ಹೂವಿನ ಹಡಗಲಿ

ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ

ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ


ಹೂವಿನಹಡಗಲಿ 21:  ಜನಿಸಿದ ಮಗುವಿನಿಂದ ಐದು ವರ್ಷಗಳವಯೋಮಾನದ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್‌ ಪೊಲಿಯೋ ಹನಿ ಹಾಕಿಸಿ ಜೀವನಪರ್ಯಂತ ಮಾರಕ ರೋಗಗಳಿಂದ ರಕ್ಷಿಸಬೇಕೆಂದು ಗ್ರಾ.ಪಂ.ಸದಸ್ಯ ರುದ್ರಗೌಡ ಹೇಳಿದರು. ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಭಾನುವಾರ ನಡೆದ ಪೊಲಿಯೋ ಹನಿ  ಅಭಿಯಾನದಲ್ಲಿ  ಮಾತನಾಡಿ ತಾಯಿ ತನ್ನ ಮಗುವಿಗೆ ಪಲ್ಸ್‌ ಪೊಲಿಯೋ ಹನಿ ಹಾಕಿಸುವಲ್ಲಿ ವಿಫಲವಾದರೆ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೀವಿತಾವಧಿಯುದ್ದಕ್ಕೂ ಪೊಲಿಯೋ ರೋಗದ ವಿರುದ್ಧ ರಕ್ಷಣೆ ಪಡೆಯಲು ಪಲ್ಸ್‌ ಪೊಲಿಯೋ ಹನಿ ಹಾಕಿಸುವುದು ಕಡ್ಡಾಯ ಎಂದರು.ಇದೇ ವೇಳೆ ಹೊಳಗುಂದಿ ಸೊಸೈಟಿ ಅದ್ಯಕ್ಷ ಕಾತ್ರಿಕಿ ಕರಿಬಸವರಾಜ, ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ,ಆಶಾ ಕಾರ್ಯಕರ್ತೆ ಇದ್ದರು. 


ಸುದ್ದಿ ಓದಿ