥ ಮಗದುಮ ಮಾತನಾಡಿ ಅತ್ಯಂತ ಪರಿಸರಮದಿಂದ ವಿದ್ಯಾರ್ಥಿಗಳೆಲ್ಲ ವೈದ್ಯಕೀಯ ವೃತ್ತಿಗೆ ಪ್ರವೇಶ ಪಡೆದು ನಾಡಿನ ಹೆಮ್ಮೆಯನ್ನು ಹೆಚ್ಚಿಸಿದ್ದೀರಿ. ಭವಿಷ್ಯತ್ತಿನಲ್ಲಿಯು ಕೂಡ ಈ ಅಕ್ಷರ ಜ್ಞಾನದ ಯಾತ್ರೆ ಮುಂದುವರಿಯಲಿ. ಶಿಸ್ತು ಸೌಜನ್ಯಗಳು ನಿಮ್ಮ ಬದುಕಿನ ಮೌಲ್ಯಗಳಾಗಲಿ. ಗುರು ಹಿರಿಯರ ಆಶೀರ್ವಾ ದದೊಂದಿಗೆ ಸಮಾಜಕ್ಕಾಗಿ ಅಹನರ್ಿಸಿಯಾಗಿ ದುಡಿಯಿರಿ. ವೈದ್ಯಕೀಯ ವೃತ್ತಿಯನ್ನು ಹಣ ಗಳಿಸುವ ವೃತ್ತಿಯನ್ನಾಗಿ ಮಾಡಿಕೊಳ್ಳದೆ ಸಮಾಜ ಸೇವೆ ಮಾಡುವ ಪವಿತ್ರ ಕರ್ತವ್ಯವೆಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅತಿಥಿಯಾಗು ಗಣ್ಯರಿಂದ ಮೊದಲನೆಯ ಬ್ಯಾಚಿನ ಬಿಎಎಂಎಸ್ ವಿದ್ಯಾರ್ಥಿಗಳಿಗೆ ಪದವಿ ವಿತರಿಸಲಾಯಿತು ಸಂಸ್ಥೆಯ ಉಪಾಧ್ಯಕ್ಷ ಡಾ. ಹರೀಶ್ ವರ್ಧನ್ ಮಗದುಮ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು ಈ ಸಮಾರಂಭಕ್ಕೆ ಸಂಸ್ಥೆಯ ಪದಾಧಿಕಾರಿಗಳು ಪಾಲಕರು ವಿದ್ಯಾರ್ಥಿ ಗಳು ಮತ್ತು ಇನ್ನುಳಿದ ಗಣ್ಯ ನಾಗರಿಕರು ಹಾಜರಿದ್ದರು.