ಯುವಕ ಮಂಡಳಿ ವತಿಯಿಂದ ಕೊನೆಯ ವಾರದಂದು ಜೋಳದ ಅಂಬಲಿ, ಊಟದ ವ್ಯವಸ್ಥೆ
ಲೋಕದರ್ಶನ ವರದಿ
ಯರಗಟ್ಟಿ 24: ಪಟ್ಟಣದಲ್ಲಿ5 ವರ್ಷಕ್ಕೆ ಒಮ್ಮೆ ನಡೆಯುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ಯರಗಟ್ಟಿ ಪಟ್ಟಣದಲ್ಲಿ ಶುಕ್ರವಾರ ಐದನೇ ವಾರ ಬಿಟ್ಟಿದ್ದರು.
ಹಿರಿಯರ ಆದೇಶಕ್ಕೆ ತಲೆ ಬಾಗಿದ ಯರಗಟ್ಟಿ ಪಟ್ಟಣದ ಸಾರ್ವಜನಿಕರು ವ್ಯಾಪಾರಸ್ಥರು ತಮ್ಮ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು.
ಸುತ್ತ ಮುತ್ತ ಹಳ್ಳಿಯ ಜನರಿಗೆ ತೊಂದರೆಯಾಗದಂತೆ ಪಟ್ಟಣದ ವಿವಿಧ ಯುವಕ ಮಂಡಳಿ ವತಿಯಿಂದ ಊಟ, ಉಪಹಾರ, ಜೋಳದ ಅಂಬಲಿ ವ್ಯವಸ್ಥೆ ಮಾಡಿದ್ದರು.
ಇದನ್ನು ಗಮನಿಸಿದ ಹಳ್ಳಿಯ ಜನ ಯರಗಟ್ಟಿ ಪಟ್ಟಣದ ಮುಖಂಡರ ಈ ಕಾರ್ಯಕ್ಕೆ ಹರ್ಷ ವ್ಯಕ್ತ ಪಡಿಸಿದರು .