ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ
ಬ್ಯಾಡಗಿ:ಹಿಂದೆ ಆಡಳಿತ ನಡೆಸಿದ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವರ್ಗವನ್ನೇ ಗುರಿಯಾಗಿಸಿಕೊಂಡ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಹೊರತು ಇದ್ಯಾವುದೂ ಚುನಾವಣೆ ಗಿಮಿಕ್ ಅಲ್ಲ ಹೀಗಾಗಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಖುಷಿಯಿಂದ ಚಾಲನೆ ನೀಡುತ್ತಿರುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಥಳೀಯ ಘಟಕದ ವತಿಯಿಂದ ಏರ್ಪಡಿಸಿದ್ದ ರಾಜ್ಯ ಸಕರ್ಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣೆ ಗಿಮಿಕ್ ಅಲ್ಲ:ನಿರ್ಲಕ್ಷಿತ ಮತ್ತು ಶೋಷಿತ ಸಮುದಾಯಕ್ಕೆ ಸಹಾಯ ಹಸ್ತ ಚಾಚುವುದು ಕಾಂಗ್ರೆಸ್ ಸರ್ಕಾ ರದ ಉದ್ದೇಶವಾಗಿದೆ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವು ಜಾತಿ-ಮತ-ಬಡವ-ಶ್ರೀಮಂತ ಎಂಬ ಬೇಧ ವಿಲ್ಲದೇ ರಾಜ್ಯದ ಎಲ್ಲ ವರ್ಗದ ಮಹಿಳೆಯರಿಗೂ ಸಕರ್ಾರದ ಯೋಜನೆ ತಲುಪುತ್ತಿದೆ ಇದರಲ್ಲಿ ಚುನಾವಣೆ ಗಿಮಿಕ್ ಎಲ್ಲಿದೆ..? ಎಂದು ಪ್ರಶ್ನಿಸಿದರು.
ವಿಪಕ್ಷಗಳಿಗೇಕೆ ಚಿಂತೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೆರಿಗೆ ಕಟ್ಟುವುದು ಆದಾಯ ಗಳಿಸಿದ ಪ್ರತಿಯೊಬ್ಬರ ಜವಾಬ್ದಾರಿ, ಯಾರೊಬ್ಬರೂ ಇದೇ ಉದ್ದೇಶಕ್ಕೆಂದು ತೆರಿಗೆ ಕಟ್ಟುವುದಿಲ್ಲ, ಅದರೆ ಸರ್ಕಾರದ ಹಣವನ್ನು ಅದನ್ನು ಸದ್ಭಳಕೆ ಮಾಡು ವುದು ಆಡಳಿತಾರೂಢ ಸರ್ಕಾರದ ಜವಾಬ್ದಾರಿ, ಸಾರ್ವಜನಿಕ ಜೀವನದಲ್ಲಿರುವ ವಿಪಕ್ಷಗಳ ಸದಸ್ಯರು ಇದನ್ನು ರಾಜ ಕೀಯವಾಗಿ ವಿರೋಧಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.
ಯೋಜನೆ ದುರುಪಯೋಗ ಆಗದಿರಲಿ: ಸಕರ್ಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು ಯಾವುದೇ ಕಾರಣಕ್ಕೂ ಯೋಜನೆ ಪ್ರಯೋಜನದ ಹೊರತಾಗಿ ದುರಪಯೋಗ ಮಾಡಿ ಕೊಳ್ಳದಂತೆ ಮನವಿ ಮಾಡಿಕೊಂಡ ಅವರು ನಿಮ್ಮದೇ ಸರ್ಕಾರದ ಯೋಜನೆ ಸಾಕಾರಾಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಬಸ್ನ್ನೇರಿದ ಬಸವರಾಜ ಶಿವಣ್ಣನವರ ಮಹಿಳೆಯೊಬ್ಬರಿಗೆ ಉಚಿತ ಟಿಕೆಟ್ ನೀಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸಮಾರಂಭದಲ್ಲಿ ಸಾರಿಗೆ ಉಪವಿಭಾಗಾಧಿಕಾರಿ, ನಾರಾಯಣರಡ್ಡಿ ಕನಕರಡ್ಡಿ, ತಹಶೀಲ್ದಾರ ಎಸ್.ಎ.ಪ್ರಸಾದ, ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಶಿವನಗೌಡ ವೀರನಗೌಡ್ರ, ಬೀರಪ್ಪ ಬಣಕಾರ, ರಮೇಶ ಸುತ್ತಕೋಟಿ, ನಾಗರಾಜ ಆನ್ವೇರಿ, ಮಾರುತಿ ಅಚ್ಚಿಗೇರಿ, ಖಾದರ್ಸಾಬ್ ದೊಡ್ಮನಿ, ಡಿ.ಎಚ್.ಬುಡ್ಡನಗೌಡ್ರ, ಜಗದೀಶ್ ಪೂಜಾರ್, ಶಿವಪುತ್ರಪ್ಪ ಅಗಡಿ, ಶಂಭು ಪಾಟೀಲ್, ದುಗರ್ೇಶ ಗೋಣೆಮ್ಮನವರ, ನಜೀರ ಅಹ್ಮದ್ ಶೇಖ್, ಸುಮಿತ್ರ ನವಲೆ, ಪ್ರೇಮ ಅಂಗಡಿ, ಸಿಪಿಐ ಬಸವರಾಜ ಘಟಕ ವ್ಯವಸ್ಥಾಪಕ ಆರ್.ಸಿ.ಪಾಟೀಲ, ಪಿಎಸ್ಐ ಮಂಜುನಾಥ ಕುಪ್ಪೇಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮುಖಂಡರು ಕಾರ್ಯ ಕರ್ತರು ಮಹಿಳೆಯರು ಉಪಸ್ಥಿತರಿದ್ದರು.