ಚೌಡಯ್ಯದಾನ ಪುರದಲ್ಲಿರುವ ಜಾಕ್ವೆಲ್ಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ
ಲೋಕದರ್ಶನ ವರದಿ
ಬ್ಯಾಡಗಿ 22: ನೀರಾವರಿ ಯೋಜನೆಗಳಿಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರ ಹಿತವನ್ನು ಕಾಪಾಡಲು ಈಗಲೂ ಬದ್ಧವಾಗಿದೆ ಬರುವ ದಿನಗಳಲ್ಲಿ ಇನ್ನೆರಡು ಏತ ನೀರಾವರಿ ಯೋಜನೆಗಳಿಗೆ ನೀಲಿ ನಕ್ಷೆ ಸಿದ್ಧಪ ಡಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ ಮತಕ್ಷೇತ್ರ ವ್ಯಾಪ್ತಿಯ ಬುಡಪನಹಳ್ಳಿ ಏತ ನೀರಾವರಿ ಯೋಜನೆಯಡಿ 17 ಕೆರೆಗಳಿಗೆ ಹಾಗೂ ಆಣೂರು ಏತ ನೀರಾವರಿ ಯೋಜನೆಯಡಿ 32 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 456 ಕೋಟಿ ರೂ.ವೆಚ್ಚದ 2 ಯೋಜನೆಗಳಿಗೆ ರಾಣೆಬೆನ್ನೂರ ತಾಲ್ಲೂಕಿನ ಕೋಟೆಹಾಳ ಹಾಗೂ ಚೌಡಯ್ಯದಾನಪುರದಲ್ಲಿರುವ ಜಾಕ್ವೆಲ್ ಚಾಲನೆ ನೀಡಿ ಅವರು ಮಾತನಾಡಿದರು.
ಬಹುಕೋಟಿ ವೆಚ್ಚದ ಡ್ಯಾಮ್ಗಳನ್ನು ನಿರ್ಮಿಸುವ ಬದಲಾಗಿ ನೀರಿನ ಲಭ್ಯತೆ ಹಾಗೂ ಬಳಕೆಯನ್ನು ಆಧರಿಸಿ ಒಣ ಬೇಸಾಯ ಇರುವ ಕಡೆಗಳಲ್ಲಿ ನದಿಮೂಲದಿಂದ ಪೈಪೈಲೈನ್ಗಳ ಮೂಲಕ ಕೃಷಿಭೂಮಿಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆಗಳು ಪ್ರಸ್ತುತ ದಿನಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿವೆ, ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಬಹಳಷ್ಟು ದಿನಗಳನ್ನು ತೆಗೆದುಕೊಳ್ಳುವಂತಹ ಪ್ರಮೇಯವಿರುವುದಿಲ್ಲ ಹೀಗಾಗಿ ಹರಿದು ಬಂದ ನೀರು ಸಹ ಎಲ್ಲಿಯೂ ಪೋಲಾಗದಂತೆ ನಿಗದಿಪಡಿಸಿದ ಸ್ಥಳಗಳನ್ನು ತಲುಪಲಿದೆ ಎಂದರು.
ಯೋಜನೆಯ ಲಾಭವನ್ನು ಪಡೆದುಕೊಳ್ಳಿ: ಬ್ಯಾಡಗಿ ಮತಕ್ಷೇತ್ರದ ರೈತರಿಗೆ ಸದರಿ ಎರಡೂ ಯೋಜನೆಗಳು ವರದಾನವಾ ಗಿದ್ದು, ಮಳೆಗಾಗಲದಲ್ಲಿ ನದಿನೀರಿನಿಂದ ಕೆರೆಗಳನ್ನು ಭತರ್ಿ ಮಾಡಿಕೊಳ್ಳುವುದರಿಂದ ಜನ, ಜಾನುವಾರು ಸೇರಿದಂತೆ ಭೂಮಿಯಲ್ಲಿ ಅಂತರ್ಜಲಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ, ಕೊಳವೆಭಾವಿಗಳನ್ನು ನೆಚ್ಚಿಕೊಂಡು ಕೃಷಿ ನಡೆಸುವಂತಹ ಜನರು ನೀರಾವರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಬ್ಯಾಡಗಿ ಮತಕ್ಷೇತ್ರದ ರೈತರು ಯೋಜನೆ ಯ ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಹೋರಾಟದ ಪ್ರತಿಫಲ: ಏರಡೂ ಯೋಜನೆಗಳ ಅನುಷ್ಠಾನಗೊಳಿಸಲು ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ನಡೆಸುತ್ತಿದ್ದ ಅವಧಿಯಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಎನ್ನದೇ ಪಕ್ಷಾತೀತವಾಗಿ ರೈತರು ಹಮ್ಮಿಕೊಂಡಿದ್ದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು, ನಾಡಿನ ಶರಣರು-ಮಠಾಧೀಶರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರಿಂದ ಮಹತ್ವಾಕಾಂಕ್ಷಿ ಯೋಜನೆಯೊಂದು ಸಾಕಾರಗೊಳ್ಳಲು ಸಾಧ್ಯವಾಯಿತು, ಹೀಗಾಗಿ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಕೈಜೋಡಿಸಿದ ಹಿಂದಿನ ಸರ್ಕಾರದ ಜನಪ್ರತಿನಿಧಿಗಳು ಸೇರಿದಂತೆ ಹೋರಾಟಕ್ಕೆ ಸಹಕರಿ ಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ತಾಲ್ಲೂಕಾ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಜಿಪಂ.ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಮುಖಂಡರಾದ ವೀರನಗೌಡ ಪೊಲೀಸ್ಪಾಟೀಲ, ಬಸವರಾಜ ಸವಣೂರು, ನಾಗರಾಜ ಆನ್ವೇರಿ, ಶಿವಪ್ಪ ಅಂಬಲಿ, ಸುರೇಶ ಪೂಜಾರ, ಮಹೇಶಗೌಡ ಪಾಟೀಲ, ಶಂಭನಗೌಡ ಪಾಟೀಲ ಹಾಗೂ ಇನ್ನಿತರರಿದ್ದರು