ಯರಗಟ್ಟಿ

ಮದ್ಲೂರ ಗ್ರಾಮ ಪಂಚಾಯತ ಬಿಜೆಪಿ ತೆಕ್ಕೆಗೆ

ಮದ್ಲೂರ ಗ್ರಾಮ ಪಂಚಾಯತ ಬಿಜೆಪಿ ತೆಕ್ಕೆಗೆ

ಲೋಕದರ್ಶನ ವರದಿ

ಯರಗಟ್ಟಿ 03: ಸಮೀಪದ ಮದ್ಲೂರ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಜರುಗಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವು ಅವಿರೋಧವಾಗಿ ಆಯ್ಕೆಯಾಯಿತು.

ಗ್ರಾಪಂ ಸಂಖ್ಯಾಬಲ ಒಟ್ಟು 18 ಸ್ಥಾನ ಹೊಂದಿದೆ. ಕಾಂಗ್ರೆಸ್ ಬೆಂಬಲಿತ 7 ಜನ ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ 11 ಜನ ಸದಸ್ಯರು ಗ್ರಾಮ ಪಂಚಾಯತಿಗೆ ಆಗಮಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಲಕ್ಷ್ಮಣ ಚನ್ನಪ್ಪ ಹೊಟ್ಟಿನ್ನವರ, ಸೋಮಪ್ಪ ಕಲ್ಲೋಳಿ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪುಂಡಲೀಕ ಫಕೀರಪ್ಪ. ಉಪ್ಪಾರ ನಾಮಪತ್ರವನ್ನು ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮಹಾದೇವಿ ಶಂಕರ ಬಾರ್ಕಿ ಒಬ್ಬರೆ ನಾಮಪತ್ರವನ್ನು ಸಲ್ಲಿಸಿದರು. ನಂತರ ಸೋಮಪ್ಪ ಕಲ್ಲೋಳಿ ತಮ್ಮ ನಾಮಪತ್ರವನ್ನು ಹಿಂಪಡೆದರು. ಅಧ್ಯಕ್ಷ ಸ್ಥಾನಕ್ಕೆ ಕಣದಲ್ಲಿ ಇಬ್ಬರು ಉಳಿದರು. ಚುನಾವಣೆ ಅಧಿಕಾರಿ ಶಿವಪ್ರಸಾದ ಪಾಟೀಲ ಗುಪ್ತ ಮತದಾನಕ್ಕೆ ಅವಕಾಶವನ್ನು ಸದಸ್ಯರಿಗೆ ನೀಡಿದರು.

 ಪುಂಡಲೀಕ ಉಪ್ಪಾರ ಪರ 11 ಮತಗಳು ಲಭಿಸಿದರೆ ಪ್ರತಿಸ್ಪರ್ಧೆ ಲಕ್ಷ್ಮಣ ಹೊಟ್ಟಿನವರಿಗೆ 7 ಮತಗಳು ಬಿದ್ದವು, 4 ಮತಗಳಿಂದ ಪುಂಡಲೀಕ ಉಪ್ಪಾರ ಆಯ್ಕೆಯಾದರು, ಚುನಾವಣೆ ಅಧಿಕಾರಿಯಾಗಿ ಆಗಮಿಸಿದ ಸವದತ್ತಿ ಸಹಾಯಕ ಕೃಷಿ ನಿರ್ದೇಶಕರು ಶಿವಪ್ರಸಾದ ಪಾಟೀಲ, ಪಿಡಿಒ ರಾಘವೇಂದ್ರಕುಮಾರ ಎಸ್.ಪಿ, ಎಸ್ ಎನ್. ಕಡಹಳ್ಳಿ, ಸದಸ್ಯರಾದ ಕರೆಪ್ಪ ಪೂಜೇರ, ಪ್ರಕಾಶ ಕಲ್ಲೇದ, ಈರಯ್ಯಾ ಹಿರೇಮಠ, ಅಶೋಕ ಯರಝರ್ವೆ , ಸುರೇಶ ಸಾವಳಗಿ, ಫಕೀರಪ್ಪ ಮ. ಹೂಲಿ, ನಿಂಗಪ್ಪ ಪಚ್ಚಿನ್ನವರ, ಅನಿತಾ ಬ. ಸುಣಗಾರ, ಸಂಗವ್ವ ಕುರಿ ಉಪಸ್ಥಿತರಿದ್ದರು, ಬೆನಕಟ್ಟಿ ಹಾಗೂ ಮದ್ಲೂರ ಗ್ರಾಮದ ಬಿಜೆಪಿ ಕಾರ್ಯಕರ್ತರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸುದ್ದಿ ಓದಿ