ಬ್ಯಾಡ್ಗಿ

ವಿಶ್ರಾಂತಿಗೆ ತೆರಳದೇ ಎಂದಿನಂತೆ ಕಾರ್ಯನಿರಂತರಾದ ಶಾಸಕ ಬಳ್ಳಾರಿ

ವಿಶ್ರಾಂತಿಗೆ ತೆರಳದೇ ಎಂದಿನಂತೆ ಕಾರ್ಯನಿರಂತರಾದ ಶಾಸಕ ಬಳ್ಳಾರಿ

ಬ್ಯಾಡಗಿ: ನಿನ್ನೆಯಷ್ಟೇ ಮುಕ್ತಾಯಗೊಂಡ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ ಅಭ್ಯರ್ಥಿ  ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕಾರ್ಯಕರ್ತರ ಜೊತೆ ಚರ್ಚೆ  ಸೇರಿದಂತೆ ಮದುವೆ ಸಮಾರಂಭ ಮತ್ತು ಮೃತರ ಅಂತ್ಯಕ್ರಿಯೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಎಂದಿನಂತೆ ತಮ್ಮ ಕಾರ್ಯವೈಖರಿಯನ್ನು ಮುಂದು ವರೆಸಿದ್ದಾರೆ.

 ಕಳೆದೊಂದು ತಿಂಗಳಿಂದ ನಿರಂತರ ಬಿಸಿಲು ಮಳೆಯನ್ನದೇ ಓಡಾಟ ತಿರುಗಾಟ ಸಮಾವೇಶ ರೋಡ್ಶೋ ಕ್ಷೇತ್ರದಾ ದ್ಯಂತ ಸುತ್ತಾಡಿದ್ದು ಬಹುತೇಕ ಅಭ್ಯರ್ಥಿಗಳು ಬೇರೆಡೆಗೆ ವಿಶ್ರಾಂತಿಗೆ ತೆರಳುವುದು ಸಾಮಾನ್ಯ, ಆದರೆ ಸ್ಥಳೀಯ ಬಿಜೆಪಿ ಅಭ್ಯರ್ಥಿ  ವಿರೂಪಾಕ್ಷಪ್ಪ ಬಳ್ಳಾರಿ ಮಾತ್ರ ಎಂದಿನಂತೆ ತಮ್ಮ ಕಾರ್ಯವೈಖರಿಗಳನ್ನು ಮುಂದುವರೆಸಿದ್ದಾರೆ.

ಕಾರ್ಯಕರ್ತರ ಜೊತೆ ಚರ್ಚೆ :ಎಂದಿನಂತೆ ಬೆಳಿಗ್ಗೆ 8 ಗಂಟೆಯಿಂದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಗಳನ್ನು ನಡೆಸಿದ ವಿರೂಪಾಕ್ಷಪ್ಪ ಬಳ್ಳಾರಿ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಸಿದರಲ್ಲದೇ ಅವರ ಜೊತೆ ಗೆಲುವು ಸೋಲಿನ ಲೆಕ್ಕಾಚಾರದಲ್ಲಿ ತೊಡಗಿದ್ದರು.

ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿ: ಕಾರ್ಯಕರ್ತರ ಜೊತೆ ಸಭೆಯ ಬಳಿಕ ಬ್ಯಾಡಗಿ ಮತಕ್ಷೇತ್ರದ ಕಾಕೋಳ ಗ್ರಾಮದ ಗೌರಮ್ಮ ಬಳಿಗಾರ ಹಾಗೂ ಪಟ್ಟಣದ ಆನಂದ ಕೊಪ್ಪದ ಇವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರಲ್ಲದೇ, ಪಟ್ಟಣದ ಸಿದ್ಧೇಶ್ವರ ಕಲ್ಯಾಣಮಂಟದಲ್ಲಿ ಜರುಗಿದ ಪಂಪನಗೌಡ ಯಲ್ಲಣ್ಣನವರ ಇವರ ಪುತ್ರಿಯ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

*ಮೂರನೇ ಚುನಾವಣೆ ಯಾವುದೇ ಒತ್ತಡವಿಲ್ಲ: ಇದು ನನಗೆ ಮೂರನೇ ಚುನಾವಣೆ, ಒಮ್ಮೆ ಸೋತು ಒಮ್ಮೆ ಗೆದ್ದಿದ್ದು ಇದು ಮೂರನೇ ಚುನಾವಣೆಯಾಗಿದೆ, ಅಸಂಖ್ಯಾತ ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ಯಾವುದೇ ಒತ್ತಡವಿಲ್ಲದೇ ಚುನಾವಣೆ ಎದುರಿಸಿದ್ದೇನೆ, ಈ ಬಾರಿಯೂ ಗೆಲ್ಲುವ ಮೂಲಕ ಬ್ಯಾಡಗಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದು ವರೆಸಿದ್ದೇನೆ..

- ಬಿಜೆಪಿ ಅಭ್ಯರ್ಥಿ  ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ..



ಸುದ್ದಿ ಓದಿ