ಶ್ರೀಗಳ ಪುಣ್ಯಾರಾಧನೆ: ಮಾ. 11ರಂದು ಸಾಮೂಹಿಕ ವಿವಾಹ
ಶಿಗ್ಗಾವಿ : ಪಟ್ಟಣದ ವಿರಕ್ತಮಠದಲ್ಲಿ ಮಾ. 11 ರ ಗುರುವಾರದದು ಲಿಂ. ಸಂಗನಬಸವ ಮಹಾಸ್ವಾಮಿಗಳವರ ಪುಣ್ಯಾರಾಧನೆ ಕಾರ್ಯಕ್ರಮದ ನಿಮಿತ್ಯ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವು ಮಠದಲ್ಲಿ ಲಿಂ.ಸಂಗನಬಸವ ಮಹಾಸ್ವಾಮಿಗಳವರ ಪುಣ್ಯಾರಾಧನೆ ನಿಮಿತ್ಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರ ನಿಮಿತ್ಯವಾಗಿ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ವಿವಾಹ ನೋಂದಣಿ ಮಾಡಿಕೊಳ್ಳುವವರು ಫೆ. 25ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಿ ಸೂಕ್ತ ದಾಖಲೆಗಳೊಂದಿಗೆ ಶಿಗ್ಗಾವಿ ವಿರಕ್ತಮಠದ ಕಮಿಟಿಗೆ ಭೇಟಿ ಅಥವಾ 9591404050, 9986740060, ನಂಬರ್ಗಳಿಗೆ ಸಂಪರ್ಕಿಸಬೇಕು ಹಾಗೂ ಬಾಲ್ಯವಿವಾಹ ಹಾಗೂ ಮರುವಿವಾಹಕ್ಕೆ ಅವಕಾಶವಿಲ್ಲ, ಕೊವಿಡ್ನ ನಿಯಮಗಳನ್ನು ಪಾಲಿಸುವದರ ಜೊತೆಗೆ ಎಲ್ಲ ಭಕ್ತರು ಸಹಕಾರ ನೀಡಬೇಕು ಎಂದು ತಿಳಿಸಿದರು.