ಶಾಸಕ ಬಿ.ನಾಗೇಂದ್ರಗೆ ತಪ್ಪಿದ ಸಚಿವಸ್ಥಾನ ಬೆಂಬಲಿಗರಿಂದ ತೀವ್ರ ಪ್ರತಿಭಟನೆ

ಶಾಸಕ ಬಿ.ನಾಗೇಂದ್ರಗೆ ತಪ್ಪಿದ ಸಚಿವಸ್ಥಾನ ಬೆಂಬಲಿಗರಿಂದ ತೀವ್ರ ಪ್ರತಿಭಟನೆ

ಬಳ್ಳಾರಿ 23: ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಸಚಿವಸ್ಥಾನ ಸಿಗದ ಹಿನ್ನಲೆ ನಾಗೇಂದ್ರ ಅಭಿಮಾನಿಗಳು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಅವರು ಶನಿವಾರ ಮದ್ಯಾಹ್ನ ನಗರದ ಗಡಗಿ ಚನ್ನಪ್ಪ ವೃತ್ತ, ಹೆಚ್.ಆರ್ ಗವಿಯಪ್ಪ ವೃತ್ತದಲ್ಲಿ ನಾಗೇಂದ್ರ ಬೆಂಬಲಿಗರು ಸಂಸದ ಉಗ್ರಪ್ಪ ಹಾಗೂ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರಹಾಕಿ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಜೊತೆಗೆ ಅವ್ಯಾಚ ಶಬ್ದಗಳಿಂದ ಬೈದು ಟಯರ್ ಸುಟ್ಟು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಜೊತೆಗೆ ಬಿ.ನಾಗೇಂದ್ರ ಅವರಿಗೆ ಸಚಿವಸ್ಥಾನ ಕೊಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಬಿ.ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 15 ರಿಂದ 30 ನಿಮಷಗಳ ಕಾಲ ಟ್ರಾಫಿಕ್ ಕಿರಿ-ಕಿರಿಯಾಯಿತು 

ಸುದ್ದಿ ಓದಿ